ತಡರಾತ್ರಿ ವಿಧಾನಸೌಧದ ಕಚೇರಿಯಲ್ಲಿ ಹೋಮ-ಹವನ ಮಾಡಿಸಿದ ಸಚಿವ ಎಸ್.ಅಂಗಾರ
Team Udayavani, Feb 4, 2021, 12:00 PM IST
ಬೆಂಗಳೂರು: ಇತ್ತೀಚೆಗಷ್ಟೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸುಳ್ಯ ಶಾಸಕ ಎಸ್.ಅಂಗಾರ ಅವರು ವಿಧಾನ ಸೌಧದ ಕಚೇರಿಯಲ್ಲಿ ಹೋಮ ಹವನ, ಪೂಜಾ ಕಾರ್ಯ ನೆರವೇರಿಸಿದರು.
ಬಂದರು ಹಾಗೂ ಮೀನುಗಾರಿಕಾ ಸಚಿವರಾಗಿರುವ ಎಸ್. ಅಂಗಾರ ಅವರು ತಡರಾತ್ರಿ ನೂತನ ಕಚೇರಿಯಲ್ಲಿ ಹೋಮ ನಡೆಸಿದ್ದರು. ನಾಲ್ವರು ಅರ್ಚಕರಿಂದ ಹೋಮ, ಹವನ ನಡೆದಿತ್ತು. ವಾಸ್ತು ಹೋಮ ಹಾಗೂ ಗಣ ಹೋಮ ನಡೆಸಿದ್ದರು.
ಇದನ್ನೂ ಓದಿ:ಮಂಗಳೂರು ಸಹಿತ 3 ಘಟಕ ನಷ್ಟದಲ್ಲಿ: ಅಂಗಾರ
ಇಂದು ಬೆಳಿಗ್ಗೆ ಕಚೇರಿಯಲ್ಲಿ ಪೂಜಾಕಾರ್ಯ ನೆರವೇರಿಸಿದರು. ವಿಧಾನಸೌಧ ಕಚೇರಿಯಲ್ಲಿ (252 ಹಾಗೂ 253A) ಪೂಜಾ ವಿಧಿ-ವಿಧಾನಗಳನ್ನು ನಡೆಸಿ ಆಶೀರ್ವಾದ ಕೋರಲಾಯಿತು. ನಾಡಿನ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ನಿಮ್ಮೆಲ್ಲರ ಶುಭಶೀರ್ವಾದ, ಭಗವಂತನ ಕೃಪೆ ಇರಲಿ ಎಂದು ಪ್ರಾರ್ಥಿಸಲಾಗಿದೆ ಎಂದು ಎಸ್. ಅಂಗಾರ ಹೇಳಿಕೊಂಡಿದ್ದಾರೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಎಸ್.ಅಂಗಾರ ಅವರ ಕಚೇರಿ ಪೂಜೆಗೆ ಆಗಮಿಸಿದ್ದರು. ಕಚೇರಿ ಪೂಜೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಎಸ್ ಅಂಗಾರ ಭಾವುಕರಾದರು. ನನಗೆ ದೇವರ ಮೇಲೆ ನಂಬಿಕೆಯಿದೆ. ದೇವರ ಅನುಗ್ರಹ ಬೇಕು. ಹಾಗಾಗಿಯೇ ಹೋಮ ಮಾಡಿಸಿದೆ ಎಂದು ಅವರು ಹೇಳಿದರು.
ಆತ್ಮೀಯರು, ಸಜ್ಜನರು, ಕರಾವಳಿಯ ಬಂಗಾರ ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವರಾದ ಶ್ರೀ @AngaraSBJP ಅವರ ವಿಧಾನ ಸೌಧದ ಆಡಳಿತ ಕಚೇರಿಯ ಪೂಜೆಯಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು. pic.twitter.com/rG7bef7O9n
— Kota Shrinivas Poojari (@KotasBJP) February 4, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಂಇಎಸ್ ವಿಚಾರದಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು: ಸಿದ್ದರಾಮಯ್ಯ
ಕನ್ನಡಿಗರಿಗೆ ತೊಂದರೆಯಾದರೆ ಕರ್ನಾಟಕ ಸರ್ಕಾರ ಸಹಿಸಿಕೊಳ್ಳುವುದಿಲ್ಲ: ಸಿಎಂ ಬೊಮ್ಮಾಯಿ
ರಾಜ್ಯದ 8 ರಾಜಕೀಯ ಪಕ್ಷಗಳಿಗೆ ಗೇಟ್ಪಾಸ್: ಚುನಾವಣ ಆಯೋಗ
ಸಿದ್ದುಗೆ ಕಿಚ್ಚಿಟ್ಟ ಮೂಲ; “ಆರೆಸ್ಸೆಸ್ನವರು ಮೂಲ ಭಾರತದವರೇ?’ ಹೇಳಿಕೆಗೆ ಆಕ್ರೋಶ
ರಾಜ್ಯಸಭೆಗೆ 3ನೇ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಚಿಂತನೆ