

Team Udayavani, Jun 8, 2024, 9:46 PM IST
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಪ್ರತಿನಿಧಿಸಿರುವ ಕ್ಷೇತ್ರದಲ್ಲಾಗಿರುವ ಹಿನ್ನಡೆ ಬಗ್ಗೆ ಸಚಿವ ಸತೀಶ ಜಾರಕಿಹೊಳಿ ಅಸಮಾಧಾನ ಮುಂದುವರಿದಿದ್ದು, “ಅಲ್ಲಿ (ಅಥಣಿಯಲ್ಲಿ) ಅವರಿಂದ ಕಡಿಮೆಯಾಯ್ತೋ ಅಥವಾ ಕಾರ್ಯಕರ್ತರಿಂದ ಹಿನ್ನಡೆಯಾಯ್ತೋ ಇದಕ್ಕೆ ಅವರೇ (ಲಕ್ಷ್ಮಣ ಸವದಿ) ಉತ್ತರಿಸಬೇಕು’ ಎಂದು ತೀಕ್ಷ್ಣವಾಗಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಮುನ್ನಡೆ ಸಿಕ್ಕಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಥಣಿಯಲ್ಲಿ 70 ಸಾವಿರ ಲೀಡ್ ಬಂದಿತ್ತು. ಅಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಹಿನ್ನಡೆಯಾಗಿದೆ. ಚುನಾವಣೆಗೆ ಸವದಿ ಪಾತ್ರ ಕಡಿಮೆ ಇತ್ತು. ಇದರಿಂದ ಒಳೇಟು ಬಿದ್ದಿದೆ ಅಂತಾ ಅನಿಸುತ್ತಿದೆ. ಅವರಿಂದ ಕಡಿಮೆಯಾಯ್ತೋ ಇಲ್ಲ ಕಾರ್ಯಕರ್ತರಿಂದಲೇ ಕಡಿಮೆಯಾಯ್ತೋ ಎಂಬುದನ್ನು ಸ್ವತಃ ಅವರೇ ಉತ್ತರ ಕೊಡಬೇಕು’ ಎಂದು ತಿಳಿಸಿದರು. ಬಿಜೆಪಿ, ಜೆಡಿಎಸ್ ಮೈತ್ರಿ, ಜಾತಿ ಸಮೀಕರಣದಿಂದಾಗಿ ಕಡಿಮೆ ಸ್ಥಾನ ಬಂದಿದೆ. ಇದರ ಬಗ್ಗೆ ನಾವು ಚರ್ಚಿಸಬೇಕಿದೆ. ಮುಂದೆ ಏನು ಮಾಡಬೇಕು ಎಂದು ಸಮಾಲೋಚನೆ ಮಾಡಲಾಗುವುದು ಎಂದರು.
Ad
ಅಕ್ರಮ ಬಾಂಗ್ಲಾ ವಲಸಿಗರ ಗಡೀಪಾರು ಪ್ರಕ್ರಿಯೆ ನಿರಂತರ: ಡಾ.ಪರಮೇಶ್ವರ್
ನಾಳೆ ರಾಹುಲ್ ಜತೆ ಸಿಎಂ, ಡಿಸಿಎಂ ಸಭೆ: ಮೇಲ್ಮನೆ ಆಯ್ಕೆಗೆ ಒಪ್ಪಿಗೆ ಪಡೆವ ಸಾಧ್ಯತೆ
ನಟ ದರ್ಶನ್ ಆ್ಯಂಡ್ ಗ್ಯಾಂಗ್ ಕೇಸ್ ರೀತಿ ಮತ್ತೆರಡು ಭೀಭತ್ಸ ಕೃತ್ಯ!
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಇಲ್ಲ: ಆರ್.ಅಶೋಕ್
ಸರಕಾರದಿಂದ 250 ಕೋಟಿ ರೂ. ಬಾಕಿ: ರಾಜ್ಯವ್ಯಾಪಿ ಅಕ್ಕಿ ಲಾರಿ ಮುಷ್ಕರ
ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ
ಮೈದುಂಬಿದೆ ಬೆಳ್ಕಲ್ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ
ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್ ದಯಾಳ್ ವಿರುದ್ಧ FIR ದಾಖಲು
Tragedy: ಶಾಲಾ ಬಸ್ಸಿಗೆ ರೈಲು ಢಿಕ್ಕಿ… ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃ*ತ್ಯು
ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್
You seem to have an Ad Blocker on.
To continue reading, please turn it off or whitelist Udayavani.