ಗ್ರಾಮೀಣ-ಕೃಷಿ ವರದಿಗಾರಿಕೆ ಎಂದರೆ ಸಂಸ್ಕೃತಿ -ಅಭಿವೃದ್ಧಿಯ ಅನಾವರಣ- ಸುನಿಲ್‌ಕುಮಾರ್
Team Udayavani, May 26, 2022, 9:29 PM IST
ಬೆಂಗಳೂರು: ಗ್ರಾಮೀಣ ಹಾಗೂ ಕೃಷಿ ವರದಿಗಾರಿಕೆ ಎಂದರೆ ಕೃಷಿ ಮತ್ತು ಗ್ರಾಮೀಣ ಸಂಸ್ಕೃತಿ ಹಾಗೂ ಅಭಿವೃದ್ಧಿಯ ಅನಾವರಣ ಎಂದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಎಂ.ಮಂಜುನಾಥ್ ಬಮ್ಮನಕಟ್ಟಿಯ “ಗ್ರಾಮೀಣ ವರದಿಗಾರಿಕೆ’ ಹಾಗೂ ಚಿನ್ನಸ್ವಾಮಿ ವಡ್ಡಗೆರೆ ಅವರು ಬರೆದ “ಸುದ್ದಿ ಮಾಧ್ಯಮದಲ್ಲಿ ಕೃಷಿ ಒಂದು ನೋಟ’ ಕೃತಿಗಳ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ಕೃಷಿ ವರದಿಗಾರಿಕೆಯಲ್ಲಿ ಸಮಸ್ಯೆಗಳಷ್ಟೇ ಅಲ್ಲ ಅಭಿವೃದ್ಧಿಯೂ ಬೆಳಕಿಗೆ ಬರಬೇಕು ಎಂದು ಪ್ರತಿಪಾದಿಸಿದರು.
ಗ್ರಾಮೀಣ ಪ್ರದೇಶದ ಜನಸಾಮಾನ್ಯರ ಬದುಕು, ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ತಿಳಿದಿರುವುದು ಗ್ರಾಮೀಣ ಪತ್ರಕರ್ತರಿಗೆ. ಸಮಸ್ಯೆಗಳ ಜತೆಗೆ ಸಾಧನೆಗೂ ಆದ್ಯತೆ ಸಿಗಬೇಕು. ಅಭಿವೃದ್ಧಿ ಕುರಿತ ವರದಿಗಳು ಹೆಚ್ಚು ಪ್ರಕಟವಾಗಬೇಕು. ಇದರಿಂದಾಗಿ ರೈತರಿಗೂ ಪ್ರೋತ್ಸಾಹ ನೀಡಿದಂತೆಗುತ್ತದೆ ಎಂದು ಪ್ರತಿಪಾದಿಸಿದರು.
ಸ್ವಾತಂತ್ರ ಹೋರಾಟದಲ್ಲಿ ಕರ್ನಾಟಕದ ಕೊಡುಗೆಯನ್ನು ತಿಳಿಸುವ ಉದ್ದೆಶವನ್ನು ಹೊಂದಿರುವ ಅಮೃತಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮಕ್ಕೆ ಕರ್ನಾಟಕ ಮಾಧ್ಯಮ ಅಕಾಡೆಮಿಯು ಕೈಜೋಡಿಸಬೇಕು. ಜತೆಗೆ ಪ್ರತಿ ಜಿಲ್ಲೆಗಳಲ್ಲಿಯೂ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಹಿನ್ನೆಲೆ ಬರಹಗಾರರ ಶಿಬಿರಗಳನ್ನು ನಡೆಸಬೇಕು. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಹೇಳಿದರು.
ತಾವೂ ಸಹ ಪತ್ರಕರ್ತನಾಗಿ ಜೀವನ ಆರಂಭಿಸಿದ್ದು ಪತ್ರಕರ್ತರ ಸಮಸ್ಯೆಗಳ ಬಗ್ಗೆ ನನಗೂ ಗೊತ್ತಿದೆ. ಅಕಾಡೆಮಿ ವತಿಯಿಂದ ಗ್ರಾಮೀಣ ಹಾಗೂ ಕೃಷಿ ವರದಿಗಾರಿಕೆ ಕುರಿತು ಉಪಯುಕ್ತ ಕೃತಿ ಪ್ರಕಟಿಸುತ್ತಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
ಪತ್ರಕರ್ತರಾದ ಗಾಣಧಾಳು ಶ್ರೀಕಂಠ ಅವರು ಸುದ್ದಿ ಮಾಧ್ಯಮದಲ್ಲಿ ಕೃಷಿ ಒಂದು ನೋಟ ಪುಸ್ತಕ ಕುರಿತು ಹಾಗೂ ಮಲ್ಲಿಕಾರ್ಜುನ ಸಿದ್ದಣ್ಣನವರ್ ಅವರು ಗ್ರಾಮೀಣ ವರದಿಗಾರಿಕೆ ಕೃತಿ ಬಗ್ಗೆ ಮಾತನಾಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಕೆ.ಸದಾಶಿವ ಶೆಣೈ ಪ್ರಸ್ತಾವಿಕ ಭಾಷಣ ಮಾಡಿದರು. ಮಾಜಿ ಅಧ್ಯಕ್ಷ ಎಂ.ಸಿದ್ದರಾಜು, ಲೇಖಕ ಚಿನ್ನಸ್ವಾಮಿ ವಡ್ಡಗೆರೆ, ಅಕಾಡೆಮಿ ಕಾರ್ಯದರ್ಶಿ ರೂಪಾ, ಸದಸ್ಯರಾದ ಶಿವಾನಂದ ತಗಡೂರು, ಎಸ್.ಲಕ್ಷ್ಮಿನಾರಾಯಣ, ಕಂ.ಕ.ಮೂರ್ತಿ, ಬದ್ರುದ್ದೀನ್, ಶಿವಕುಮಾರ ಬೆಳ್ಳಿತಟ್ಟೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಸದ ವಾಹನದಲ್ಲಿ ಕೆಂಪೇಗೌಡರ ಭಾವಚಿತ್ರ ಮೆರವಣಿಗೆ: ಉಗ್ರ ಹೋರಾಟದ ಎಚ್ಚರಿಕೆ
ಪೌರ ಕಾರ್ಮಿಕರನ್ನು ಖಾಯಂ ಮಾಡಿ ; ಇಲ್ಲದಿದ್ದರೆ ಜುಲೈ 1 ರಿಂದ ಕೆಲಸ ಸ್ಥಗಿತ
ಕೆಂಪೇಗೌಡರ ಆಶಯ ಈಡೇರಿಸುತ್ತಿರುವ ಪ್ರಧಾನಿ ಮೋದಿ: ನಳಿನ್ಕುಮಾರ್ ಕಟೀಲ್
ಸಾಗರ : ಅಗ್ನಿಪಥ್ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ, 50 ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ
ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ;ಲಕ್ಷ್ಮಣ ನಿಂಬರಗಿ, ಹರಿರಾಂ ಶಂಕರ್ ಸೇರಿ ಹಲವರ ವರ್ಗಾವಣೆ