ತತ್ವಪದದಲ್ಲಿ ಶರೀಫರು ಜೀವಂತ: ಸಚಿವ ಸುನಿಲ್ ಕುಮಾರ್
Team Udayavani, Jul 4, 2022, 12:26 AM IST
ಬೆಂಗಳೂರು: ಸಂತ ಶಿಶುನಾಳ ಶರೀಫರು ತಮ್ಮ ತತ್ವಪದಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶರೀಫರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತತ್ವಪದಗಳ ಮೂಲಕ ಶರೀಫರು ಆವತ್ತಿನ ಕಾಲಘಟ್ಟದಲ್ಲೇ ಸಮ ಸಮಾ ಜದ ನಿರ್ಮಾಣದ ಕನಸು ಕಂಡರು. ಆ ಹಿನ್ನೆಲೆಯಲ್ಲೆ ಗೀತೆಗಳ ಮೂಲಕ ಸಮಾಜದ ಅಂಕುಡೊಂಕನ್ನು ತಿದ್ದುವ ಕೆಲಸ ಮಾಡಿದ್ದರು ಹಾಗೂ ಮಾನವ ಸಂಬಂಧಗಳನ್ನು ಬೆಸೆಯುವ ಕೆಲಸವನ್ನು ಮಾಡಿದ್ದರು ಎಂದರು.
ತಪ್ಪು ಹುಡುಕುವುದರಲ್ಲೆ
ಕಾಲ ಕಳೆಯುತ್ತೇವೆ
ಬೇಲಿಮಠದ ಪೀಠಾಧ್ಯಕ್ಷ ಶಿವರುದ್ರ ಸ್ವಾಮೀಜಿ ಮಾತನಾಡಿ, ನಾವೆಲ್ಲ ವಿದ್ಯಾವಂತ ಬುದ್ಧಿವಂತರು. ನಮ್ಮ ಬೌದ್ಧಿಕ ಕ್ಷಮತೆ ತುಂಬಾ ಚೆನ್ನಾಗಿದೆ. ಇಡೀ ವಿಶ್ವವನ್ನೇ ಆವರಿಸುವಂತಹ ಬೌದ್ಧಿಕ ಸಾಮರ್ಥ್ಯ ನಮ್ಮಲ್ಲಿದೆ. ಆದರೆ ಅಂತರ್ ನೋಟದ ಅರಿವು ನಮ್ಮಲ್ಲಿ ಇಲ್ಲವಾಗಿದೆ. ಇನ್ನೊಬ್ಬರ ತಪ್ಪುಗಳನ್ನು ಹುಡುಕುವುದರಲ್ಲೆ ನಾವು ಕಾಲ ಕಳೆಯುತ್ತೆವೆ. ಆದರೆ, ನಮ್ಮ ತಪ್ಪುಗಳ ಬಗ್ಗೆ ನಮಗೆ ಅರಿವಿರುವುದಿಲ್ಲ. ನಮ್ಮ ಬುದುಕು ಹೇಗಿರಬೇಕು ಎಂಬುದರ ಬಗ್ಗೆ ಶಿಶುನಾಳ ಶರೀಫರು ಮಾರ್ಗದರ್ಶನ ನೀಡುತ್ತಾರೆ ಎಂದರು.
ತತ್ವ ರಸಾಯನವನ್ನು ಜಗತ್ತಿಗೆ ಹರಡಿದ್ದಾರೆ
ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಾತನಾಡಿ, ಸಂತ ಶಿಶುನಾಳ ಶರೀಫರು ದೊಡ್ಡ ದಾರ್ಶನಿಕರಾಗಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿಯ ತತ್ವವನ್ನು ರಸಾಯನ ಮಾಡಿ ಸಾಹಿತ್ಯ ಪದಗಳ ಮೂಲಕ ಜಗದಗಲಕ್ಕೂ ಪಸರಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾವರ್ಕರ್ ದೇಶಪ್ರೇಮಿ ಎಂದು ಯಾಕೆ ಕರೆಯಬೇಕು?: ಸಿದ್ದರಾಮಯ್ಯ
ಫಿಬಾ U-18 ಮಹಿಳಾ ಏಷ್ಯನ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ಗೆ ಸಕಲ ಸಿದ್ಧತೆ
ಯಡಿಯೂರಪ್ಪ ಅವರನ್ನು ಸಿಎಂ ಎಂದು ಘೋಷಿಸಲಿ: ಎಂ.ಬಿ ಪಾಟೀಲ್ ಸವಾಲು
ದಾವಣಗೆರೆ: ಪ್ರಿಯಕರನೊಂದಿಗೆ ಬೆಂಗಳೂರಿನ ವಿವಾಹಿತೆ ಕೆರೆಯಲ್ಲಿ ಆತ್ಮಹತ್ಯೆ
ಸಿದ್ದರಾಮಯ್ಯರಿಗೆ ಮಡಿಕೇರಿಯಲ್ಲೂ ಪ್ರತಿಭಟನೆಯ ಬಿಸಿ: ಕಾಂಗ್ರೆಸ್ ನಿಂದ ಪ್ರತಿರೋಧ