
ಚರ್ಚೆಗೆ ಗ್ರಾಸವಾದ ಸಚಿವರ ಸಮಾಗಮ
Team Udayavani, Jul 3, 2020, 7:01 AM IST

ಬೆಂಗಳೂರು: ಚಿಕ್ಕಮಗಳೂರಿನಲ್ಲಿ ಬುಧವಾರ ರಾತ್ರಿ ಸಚಿವ ಅಶೋಕ್ ಅವರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ ಸೇರಿ ಇತರರು ಪಾಲ್ಗೊಂಡಿದ್ದರು. ಬುಧವಾರ ರಾತ್ರಿ ಸಚಿವ ಜಗದೀಶ ಶೆಟ್ಟರ್ ಕೂಡ ಚಿಕ್ಕಮಗಳೂರಿನಲ್ಲೇ ವಾಸ್ತವ್ಯ ಹೂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಬುಧವಾರ ಅಶೋಕ್ ಅವರ ಹುಟ್ಟು ಹಬ್ಬವಿದ್ದ ಕಾರಣ ಚಿಕ್ಕಮಗಳೂರಿನಲ್ಲಿ ರಾತ್ರಿ ತಂಗಿದ್ದರು. ಶಾಸಕ ಸತೀಶ್ ರೆಡ್ಡಿ, ಮಾಜಿ ಶಾಸಕ ಎಸ್.ಮುನಿರಾಜು ಇತರರಿದ್ದ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ ಕೂಡ ಪಾಲ್ಗೊಂಡಿದ್ದರು. ಬುಧವಾರ ಸಂಜೆ ಶಿವಮೊಗ್ಗದಲ್ಲಿದ್ದ ಶೆಟ್ಟರ್ ರಾತ್ರಿ ಚಿಕ್ಕಮಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು ಚರ್ಚೆಗೆ ಗ್ರಾಸವಾಗಿತ್ತು.
ಆದರೆ ಆರ್.ಅಶೋಕ್, ಜಗದೀಶ ಶೆಟ್ಟರ್ ಅವರು ಪರಸ್ಪರ ಭೇಟಿಯಾಗಿಲ್ಲ ಎಂದು ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿ ದ್ದಾರೆ. ಅಲ್ಲದೇ ಪ್ರತ್ಯೇಕ ಸಭೆ ನಡೆಸಿದ್ದಾರೆ ಎಂಬುದು ಊಹಾಪೋಹ ಎಂದಿದ್ದಾರೆ. ಆರ್.ಅಶೋಕ್, ಜಗದೀಶ ಶೆಟ್ಟರ್ ತಮ್ಮ ಅಧಿಕೃತ ಕಾರ್ಯ ಕ್ರಮದಡಿ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದರು. ಇದನ್ನೂ ಮೀರಿ ಊಹಾಪೋಹದಿಂದ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಸಿ.ಟಿ. ರವಿ ಹೇಳಿದರು.
ಟಾಪ್ ನ್ಯೂಸ್
