
ಅಧಿಕಾರಕ್ಕಾಗಿ ಯಡಿಯೂರಪ್ಪ ಮುಂದೆ ಕೈಚಾಚಿ ನಿಲ್ಲುವ ಅಯೋಗ್ಯ ರಾಜಕಾರಣಿ ನಾನಲ್ಲ: ಯತ್ನಾಳ್
ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ 20 ಶಾಸಕರ ಸಭೆ
Team Udayavani, May 29, 2020, 12:38 PM IST

ಬೆಂಗಳೂರು: ಮಾಜಿ ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಬಿಜೆಪಿ ಶಾಸಕರು ನಡೆಸಿದ ಸಭೆ ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಆ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದ ಶಾಸಕರು ಯಾವುದೇ ಬಂಡಾಯ, ಭಿನ್ನಮತದ ಚಟುವಟಿಕೆ ನಡೆಸಿಲ್ಲ ಎಂದು ಸಮರ್ಥನೆ ನೀಡಲಾರಂಭಿಸಿದ್ದಾರೆ.
ಉತ್ತರ ಕರ್ನಾಟಕದ ಶಾಸಕರೊಂದಿಗೆ ಗುರುವಾರ ರಾತ್ರಿ ಊಟ ಮಾಡಿದ್ದೇವೆ. ಆದರೆ ರಾಜಕೀಯದ ಬಗ್ಗೆ ಚರ್ಚಿಸಿಲ್ಲ.ಮೊನ್ನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದಾಗ ಕಳೆದ ವಾರದ ಭೋಜನ ಕೂಟದ ಬಗ್ಗೆ ತಿಳಿಸಲಾಗಿತ್ತು. ಹಾಗೆಯೇ ಸಹೋದರ ರಮೇಶ್ ಕತ್ತಿಯನ್ನು ಹಿಂದೆ ಕೊಟ್ಟ ಮಾತಿನಂತೆ ರಾಜ್ಯಸಭೆಗೆ ನೇಮಕ ಮಾಡುವಂತೆ ಕೋರಲಾಗಿದೆ. ಉಳಿದಂತೆ ಯಾವುದೇ ಬಂಡಾಯ ಚಟುವಟಿಕೆ ನಡೆಸಿಲ್ಲ ಎಂದು ಉಮೇಶ್ ಕತ್ತಿ ತಿಳಿಸಿದ್ದಾರೆ.
ಮತ್ತೊಬ್ಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಮ್ಮ ನಾಯಕರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ. ನಾನು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿರುವವರೆಗೆ ನಾನು ಸಚಿವನಾಗುವುದಿಲ್ಲ. ಅಧಿಕಾರಕ್ಕಾಗಿ ಯಡಿಯೂರಪ್ಪ ಅವರ ಮುಂದೆ ಕೈಚಾಚಿ ನಿಲ್ಲುವ ಅಯೋಗ್ಯ ರಾಜಕಾರಣಿ ನಾನಲ್ಲ. ಹಾಗೆಂದು ಯಡಿಯೂರಪ್ಪ ಅವರ ವಿರುದ್ಧ ಬಂಡಾಯ ಏಳುವುದಿಲ್ಲ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought: 223 ತಾಲೂಕುಗಳ ರೈತರಿಗೆ ತಲಾ 2 ಸಾವಿರ ರೂ.ಬರ ಪರಿಹಾರ- ಸಿಎಂ

Education: ಉದ್ಯಮಿಗಳ ಜತೆಗೂಡಿ ಕೌಶಲಾಧಾರಿತ ಪಠ್ಯಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ರಾಷ್ಟ್ರೋತ್ಥಾನ ಪರಿಷತ್‌ನಿಂದ “ತಪಸ್”, “ಸಾಧನಾ” ಪ್ರವೇಶ ಪರೀಕ್ಷೆಗೆ ಆಹ್ವಾನ

Census: ದೇಶದಲ್ಲೇ ಮೊದಲ ಬಾರಿಗೆ ಗಣತಿ ನಡೆಸಿದ್ದು ನಾನು: ಸಿಎಂ ಸಿದ್ದರಾಮಯ್ಯ

Karnataka: ಉಚಿತ ಅಕ್ಕಿ- ವಿಪಕ್ಷಗಳಿಗೆ ಸಿಎಂ ಚಾಟಿ