

Team Udayavani, Apr 21, 2018, 11:28 AM IST
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯಿಲ್ಲ. ಹೀಗಾಗಿ ಈ ಬಾರಿ ಕಾಂಗ್ರೆಸ್ ಮತ್ತೆ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಐದು ವರ್ಷ ನೀಡಿದ ಜನಪರ ಆಡಳಿತದಿಂದ ರಾಜ್ಯದ ಜನತೆ ಸಮಾಧಾನ ಹೊಂದಿದ್ದಾರೆ.
ಬಿಜೆಪಿ ಆಡಳಿತ ಇರುವ ಮಹಾರಾಷ್ಟ್ರ ಹಾಗೂ ಮಧ್ಯ ಪ್ರದೇಶದಲ್ಲಿ ರೈತರು ಸರ್ಕಾರದ ಧೋರಣೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದು ಸುಳ್ಳು ಹೇಳುತ್ತಿರುವುದು ರಾಜ್ಯದ ಜನತೆಗೆ ಗೊತ್ತಾಗಿದೆ.
ಹೀಗಾಗಿ ಏನೂ ಪ್ರಯೋಜನವಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಂದು 10 ಪಸೆಂìಟೇಜ್ ಸರ್ಕಾರ ಎಂದು ಸುಳ್ಳು ಆರೋಪ ಮಾಡಿ ಜನರ ದಾರಿ ತಪ್ಪಿಸುವ ಪ್ರಯತ್ನ ನಡೆಸಿದರು. ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ ಎಂದರು.
ಸ್ಟಾರ್ ಪ್ರಚಾರಕರು: ನಾಮಪತ್ರ ಸಲ್ಲಿಕೆ ನಂತರ ಸಿನೆಮಾ ನಟರಾದ ಚಿರಂಜೀವಿ, ಖುಷೂº, ನಗ್ಮಾ, ರಾಜಬಬ್ಬರ್, ನವಜೋತ್ ಸಿಂಗ್ ಸಿಧು ಸೇರಿ ಪಕ್ಷದ ಅನೇಕ ರಾಷ್ಟ್ರೀಯ ನಾಯಕರು ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಪ್ರಚಾರಕ್ಕೆ ಕರೆಸುವ ಪ್ರಯತ್ನ ನಡೆದಿದೆ. ಆದರೆ, ಇನ್ನೂ ಅಂತಿಮವಾಗಿಲ್ಲ. ಪ್ರಿಯಾಂಕಾ ಗಾಂಧಿ ಅವರನ್ನು ಕರೆಸುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದರು.
Ad
ಅಕ್ರಮ ಬಾಂಗ್ಲಾ ವಲಸಿಗರ ಗಡೀಪಾರು ಪ್ರಕ್ರಿಯೆ ನಿರಂತರ: ಡಾ.ಪರಮೇಶ್ವರ್
ನಾಳೆ ರಾಹುಲ್ ಜತೆ ಸಿಎಂ, ಡಿಸಿಎಂ ಸಭೆ: ಮೇಲ್ಮನೆ ಆಯ್ಕೆಗೆ ಒಪ್ಪಿಗೆ ಪಡೆವ ಸಾಧ್ಯತೆ
ನಟ ದರ್ಶನ್ ಆ್ಯಂಡ್ ಗ್ಯಾಂಗ್ ಕೇಸ್ ರೀತಿ ಮತ್ತೆರಡು ಭೀಭತ್ಸ ಕೃತ್ಯ!
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಇಲ್ಲ: ಆರ್.ಅಶೋಕ್
ಸರಕಾರದಿಂದ 250 ಕೋಟಿ ರೂ. ಬಾಕಿ: ರಾಜ್ಯವ್ಯಾಪಿ ಅಕ್ಕಿ ಲಾರಿ ಮುಷ್ಕರ
ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ
ಮೈದುಂಬಿದೆ ಬೆಳ್ಕಲ್ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ
ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್ ದಯಾಳ್ ವಿರುದ್ಧ FIR ದಾಖಲು
Tragedy: ಶಾಲಾ ಬಸ್ಸಿಗೆ ರೈಲು ಢಿಕ್ಕಿ… ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃ*ತ್ಯು
ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್
You seem to have an Ad Blocker on.
To continue reading, please turn it off or whitelist Udayavani.