
ಸದ್ಯಕ್ಕೆ ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಇಲ್ಲ : ಲಕ್ಷ್ಮಣ ಸವದಿ
Team Udayavani, Jul 6, 2021, 2:22 PM IST

ಮೈಸೂರು : ಸದ್ಯಕ್ಕೆ KSRTC ಬಸ್ ದರ ಏರಿಕೆ ಇಲ್ಲ. ಕೋವಿಡ್ ನಿಂದ ನಿಗಮಕ್ಕೆ ನಷ್ಟ ಆಗಿರೋದು ಸತ್ಯ. ಆದರೆ ಜನರು ಸಹ ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಈ ವೇಳೆ ಬಸ್ ಟಿಕೆಟ್ ಗಳ ದರ ಏರಿಕೆ ಸದ್ಯಕ್ಕೆ ಬೇಡ ಎಂದು ತೀರ್ಮಾನಿಸಿದ್ದೇವೆ ಎಂದು ಮೈಸೂರಿನಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿಕೆ ನೀಡಿದ್ದಾರೆ.
ಮತ್ತೊಮ್ಮೆ ನೌಕರರ ಮುಷ್ಕರದ ಎಚ್ಚರಿಕೆ ವಿಚಾರವಾಗಿ ಮಾತನಾಡಿದ ಅವರು, 9 ಬೇಡಿಕೆಯಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ವೇತನ ಪರಿಷ್ಕರಣೆ ಸದ್ಯದ ಪರಿಶೀಲನೆ ಆಗಲ್ಲ. ಸರ್ಕಾರಕ್ಕೆ ಬರುತ್ತಿರುವ ಹಣ ನಿಗಮದ ನಿರ್ವಹಣೆಗೆ ಕಷ್ಟ ಇದೆ. ಹಾಗಾಗಿ ಸದ್ಯಕ್ಕೆ ವೇತನ ಹೆಚ್ಚಳ ಕಷ್ಟ ಎಂದರು.
ಇನ್ನು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಘಿ ಪ್ರತಿಕ್ರಿಯೆ ನೀಡಿದ ಸವದಿ, ಅದು ಕೆಲ ಶಾಸಕರ ವೈಯಕ್ತಿಕ ಅಭಿಪ್ರಾಯ ಅಷ್ಟೇ. ಆದರೆ ಹೈಕಮಾಂಡ್ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಕೆಲವರು ಅಲ್ಲಿ ಇಲ್ಲಿ ಮಾತನಾಡುತ್ತಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷದ ಅಭಿಪ್ರಾಯ ಅಲ್ಲ ಎಂದುರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Daily Horoscope: ವಿಶ್ರಾಂತಿ ಎಂಬ ಶಬ್ದಕ್ಕೂ ನಿಮಗೂ ದೂರ

Government ಉಡುಪಿ ಜಿಲ್ಲೆಯಲ್ಲಿ ಚಪ್ಪಲಿ ಖರೀದಿಗೆ ಆದ್ಯತೆ

Egg ಹೊರೆ ಹೆತ್ತವರ ಹೆಗಲಿಗೆ? ಮೊಟ್ಟೆಗೆ ಅಧಿಕ ಬೇಡಿಕೆ, ಸಾಕಾಗದ ಅನುದಾನ

Paddy ಇಳುವರಿ ಕುಸಿತ? ತುಂಗಭದ್ರಾ,ಕಾವೇರಿ ತೀರದಲ್ಲಿ ನೀರಿಲ್ಲದೆ ಭತ್ತ ಬೆಳೆಗೆ ಸಂಕಷ್ಟ

Viral News; ಗುಜರಾತ್ ಕಡಲಿನಲ್ಲಿ ಕಾಣಿಸಿಕೊಂಡ ಸಿಂಹದ ಚಿತ್ರ: ಅಸಲಿಯತ್ತೇನು?