ಮಳವಳ್ಳಿ ; ಸಾವಿನಲ್ಲೂ ಒಂದಾದ ರೈತ ದಂಪತಿ
Team Udayavani, Aug 4, 2018, 12:11 PM IST
ಮಳವಳ್ಳಿ: ಪತಿ ಸಾವನ್ನಪ್ಪಿ ಐದೇ ನಿಮಿಷಕ್ಕೆ ಆಘಾತದಿಂದ ಪತ್ನಿ ಸಾವನ್ನಪ್ಪಿದ ದುಃಖಕರ ಘಟನೆ ಮಳವಳ್ಳಿಯ ಹುಲ್ಲಹಳ್ಳಿ ಎಂಬಲ್ಲಿ ನಡೆದಿದೆ.
ಹೊಂಬೇಗೌಡ (70)ಎನ್ನುವವರಿಗೆ ತೀವ್ರ ಹೊಟೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಪತ್ನಿ ನೀರು ಕುಡಿಸಿದ್ದು ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಪತಿಯ ಸಾವನ್ನು ಕಂಡ ಪತ್ನಿ ಮಂಜಮ್ಮ (60) ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ದಂಪತಿಗಳನ್ನು ಕಳೆದುಕೊಂಡು ಮನೆಯವರು ಮತ್ತು ನೆರೆಕೆರೆಯವರು ತೀವ್ರ ಕಣ್ಣೀರಿಡುತ್ತಿದ್ದಾರೆ.