

Team Udayavani, Feb 13, 2017, 3:45 AM IST
ಶೃಂಗೇರಿ: ಇಲ್ಲಿನ ಶ್ರೀ ಶಾರದಾ ಪೀಠದಲ್ಲಿ ನಡೆಯುತ್ತಿದ್ದ ಕುಂಭಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ಕೋಟಿ ಕುಂಕುಮಾರ್ಚನೆಯೊಂದಿಗೆ ಮುಕ್ತಾಯಗೊಂಡಿತು. ಶ್ರೀ ಶಾರದಾಂಬಾ ರಥೋತ್ಸವವು ಸೋಮವಾರ ಬೆಳಗ್ಗೆ
ನಡೆಯಲಿದ್ದು, ಉಭಯ ಜಗದ್ಗುರುಗಳು ರಥೋತ್ಸವದಲ್ಲಿ ಪಾಲ್ಗೊಳ್ಳುವರು. ಕಳೆದ 15 ದಿನಗಳಿಂದ ಶ್ರೀ ಮಠದಲ್ಲಿ
300 ಕ್ಕೂ ಹೆಚ್ಚು ಋತ್ವಿಜರಿಂದ ನಡೆಯುತ್ತಿದ್ದ ಹೋಮ, ಹವನಗಳು ಭಾನುವಾರ ಮುಕ್ತಾಯಗೊಂಡಿದೆ. ಶ್ರೀ
ಶಾರದಾಲಯ ಸ್ವರ್ಣ ಶಿಖರದ ಕುಂಭಾಭಿಷೇಕದ ನಿಮಿತ್ತವಾಗಿ ಶ್ರೀಮಠದಲ್ಲಿ ಗಾಯತ್ರಿ ಹೋಮ, ಲಕ್ಷ ಮೋದಕ ಗಣಪತಿ ಹೋಮ, ಹನ್ನೆರಡು ದಿನಗಳ ಕಾಲ ನಡೆದ ಅತಿರುದ್ರಮಹಾಯಾಗ, ಸಹಸ್ರ ಚಂಡಿಕಾ ಮಹಾಯಾಗ ನಡೆಯಿತು. ಭಾನುವಾರ ಶ್ರೀ ಶಾರದಾ ಸನ್ನಿಧಿಯಲ್ಲಿ ನಡೆಯುತ್ತಿದ್ದ ಕೋಟಿ ಕುಂಕುಮಾರ್ಚನೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಬೆಳಗ್ಗೆ ಉಭಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಬೆಳಗ್ಗೆ ಶ್ರೀ ಶಾರದಾ ಚಂದ್ರಮೌಳೇಶ್ವರ ಪೂಜೆ ನೆರವೇರಿಸಿದರು. ನಂತರ ಶ್ರೀ ಮಠದ ಹೊರ ಪ್ರಾಂಗಣ ಹಾಗೂ ಒಳ ಪ್ರಾಂಗಣದ ಎಲ್ಲಾ ದೇವಸ್ಥಾನಗಳಿಗೆ ಜಗದ್ಗುರುಗಳು ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಶ್ರೀ ಶಾರದಾ ಸನ್ನಿಧಿಯಲ್ಲಿ ನಡೆಯುತ್ತಿದ್ದ ಕೋಟಿ ಕುಂಕುಮಾರ್ಚನೆಯ ಕೊನೆಯ ದಿನದ ಕಲಾಪದಲ್ಲಿ ಪಾಲ್ಗೊಂಡರು.
Ad
ಜನೌಷಧಿ ಕೇಂದ್ರ ಮುಚ್ಚುವ ಆದೇಶಕ್ಕೆ ಹೈಕೋರ್ಟ್ ತಡೆ
ದ್ವೇಷಭರಿತ ಹೇಳಿಕೆ ಪ್ರಕರಣ: ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಬಂಧನಕ್ಕೆ ಹೈಕೋರ್ಟ್ ತಡೆ
Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು
Dharwad: ಆಂಗ್ಲ ಮಾದ್ಯಮ ಶಾಲೆ ಆರಂಭಿಸುವುದು ಕೈಬಿಡಿ… ಸರ್ಕಾರಕ್ಕೆ ಕವಿಸಂ ಆಗ್ರಹ
Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ
You seem to have an Ad Blocker on.
To continue reading, please turn it off or whitelist Udayavani.