ಗ್ರಾಮಾಭಿವೃದ್ಧಿಗೆ ಮಾದರಿಯಾದ ಪಂಚಾಯಿತಿಗಳು..


Team Udayavani, Mar 1, 2021, 12:09 PM IST

ಗ್ರಾಮಾಭಿವೃದ್ಧಿಗೆ ಮಾದರಿಯಾದ ಪಂಚಾಯಿತಿಗಳು..

ರಾಜ್ಯದಲ್ಲಿ ಈಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ಸರ್ಕಾರದ ವತಿಯಿಂದ ತರಬೇತಿ ಕಾರ್ಯಾಗಾರ ಆರಂಭವಾಗಿದೆ. ಈ ಬೆನ್ನಲ್ಲೇ ಹಿಂದಿನ ಸಾಲಿನಲ್ಲಿ ರಾಜ್ಯದಲ್ಲಿ ಉತ್ತಮ ಸಾಧನೆ ತೋರಿ ವಿವಿಧ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಕೆಲವು ಮಾದರಿ ಗ್ರಾಮ ಪಂಚಾಯಿತಿಗಳನ್ನು ಪರಿಚಯಿಸುವ ವಿಶೇಷ ವರದಿ ಇಲ್ಲಿದೆ. ಮುಂದಿನ ಐದು ವರ್ಷಗಳಲ್ಲಿ ಈ ಮಾದರಿಯಲ್ಲೇ ಎಲ್ಲ ಗ್ರಾಮ ಪಂಚಾಯಿತಿಗಳು ಹೆಜ್ಜೆ ಇಡಲಿ ಎನ್ನುವುದು ಉದಯವಾಣಿ ಆಶಯ.

ತುಂಬಿ ತುಳುಕುತ್ತಿದೆ ಪ್ರಗತಿಯ ಕೊಡ :

ಬೆಳಗಾವಿ: ಪಶ್ವಿ‌ಮ ಘಟ್ಟದ ಸೆರಗಿನಲ್ಲಿರುವ ಖಾನಾಪುರ ತಾಲೂಕಿನ ನಂದಗಡ ಗಾತ್ರದಲ್ಲಿ ಸಣ್ಣಗ್ರಾಮ. ಆದರೆ ಸಾಧನೆಯಲ್ಲಿ ಬಹಳ ದೊಡ್ಡದು. ಸರ್ಕಾರದ ಯೋಜನೆಗಳನ್ನು ಯಾವ ರೀತಿ ಪರಿಣಾಮಕಾರಿಯಾಗಿ ಜಾರಿ ಮಾಡಬಹುದು. ಗ್ರಾಮದಜನರನ್ನು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಹೇಗೆ ಯಶಸ್ಸು ಸಾಧಿಸಬಹುದು ಎಂಬುದನ್ನುನಂದಗಡ ಗ್ರಾಪಂ ಮಾಡಿ ತೋರಿಸಿದೆ.

ನಂದಗಡ ಗ್ರಾಪಂ ಪ್ರಗತಿಯ ಜತೆಗೆ ತನ್ನ ಆಡಳಿತ ವೈಖರಿಗೂ ಆಧುನಿಕತೆ ಸ್ಪರ್ಶ ನೀಡಿದೆ. ಪಂಚಾಯಿತಿಆವರಣದಲ್ಲಿ ಮುಖ್ಯ ಕಟ್ಟಡ, ನೀರು ಶುದ್ಧೀಕರಣಘಟಕ, ರಾಜೀವ್‌ ಗಾಂಧಿ ಸೇವಾ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ವಾಹನಗಳ ನಿಲುಗಡೆಗೆ ಜಾಗವಿದೆ. ಇದಲ್ಲದೆ ಪಂಚಾಯಿತಿಯಿಂದ ದೇವಸ್ಥಾನ, ಸಮುದಾಯ ಭವನ, ಜಿಮ್‌, ಮಿನಿ ಬಸ್‌ ನಿಲ್ದಾಣ,ಅಧ್ಯಕ್ಷ, ಉಪಾಧ್ಯಕ್ಷರಿಗೆ ಪ್ರತ್ಯೇಕ ಕೊಠಡಿ, ಅತ್ಯಾಧುನಿಕ ಪೀಠೊಪಕರಣ ಅಳವಡಿಕೆ, ಹವಾನಿಯಂತ್ರಿತ ಸಭಾಂಗಣ ಸೌಲಭ್ಯ ಕಲ್ಪಿಸಲಾಗಿದೆ.

ವಾಕಿಟಾಕಿ ಸೌಲಭ್ಯ: ಅರಣ್ಯ ಪ್ರದೇಶವಾಗಿರುವದರಿಂದ ಇಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಇದೆ. ಇದಕ್ಕೂ ಪರಿಹಾರ ಕಂಡುಕೊಂಡಿರುವ ನಂದಗಡ ಗ್ರಾಪಂ ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ತನ್ನ ಸಿಬ್ಬಂದಿಗೆ ವಾಕಿಟಾಕಿಗಳನ್ನು ಕೊಟ್ಟಿದೆ. 9,500 ಜನಸಂಖ್ಯೆ ಇದ್ದು, 23 ವಾರ್ಡ್‌ಗಳಿವೆ.ಜನರಿಗೆ ಮೂಲಸೌಕರ್ಯ ಒದಗಿಸುವ ಕಾರ್ಯಕ್ಕೆ ಸಮಸ್ಯೆ ಬರಬಾರದು ಎಂದು ಪಂಚಾಯಿತಿಯಲ್ಲಿಸಹಾಯವಾಣಿ ಆರಂಭಿಸಲಾಗಿದೆ. ಜನರು ಸಹಾ ಯವಾಣಿಗೆ ಕರೆ ಮಾಡಿ ಸಮಸ್ಯೆಗಳನ್ನು ತಿಳಿಸಿದ ನಂತರ ಸ್ಪಂದಿಸಲು ಅಗತ್ಯ ಸಿಬ್ಬಂದಿ ವಾಕಿಟಾಕಿ ಬಳಸುತ್ತಿದ್ದಾರೆ.

ಕಟ್ಟಿಗೆ ಬ್ಯಾಂಕ್‌: ಖಾನಾಪುರ ತಾಲೂಕಿನಲ್ಲಿ ಕಟ್ಟಿಗೆಕೊರತೆ ಇದೆ. ಇದರಿಂದ ಅಂತ್ಯಕ್ರಿಯೆ ವೇಳೆ ಜನರು ಪರದಾಡುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಂದಗಡ ಪಂಚಾಯಿತಿಯಲ್ಲಿ ಕಟ್ಟಿಗೆ ಬ್ಯಾಂಕ್‌ ಮಾಡಲಾಗಿದ್ದು, ಜನರಿಗೆ ಕಟ್ಟಿಗೆ ಒದಗಿಸಲಾಗುತ್ತಿದೆ. ಈ ಯೋಜನೆ ರಾಜ್ಯದಲ್ಲೇ ಮೊದಲು ಎಂಬುದು ವಿಶೇಷ.

ಕೇಶವ ಆದಿ

ಹೆಮ್ಮನಹಳ್ಳಿ ಗ್ರಾಪಂ ರಾಜ್ಯಕ್ಕೇ ಮಾದರಿ :

ಮಂಡ್ಯ: ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ರಾಜ್ಯದಲ್ಲಿಯೇ ಮಾದರಿ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪಂಚಾಯಿತಿ ವ್ಯಾಪ್ತಿಗೆ ಹೆಮ್ಮನಹಳ್ಳಿ, ಕದಲೀಪುರ, ಯರಗನಹಳ್ಳಿ, ಹನುಮಂತಪುರ ಹಾಗೂ ಹುಳಗನಹಳ್ಳಿ ಸೇರಿ 5 ಕಂದಾಯ ಗ್ರಾಮಗಳು ಸೇರಿರುವ ಈ ಪಂಚಾಯಿತಿಗೆ 2015-16 ಹಾಗೂ 2017- 18ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಎರಡುವರ್ಷಗಳು ಪುರಸ್ಕಾರ ದೊರೆತಿದೆ. 2015-16ನೇಸಾಲಿನಲ್ಲಿ “ನಮ್ಮ ಗ್ರಾಮ ನಮ್ಮ ಯೋಜನೆ’ಯನ್ನುಸಮರ್ಪಕವಾಗಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ 10ಲಕ್ಷ ನಗದು ಬಹುಮಾನ ಬಂದಿದೆ. 2018-19ನೇಸಾಲಿನಲ್ಲಿ ಅತ್ಯುತ್ತಮ ಮಕ್ಕಳ ಸ್ನೇಹಿ ಪಂಚಾಯಿತಿ ಎಂಬ ರಾಷ್ಟ್ರೀಯ ಪುರಸ್ಕಾರ ದೊರೆತಿದೆ.

ಶುದ್ಧ ಕುಡಿಯುವ ನೀರಿನ ಘಟಕ: ಎಲ್ಲ ಗ್ರಾಮಗಳ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲೆ ಹಾಗೂ ಅಂಗನ ವಾಡಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಅಳವಡಿಸಲಾಗಿದೆ. ಇಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸದಸ್ಯರ ಅನುದಾನದಿಂದ ಲ್ಯಾಪ್‌ ಟಾಪ್‌ ವಿತರಿಸಲಾಗಿದೆ. ದಾನಿಗಳ ನೆರವಿನಿಂದ ಮಕ್ಕಳ ಕಲಿಕೆಗೆ ಬೇಕಾದ ಕಲಿಕಾ ಸಾಮಗ್ರಿಗಳನ್ನು ನೀಡಲಾಗಿದೆ.

ಉದ್ಯಾನ ನಿರ್ಮಾಣ, ಕುರ್ಚಿ, ಸಮವಸ್ತ್ರಗಳ ವಿತರಣೆ, ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗಿದೆ. ಯರಗನಹಳ್ಳಿ, ಹೆಮ್ಮನಹಳ್ಳಿ ಹಾಗೂ ಕದಲೀಪುರ ಗ್ರಾಮದಲ್ಲಿ ಕೇಂದ್ರೀಕೃತ ಸೋಲಾರ್‌ ಘಟಕ ಯೋಜನೆ ಮೂಲಕ ಸೋಲಾರ್‌ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ.

ಗ್ರಾಮಗಳ ಅಭಿವೃದ್ಧಿಗೆ ಕ್ರಮ: ಐದು ಗ್ರಾಮಗಳಅಭಿವೃದ್ಧಿಗೆ 15, 16ನೇ ಹಣಕಾಸು ಯೋಜನೆಯ ಅನುದಾನ, ಪಿಎಂಜಿಎಸ್‌ವೈ, ನರೇಗಾ ಸೇರಿ ವಿವಿಧಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಮೂಲಕ ಗ್ರಾಮಗಳಿಗೆ ಅಗತ್ಯವಾಗಿ ಬೇಕಾಗಿರುವ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗುತ್ತಿದೆ.

ಈಗಾಗಲೇ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ವಾರ್ಷಿಕ 12 ಲಕ್ಷ ರೂ. ತೆರಿಗೆ ಬರುತ್ತಿದ್ದು, ಇದರಿಂದಲೇ ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಅದರಲ್ಲೂ ಮೂಲ ಸೌಲಭ್ಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ವಿಶೇಷ ಅನುದಾನಗಳು ಬಂದರೆ ಇನ್ನೂ ಅಭಿವೃದ್ಧಿಯಾಗಲಿದೆ. ಲೀಲಾವತಿ, ಪಿಡಿಒ

-ಎಚ್‌.ಶಿವರಾಜು

ಕೈದಾಳೆ ಗ್ರಾಪಂನಲ್ಲಿ ಡಿಜಿಟಲ್‌ ಲೈಬ್ರರಿ :

ದಾವಣಗೆರೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಯುವ ಸಮುದಾಯದ ಜ್ಞಾನಾರ್ಜನೆ ಕೊರತೆ ನೀಗಿಸುವ ನಿಟ್ಟಿನಲ್ಲಿ ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಪಂ ಗ್ರಂಥಾಲಯಕ್ಕೆ ಡಿಜಿಟಲ್‌ ಸ್ಪರ್ಶ ನೀಡುವ ಮೂಲಕ ವಿದ್ಯಾರ್ಥಿ-ಓದುಗರಿಗೆ ಅನುಕೂಲ ಮಾಡಿಕೊಟ್ಟಿದೆ.

ಕೈದಾಳೆ ಗ್ರಾಪಂಗೆ ಹೊಂದಿಕೊಂಡಿರುವ ಡಿಜಿಟಲ್‌ಗ್ರಂಥಾಲಯ ಶಾಲಾ-ಕಾಲೇಜು ವಿದ್ಯಾರ್ಥಿಗಳುಮಾತ್ರವಲ್ಲ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ಸಮಗ್ರ ಮಾಹಿತಿ ಕೇಂದ್ರವಾಗಿದೆ. ಆಧುನಿಕ ಸ್ಪರ್ಶಹೊಂದಿರುವ ಜಿಲ್ಲೆಯ ಮೊದಲ ಗ್ರಾಮೀಣ ಗ್ರಂಥಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೊಡಗು ಜಿಲ್ಲೆಯ ಪಾಲಿಬೆಟ್ಟು ಗ್ರಾಪಂನಡಿಜಿಟಲ್‌ ಲೈಬ್ರರಿ ಬಗ್ಗೆ ಮಾಹಿತಿ ಹೊಂದಿದ್ದ ಪಿಡಿಓ ಐ.ಸಿ. ವಿದ್ಯಾವತಿ, ಕೈದಾಳೆ ಗ್ರಾಪಂನಲ್ಲೂ ಅತ್ಯಾಧುನಿಕಸೇವಾ ಸೌಲಭ್ಯದ ಗ್ರಂಥಾಲಯ ಪ್ರಾರಂಭಿಸುವ ಚಿಂತನೆಗೆ ಪೂರಕವಾಗಿ ಗ್ರಾಪಂ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು ಸಹಮತ ವ್ಯಕ್ತಪಡಿಸಿದರು. 2019-20ನೇ ಸಾಲಿನಲ್ಲಿ ಡಿಜಿಟಲ್‌ ಗ್ರಂಥಾಲಯ ಕ್ರಿಯಾ ಯೋಜನೆ ರೂಪಿಸಿ, ಜಿಪಂ ಹಾಗೂ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದುಕೊಂಡು “ನಮ್ಮ ಗ್ರಾಮ ನಮ್ಮ ಯೋಜನೆ’ಯಪುರಸ್ಕಾರ ರೂಪದಲ್ಲಿ ದೊರೆತ 3.5 ಲಕ್ಷ ರೂ.ಗಳನ್ನುಗ್ರಂಥಾಲಯಕ್ಕೆ ಅಗತ್ಯವಾದ ಕಂಪ್ಯೂಟರ್‌, ಪೀಠೊಪಕರಣ, ವಿದ್ಯುತ್‌ ಸಂಪರ್ಕ ಇತರೆಕಾಮಗಾರಿಗೆ ಬಳಸಿಕೊಳ್ಳಲಾಯಿತು. ಕಳೆದ ಜುಲೈನಲ್ಲಿಡಿಜಿಟಲ್‌ ಗ್ರಂಥಾಲಯ ಪ್ರಾರಂಭಿಸಲಾಯಿತು.

ಏನೇನು ಸೌಲಭ್ಯವಿದೆ?: ಡಿಜಿಟಲ್‌ ಲೈಬ್ರರಿಯಲ್ಲಿ ಕಂಪ್ಯೂಟರ್‌, ಲ್ಯಾಪ್‌ಟಾಪ್‌, 1 ಟ್ಯಾಬ್‌, ಇಂಟರ್‌ನೆಟ್‌, ವೈಫೈ ಸೌಲಭ್ಯ ಒದಗಿಸಲಾಗಿದೆ. ಈವರೆಗೆ 384 ಓದುಗರು ನೋಂದಣಿಯಾಗಿದ್ದಾರೆ. ಅಂತರ್ಜಾಲದಲ್ಲಿನ ಗ್ರಂಥಾಲಯ ಲಿಂಕ್‌ ಬಳಸಿಕೊಂಡಲ್ಲಿ 60ಸಾವಿರದಷ್ಟು ಪುಸ್ತಕ ಲಭ್ಯವಾಗಲಿವೆ. ಸ್ಪರ್ಧಾತ್ಮಕಪರೀಕ್ಷೆ ಒಳಗೊಂಡಂತೆ ವಿವಿಧ ಅರ್ಜಿ ಸಲ್ಲಿಕೆಗೂ ಇಲ್ಲಿ ಅವಕಾಶವಿದೆ.

ಗ್ರಾಮೀಣ ಭಾಗದಲ್ಲಿವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಬೇಕು ಎಂಬ ಸದುದ್ದೇಶದಿಂದಲೈಬ್ರರಿ ಪ್ರಾರಂಭಿಸಲಾಯಿತು. “ನಮ್ಮ ಗ್ರಾಮ ನಮ್ಮ ಯೋಜನೆ’ಯ ಪುರಸ್ಕಾರ ಮೊತ್ತ 3.5 ಲಕ್ಷ ರೂ. ಬಳಸಿಕೊಂಡು ಆಧುನಿಕ ಸ್ಪರ್ಶ ನೀಡಲಾಯಿತು. – ಐ.ಸಿ. ವಿದ್ಯಾವತಿ, ಪಿಡಿಒ

-ರಾ. ರವಿಬಾಬು

ಐಎಸ್‌ಮಾನ್ಯತೆ ಪಡೆದ ಗ್ರಾಮ ಪಂಚಾಯಿತಿ :

ಬೆಳ್ತಂಗಡಿ: ತಾಲೂಕಿನ ಲಾೖಲ ಗ್ರಾಪಂ ಹಲವು ಮೊದಲುಗಳಿಂದ ಗುರುತಿಸಿಕೊಂಡಿದೆ. ಆಡಳಿತ ವ್ಯವಸ್ಥೆಗೆ ರಾಜ್ಯದಲ್ಲೇ ಮೊದಲು ಐಎಸ್‌ಒ (2016ರಲ್ಲಿ) ಮಾನ್ಯತೆ ಪಡೆದ ಲಾೖಲ ಗ್ರಾ.ಪಂ. ಆಗಿದೆ.

ಈಗಾಗಲೇ ಕೇಂದ್ರ ಸರಕಾರದಿಂದ ನಿರ್ಮಲ ಗ್ರಾಮ ಪುರಸ್ಕಾರವನ್ನು ಪಡೆದು ಗ್ರಾಮವನ್ನು ಸ್ವತ್ಛತೆಯೆಡೆಗೆ ಕೊಡೊಯ್ಯುವಲ್ಲಿ ಸಫಲತೆ ಕಂಡಿದೆ. ಈ ಸಂಸ್ಥೆ ಲಾೖಲ ಗ್ರಾಪಂ ಸೇಫ್ಟಿ ನ್ಯಾಪ್‌ಕಿನ್‌ ತಯಾರಿಕಾ ಘಟಕವನ್ನು ಅಳವಡಿಸಿಕೊಂಡಿದೆ. ಸ್ವಚ್ಛತೆಯಲ್ಲಿ ಇನ್ನೊಂದು ಹೆಜ್ಜೆ ಮುಂದಿರಿಸಿದ ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಬಿಪಿಎಲ್‌ ಕುಟುಂಬಗಳಿಗೆ, ಪ.ಜಾತಿ, ಪ.ಪಂಗಡದ ಕುಟುಂಬಗಳಿಗೆ ಉಚಿತವಾಗಿ ಪೈಪು ಕಾಂಪೋಸ್ಟ್‌ ಅಳವಡಿಸಿ ತಾಲೂಕಿಗೆ ಪ್ರಥಮ ಪಂಚಾಯತ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಗರಿಮೆಗೆ ದ.ಕ. ಜಿ.ಪಂ. ವತಿಯಿಂದ “ರಾಷ್ಟ್ರೀಯ ಸ್ವತ್ಛತಾ ಆಂದೋಲನಾ ಸಪ್ತಾಹ 2015-16′ ಪ್ರಶಸ್ತಿ ನೀಡಿ ಗೌರವಿಸಿದೆ.

ನಿರ್ಮಲ ಗ್ರಾಮ ಪುರಸ್ಕಾರ ಪಡೆದ ಲಾೖಲ ಗ್ರಾಪಂನ ಆಯಾಯ ಪ್ರದೇಶದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳ ವಿಧ, ಪ್ರಮಾಣಕ್ಕೆ ಅನುಗುಣವಾಗಿ ಸರಳ ಮಿತವ್ಯಯ ವೈಜ್ಞಾನಿಕ ನಿರ್ವಹಣೆಗೆ ಲಾೖಲ ಗ್ರಾಪಂ ಘನ ತ್ಯಾಜ್ಯವಿಲೇವಾರಿಗಾಗಿ 9.00 ಲಕ್ಷ ರೂ. ನ ವೆಚ್ಚದಲ್ಲಿ ಕಸವಿಲೇವಾರಿ ಪ್ರಕ್ರಿಯೆ ನಿರ್ವಹಿಸುತ್ತಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಸೌಧಗಳನ್ನು ಕಟ್ಟಲಾಗಿದ್ದು,ಅದರಲ್ಲಿ ಪ್ಲಾಸ್ಟಿಕ್‌, ಕಬ್ಬಿಣ ಮತ್ತು ಕರಗುವ ಕಸಗಳನ್ನುಪ್ರತ್ಯೇಕವಾಗಿಸಿ ಗೊಬ್ಬರ ತಯಾರಿಸಲಾಗುತ್ತಿದೆ.ಈ ಗೊಬ್ಬರವನ್ನು ಸಾವಯವ ಗೊಬ್ಬರವಾಗಿಸಿಲಾೖಲ ಗೋಲ್ಡ್‌ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಕೆ.ಜಿ.ಗೆ 8 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ನಬಾರ್ಡ್‌ ವತಿಯಿಂದ ರಾಷ್ಟ್ರಮಟ್ಟದಲ್ಲಿ “ನಬಾರ್ಡ್‌ ಅವಾರ್ಡ್‌ ಫಾರ್‌ರೂರಲ್‌ ಇನೋವೇಷನ್ಸ್‌ – 2012′ ಅಂತಿಮ ಹಂತದಲ್ಲಿ ಆಯ್ಕೆಯಾದ ದೇಶದ 30 ಅತ್ಯುತ್ತಮಸಂಶೋಧನಾ ಸಂಸ್ಥೆಗಳಲ್ಲಿ ಜಿಲ್ಲೆಯ ಏಕೈಕ ಸರ್ಕಾರಿಸಂಸ್ಥೆಯಾಗಿ ಲಾೖಲ ಗ್ರಾ.ಪಂ.ನ ಸೇಫ್ಟಿ ನ್ಯಾಪ್‌ಕಿನ್‌ ತಯಾರಿಕಾ ಘಟಕವಾಗಿರುತ್ತದೆ.

ನ್ಯಾಪ್‌ ಕಿನ್‌ ಘಟಕ :

ಭಾರತದ ಗ್ರಾಮೀಣ ಭಾಗದಲ್ಲಿ ಶೇ.22-25 ಹೆಣ್ಣು ಮಕ್ಕಳು ಮಾತ್ರ ನ್ಯಾಪ್‌ ಕಿನ್‌ ಪ್ಯಾಡ್‌ ಬಳಸುತ್ತಿದ್ದು, ಈ ಹಿನ್ನೆಲೆಯಲ್ಲಿ ದ.ಕ.ಜಿ.ಪಂ., ನಬಾರ್ಡ್‌, ತಾ.ಪಂ. ಬೆಳ್ತಂಗಡಿ, ಐಸಿರಿ ಸ್ವಸಹಾಯ ಸಂಘ ಲಾೖಲಮತ್ತು ವಿಮುಕ್ತಿ ಲಾೖಲ ಇವರ ಸಹಯೋಗ ದೊಂದಿಗೆ8,53,750 ರೂ. ವೆಚ್ಚದಲ್ಲಿ ರಾಸಾಯನಿಕ ಮುಕ್ತ ಸ್ಯಾನಿಟರಿ ನ್ಯಾಪ್‌ ಕಿನ್‌ಗಳನ್ನು ತಯಾರಿಸುವ ಘಟಕವನ್ನು ಪ್ರಾರಂಭಿಸಿದ ಗ್ರಾಮೀಣ ಶ್ರೇಷ್ಠತಾ ಕಾರ್ಯ ಪಂಚಾಯತ್‌ಗೆ ಸಲ್ಲುತ್ತದೆ.

-ಚೈತ್ರೇಶ್‌ ಇಳಂತಿಲ

ಆದಾಯ ತರುವ ತ್ಯಾಜ್ಯ ಸಂಪನ್ಮೂಲ ಕೇಂದ್ರ :

ಬೆಳ್ತಂಗಡಿ: ಗ್ರಾಮ ಸ್ವರಾಜ್ಯ ಕನಸು ಸಾಕಾರಗೊಳ್ಳ ಬೇಕಾದಲ್ಲಿ ಗ್ರಾಮಸ್ಥರಿಂದಲೇ ನೂತನ ಪ್ರಯೋಗಗಳು ಸಾಕಾರಗೊಳ್ಳಬೇಕು. ಆಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಭಾಗಿತ್ವದಲ್ಲಿ ಗ್ರಾಮದ ಕಲ್ಪನೆ ಇದ್ದಲ್ಲಿ ಅಭಿವೃದ್ಧಿಶೀಲ ಚಿಂತನೆಗಳಿಗೆ ಕೊರತೆ ಯಾಗದು ಎಂಬುದಕ್ಕೆ ಉಜಿರೆ ಗ್ರಾಪಂ ಸಾಕ್ಷಿಯಾಗಿದೆ.

ತ್ಯಾಜ್ಯ ಸಂಪನ್ಮೂಲ ಘಟಕ: 18 ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹಾಗೂ 4,500ರಷ್ಟು ಮನೆ ಹೊಂದಿರುವ ಉಜಿರೆ ಗ್ರಾಪಂ ಪಟ್ಟಣದಂತೆ ಅಭಿವೃದ್ಧಿಯಲ್ಲಿ ವೇಗ ಪಡೆಯುತ್ತಿದೆ. ಇದರ ಮಧ್ಯೆ ತ್ಯಾಜ್ಯ ನಿರ್ವಹಣೆಯೂ ಸವಾಲಾಗುತ್ತಿರುವುದನ್ನು ಪರಿಗಣಿಸಿ ಕಳೆದ 10 ವರ್ಷಗಳ ಉಜಿರೆ ಗ್ರಾಮದ ಇಜ್ಜಾಲ ಎಂಬಲ್ಲಿಸ.ನಂ.172 ಹಾಗೂ 564ರಲ್ಲಿರುವ 1.60 ಎಕರೆಸ್ಥಳದಲ್ಲಿ ತ್ಯಾಜ್ಯ ಸಂಪನ್ಮೂಲ ಘಟಕ ಕಾರ್ಯನಿರ್ವಹಿಸುತ್ತಿದೆ. 30 ಸೆಂಟ್ಸ್‌ ಜಾಗದಲ್ಲಿ 4,000ಕ್ಕಿಂತ ಅಧಿಕ ಚದರ ಅಡಿಯ ಕಟ್ಟಡವನ್ನು ನಿರ್ಮಿಸಲಾಗಿದೆ. ವ್ಯವಸ್ಥಿತ ರಸ್ತೆ ಸಂಪರ್ಕವನ್ನೂ ರಚಿಸಲಾಗಿದೆ.

ಫಲವತ್ತಾದ ಗೊಬ್ಬರ ಜತೆಗೆ ಆದಾಯ: ಬಾಟಲಿ, ಬಟ್ಟೆ, ಚಪ್ಪಲಿ, ಎಲೆಕ್ಟ್ರಾನಿಕ್‌, ಫ್ಯಾನ್ಸಿ ಮೊದಲಾದ ವಸ್ತು ಗಳ ತ್ಯಾಜ್ಯದಿಂದ ಪ್ರತ್ಯೇಕಿಸಿ ಇಡಲು ಬೇರೆ ಬೇರೆ ಕೋಣೆಗಳ ನಿರ್ಮಿಸಲಾಗಿದೆ. ತರಕಾರಿ, ಆಹಾರ,ಹಣ್ಣು ಮೊದಲಾದ ತ್ಯಾಜ್ಯಗಳಿಂದ ಫಲವತ್ತಾದ ಸಾವ ಯವ ಗೊಬ್ಬರ ತಯಾರಿಸಲಾಗುತ್ತಿದೆ. ಕೆ.ಜಿ.ಒಂದಕ್ಕೆ ಗರಿಷ್ಠ 8 ರೂ.ಗೆ ಗೊಬ್ಬರವನ್ನುಮಾರಾಟ ಮಾಡಲಾಗುತ್ತಿದೆ. ತ್ಯಾಜ್ಯ ಪರಿಷ್ಕರಣೆಯಿಂದ 2ಲಕ್ಷ ರೂ., ಕಸ ಸಂಗ್ರಹದಿಂದ 8ಲಕ್ಷ ರೂ. ಆದಾಯವನ್ನು. ನಿರೀಕ್ಷಿಸಲಾಗಿದ್ದು,ಪಂಚಾಯತ್‌ಗೆ ಕಸದಿಂದಲೂ ಆದಾಯ ತರುವಂತೆ ಮಾಡಿದೆ.

ಉಜಿರೆ ಜನ್ಯ ಕಸದಿಂದ ಆದಾಯ: ಇದೀಗ ಉಜಿರೆ ಜನ್ಯ ಎಂಬ ತ್ಯಾಜ್ಯ ಸಂಪನ್ಮೂಲ ಕೇಂದ್ರದ ಬ್ರ್ಯಾಂಡಿಂಗ್‌ ನಿರ್ಮಿಸಿದೆ. ಎಲ್ಲಾ ರೀತಿಯ ಕರಗುವ ತ್ಯಾಜ್ಯ ಒಗ್ಗೂಡಿಸಿ 60 ದಿನಗಳಲ್ಲಿ ಗೊಬ್ಬರ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದಕ್ಕಾಗಿ 5.ಕೆ.ಜಿ., 10 ಕೆ.ಜಿ., 25 ಕೆ.ಜಿ.ಯಂತೆ ಪ್ರತ್ಯೇಕಿಸಿ ದರ ನಿಗದಿ ಪಡಿಸಿದೆ.

ಕಳೆದ ನಾಲ್ಕು ವರ್ಷಗಳಿಂದ ಪಂಚಾಯತ್‌ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಸಹಕಾರದಲ್ಲಿ ಘಟಕ ಸ್ಥಾಪಿಸಲಾಗಿದೆ. ಪ್ರತಿಯೊಬ್ಬರೂ ತ್ಯಾಜ್ಯಸಂಗ್ರಹಕ್ಕೆ ಸಹಕರಿಸಿದರೆ ಉಜಿರೆಯನ್ನು ತ್ಯಾಜ್ಯ ಮುಕ್ತಗೊಳಿ ಸುವ ಉದ್ದೇಶ ನಮ್ಮದಾಗಿದೆ. ಪ್ರಕಾಶ್‌ ಶೆಟ್ಟಿ ನೊಚ್ಚ, ಪಿಡಿಓ

ಹುಸೇನಪುರ ಗ್ರಾಪಂ ಮೈಸೂರಿಗೆ ಮಾದರಿ :

ಹುಣಸೂರು: ಕೆ.ಆರ್‌.ಎಸ್‌ ಮತ್ತು ಲಕ್ಷ್ಮಣತೀರ್ಥ ಹಿನ್ನೀರಿಗೆ ಹೊಂದಿಕೊಂಡಿರುವ ಹುಣಸೂರು ತಾಲೂಕಿನ ಹುಸೇನಪುರ ಗ್ರಾಪಂ, ದೀನ ದಯಾಳ್‌ ಉಪಾಧ್ಯಾಯ ಪಂಚಾಯಿತಿ ಸಶಕ್ತೀಕರಣ ಪುರಸ್ಕಾರಕ್ಕೆ ಭಾಜನವಾಗಿ ಮೈಸೂರು ಜಿಲ್ಲೆಗೆ ಮಾದರಿಯಾಗಿದೆ.

ತಾಲೂಕಿನ ಬಿಳಿಕೆರೆ ಹೋಬಳಿಯ ಹುಸೇನಪುರ ಗ್ರಾಪಂ 2015ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಪಂಚಾಯ್ತಿಗೆ ತೆಂಕಲಕೊಪ್ಪಲು, ಕೆಂಪನಹಳ್ಳಿ, ಚೋಳನಹಳ್ಳಿ, ಹುಸೇನಪುರ, ಆರೋಹಳ್ಳಿ, ಕೊಮ್ಮೇಗೌಡನಕೊಪ್ಪಲು, ಆಯರಹಳ್ಳಿ ಮತ್ತು ಗೆರೆಸನಹಳ್ಳಿ ಸೇರಿ ಎಂಟುಗ್ರಾಮಗಳನ್ನು ಹೊಂದಿದ್ದು, ಏಳು ಸಾವಿರ ಜನಸಂಖ್ಯೆ ಹೊಂದಿದ್ದು, ಶೇ.99 ಜನರು ಕೃಷಿಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.

ರೈತರು ತರಕಾರಿ ಮತ್ತು ಪುಪ್ಪೋದ್ಯಮವನ್ನೇ ಕಾಯಕವನ್ನಾಗಿಸಿಕೊಂಡಿದ್ದು, ಆರ್ಥಿಕವಾಗಿ ಸಬಲ ರಾಗಿದ್ದಾರೆ. ಹುಸೇನಪುರ ಪಿಡಿಒ ಎಂ. ಛಾಯಾದೇವಿ ಅವಧಿಯಲ್ಲಿ ಈ ಸಾಧನೆಗೈದಿದ್ದು, ಇವರು ವಿಕಲಚೇತ ನರಾದರೂ ಕೆಲಸದಲ್ಲಿ ರಾಜಿ ಮಾಡಿಕೊಳ್ಳದ ಇವರು,ಅಂದಿನ ಪಂಚಾಯಿತಿ ಅಧ್ಯಕ್ಷೆ ಕಲ್ಯಾಣಮ್ಮ ಪುಟ್ಟರಾಮಯ್ಯ ಮತ್ತು ಉಪಾಧ್ಯಕ್ಷೆ ಧನಲಕ್ಷ್ಮೀಬಸವರಾಜ್‌ ಸೇರಿ 16 ಸದಸ್ಯರ ಬೆಂಬಲ ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ಕೇಂದ್ರ-ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಹತ್ತರ ಕಾರ್ಯ ಮಾಡಿದ್ದಾರೆ.

ಎಲ್ಲ ಪಂಚಾಯಿತಿಗಳಲ್ಲಿ ಕಂದಾಯ ವಸೂಲಿ ದೊಡ್ಡ ಸಮಸ್ಯೆ. ಆದರೆ ಗ್ರಾಮಸ್ಥರು ಪಂಚಾಯಿತಿಗೆಸಕಾಲಕ್ಕೆ 10,56,526ರೂ. ಗಳಲ್ಲಿ 10.50 ಲಕ್ಷದಷ್ಟು ಶೇ.95ರಷ್ಟು ಕಂದಾಯ ಪಾವತಿಸಿ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. 2018-19ನೇ ಸಾಲಿನಲ್ಲಿ ಹುಸೇನಪುರ ಪಂಚಾ ಯಿತಿಗೆ ಸಾರ್ವಜನಿಕರಿಂದ 33,44,668 ಲಕ್ಷ ರೂ. ಕಂದಾಯ ಸಂದಾಯವಾಗಿದೆ. ಇದರೊಂದಿಗೆ 14ನೇ ಹಣಕಾಸು ಯೋಜನೆಯಿಂದ ಪಂಚಾಯಿತಿಗೆ ಬಂದ ಅನುದಾನ ಬಳಸಿಕೊಂಡು ಅಭಿವೃದ್ಧಿಗೆ ಹೆಜ್ಜೆ ಹಾಕಿದ್ದರ ಫಲವಾಗಿ ಇಂದು ಪಂಚಾಯಿತಿಯು ರಾಷ್ಟ್ರಮಟ್ಟದಲ್ಲಿ ತನ್ನಕೀರ್ತಿ ಪತಾಕೆ ಹಾರಿಸುತ್ತಿದೆ.

ಸಂಪತ್‌ಕುಮಾರ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.