ಫಿಬಾ U-18 ಮಹಿಳಾ ಏಷ್ಯನ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್‌ಗೆ ಸಕಲ ಸಿದ್ಧತೆ


Team Udayavani, Aug 18, 2022, 6:40 PM IST

20–FIBA—U-18

ಬೆಂಗಳೂರು:  ಬೆಂಗಳೂರಿನಲ್ಲಿ ಸೆಪ್ಟೆಂಬರ್ 5 ರಿಂದ 11 ರವರೆಗೂ ಫಿಬಾ ಅಂಡರ್ 18 ಮಹಿಳಾ‌ ಏಷ್ಯನ್ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್ ಶಿಪ್ ನಡೆಯಲಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ  ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ನಡೆಯಲಿದೆ. ಭಾರತ, ಜಪಾನ್, ಚೀನಾ, ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಒಟ್ಟು 16 ತಂಡಗಳು ಭಾಗಿಯಾಗಲಿವೆ. ಈ ಕ್ರೀಡಾಕೂಟದಲ್ಲಿ  16 ಅಂತರಾಷ್ಟ್ರೀಯ ತಂಡಗಳ 192 ಕ್ರೀಡಾಪಟುಗಳು, 96 ಅಧಿಕಾರಿಗಳು, 100 ಸ್ವಯಂಸೇವಕರು ಭಾಗವಹಿಸಲಿದ್ದಾರೆ. ಈ ಕ್ರೀಡಾಕೂಟದಲ್ಲಿ ವಿಜೇತರಾದ ಮೊದಲ 4 ತಂಡಗಳು 2023ರ ಜುಲೈನಲ್ಲಿ ಸ್ಪೈನ್‌ನಲ್ಲಿ ನಡೆಯಲಿರುವ  ಅಂಡರ್- 19 ಮಹಿಳೆಯರ ಫಿಬಾ ವಿಶ್ವ ಕಪ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ ಎಂದು ತಿಳಿಸಿದರು.

ಈ ಕ್ರೀಡಾಕೂಟಕ್ಕೆ ಫೆಡರೇಶನ್ ಆಫ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಶನ್ ಮಾರ್ಗಸೂಚಿ ಪ್ರಕಾರ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದ್ದು, ನಮ್ಮ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯೂ ಈ ಟೂರ್ನಿಗೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುತ್ತಿದೆ. ಮುಕ್ತಾಯ ಸಮಾರಂಭ 11 ನೇ ತಾರೀಖಿನಂದು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಗೌರವಾನ್ವಿತ ರಾಜ್ಯಪಾಲರು, ಸನ್ಮಾನ್ಯ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಬೆಂಗಳೂರಿಗೆ ಈ ಕ್ರೀಡಾಕೂಟದ ಆತಿಥ್ಯವಹಿಸಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರಿಗೆ ಸಂತಸ ತಂದಿದೆ. ವಿಶ್ವದರ್ಜೆಯ ಯಾವುದೇ ಕ್ರೀಡಾಕೂಟವನ್ನು ಆಯೋಜಿಸಲು ನಾವು ಸಶಕ್ತರಾಗಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:  ಅತ್ಯಾಚಾರ ವಿರೋಧಿಸಿದ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ: 25 ಅಡಿ ಎತ್ತರದಿಂದ ತಳ್ಳಿದ ದುರುಳರು

ಇದೇ ವೇಳೆ ಇರಾನ್‌ನಲ್ಲಿ ನಡೆಯಲಿರುವ ಫಿಬಾ ಅಂಡರ್ 18 ಪುರುಷರ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಆಟಗಾರರಿಗೆ ಕಿಟ್‌ಗಳನ್ನು ನೀಡಿ ಶುಭ ಹಾರೈಸಿದರು.

ಇಂಡಿಯನ್ ಬ್ಯಾಸ್ಕೆಟ್ ಬಾಲ್ ಫೆಡರೇಷನ್ ಅಧ್ಯಕ್ಷ ಕೆ ಗೋವಿಂದರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ವರದಕ್ಷಿಣೆ ಕಿರುಕುಳ: ಹಲ್ಲೆ: ದೂರು ದಾಖಲು

ವರದಕ್ಷಿಣೆ ಕಿರುಕುಳ: ಹಲ್ಲೆ: ದೂರು ದಾಖಲು

ಭಾರತೀಯ ವಾಯುಪಡೆಯ ಪೂರ್ವ ಏರ್‌ ಕಮಾಂಡ್‌ಗೆ ಧಾರ್ಕರ್‌

ಭಾರತೀಯ ವಾಯುಪಡೆಯ ಪೂರ್ವ ಏರ್‌ ಕಮಾಂಡ್‌ಗೆ ಧಾರ್ಕರ್‌

ಕೇದಾರನಾಥದಲ್ಲಿ ಭಾರೀ ಹಿಮಪಾತ; ಯಾವುದೇ ಹಾನಿ ಸಂಭವಿಸಿಲ್ಲ

ಕೇದಾರನಾಥದಲ್ಲಿ ಭಾರೀ ಹಿಮಪಾತ; ಯಾವುದೇ ಹಾನಿ ಸಂಭವಿಸಿಲ್ಲ

ಬುಮ್ರಾ ವಿಶ್ವಕಪ್‌ನಿಂದ ಇನ್ನೂ ಹೊರಬಿದ್ದಿಲ್ಲ: ಗಂಗೂಲಿ

ಬುಮ್ರಾ ವಿಶ್ವಕಪ್‌ನಿಂದ ಇನ್ನೂ ಹೊರಬಿದ್ದಿಲ್ಲ: ಗಂಗೂಲಿ

ಶಿವಮೊಗ್ಗ: ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಗೆ ತಡೆಯಾಜ್ಞೆ ನೀಡಿದ  ಹೈಕೋರ್ಟ್‌

ಶಿವಮೊಗ್ಗ: ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಗೆ ತಡೆಯಾಜ್ಞೆ ನೀಡಿದ  ಹೈಕೋರ್ಟ್‌

ನ್ಯಾಶನಲ್‌ ಗೇಮ್ಸ್‌ ಲಾಂಗ್‌ಜಂಪ್‌: ಶ್ರೀಶಂಕರ್‌ಗೆ ಸೋಲು

ನ್ಯಾಶನಲ್‌ ಗೇಮ್ಸ್‌ ಲಾಂಗ್‌ಜಂಪ್‌: ಶ್ರೀಶಂಕರ್‌ಗೆ ಸೋಲು

ಸಾರಿಗೆ ನಿಗಮದ 36 ಸಾವಿರ ನೌಕರರಿಗೆ 1ನೇ ತಾರೀಕಿನಂದೇ ವೇತನ

ಸಾರಿಗೆ ನಿಗಮದ 36 ಸಾವಿರ ನೌಕರರಿಗೆ 1ನೇ ತಾರೀಕಿನಂದೇ ವೇತನ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿವಮೊಗ್ಗ: ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಗೆ ತಡೆಯಾಜ್ಞೆ ನೀಡಿದ  ಹೈಕೋರ್ಟ್‌

ಶಿವಮೊಗ್ಗ: ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಗೆ ತಡೆಯಾಜ್ಞೆ ನೀಡಿದ  ಹೈಕೋರ್ಟ್‌

ಸಾರಿಗೆ ನಿಗಮದ 36 ಸಾವಿರ ನೌಕರರಿಗೆ 1ನೇ ತಾರೀಕಿನಂದೇ ವೇತನ

ಸಾರಿಗೆ ನಿಗಮದ 36 ಸಾವಿರ ನೌಕರರಿಗೆ 1ನೇ ತಾರೀಕಿನಂದೇ ವೇತನ

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪ್ರಕಟ; 10 ಮಂದಿಗೆ ಗೌರವ ಪ್ರಶಸ್ತಿ

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪ್ರಕಟ; 10 ಮಂದಿಗೆ ಗೌರವ ಪ್ರಶಸ್ತಿ

ಕಳಸಾ-ಬಂಡೂರಿ ಯೋಜನೆಗೆ ನ.1ರಂದು ಶಂಕುಸ್ಥಾಪನೆ ಸಾಧ್ಯತೆ

ಕಳಸಾ-ಬಂಡೂರಿ ಯೋಜನೆಗೆ ನ.1ರಂದು ಶಂಕುಸ್ಥಾಪನೆ ಸಾಧ್ಯತೆ

ಜೋಡೋ ಯಾತ್ರೆಗೆ ಜನರ ಪ್ರತಿಕ್ರಿಯೆ ಬರುತ್ತಿಲ್ಲ: ಸಿಎಂ ಬೊಮ್ಮಾಯಿ

ಜೋಡೋ ಯಾತ್ರೆಗೆ ಜನರ ಪ್ರತಿಕ್ರಿಯೆ ಬರುತ್ತಿಲ್ಲ: ಸಿಎಂ ಬೊಮ್ಮಾಯಿ

MUST WATCH

udayavani youtube

ಮೂಳೂರಿನಲ್ಲಿ ತೊರಕೆ ಮೀನಿನ ಸುಗ್ಗಿ, ಮೀನುಗಾರರು ಫುಲ್ ಖುಷಿ ಮಾರ್ರೆ

udayavani youtube

ಉಚ್ಚಿಲದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಶತವೀಣಾವಲ್ಲರಿ ಕಾರ್ಯಕ್ರಮ

udayavani youtube

ಭಾಷಣ ಮಾಡದೆ… ಜನರ ಬಳಿ ಕ್ಷಮೆ ಕೇಳಿದ ಪ್ರಧಾನಿ ಮೋದಿ… ಕಾರಣ ಇಲ್ಲಿದೆ…

udayavani youtube

ದಿನ6| ಕಾತ್ಯಾಯಿನಿ ದೇವಿ|ಕಾತ್ಯಾಯಿನಿ ದೇವಿ ಪೂಜೆಯ ಪ್ರಯೋಜನವೇನು ಗೊತ್ತೇ. | Udayavani

udayavani youtube

ದಿನ 5| ಸ್ಕಂದ ಮಾತೆ | ಸ್ಕಂದ ಮಾತೆ ಪ್ರತಿಯೊಬ್ಬ ತಾಯಿಯ ಪ್ರತಿರೂಪ ಹೇಗೆ ? | Udayavani

ಹೊಸ ಸೇರ್ಪಡೆ

ವರದಕ್ಷಿಣೆ ಕಿರುಕುಳ: ಹಲ್ಲೆ: ದೂರು ದಾಖಲು

ವರದಕ್ಷಿಣೆ ಕಿರುಕುಳ: ಹಲ್ಲೆ: ದೂರು ದಾಖಲು

ಭಾರತೀಯ ವಾಯುಪಡೆಯ ಪೂರ್ವ ಏರ್‌ ಕಮಾಂಡ್‌ಗೆ ಧಾರ್ಕರ್‌

ಭಾರತೀಯ ವಾಯುಪಡೆಯ ಪೂರ್ವ ಏರ್‌ ಕಮಾಂಡ್‌ಗೆ ಧಾರ್ಕರ್‌

ಕೇದಾರನಾಥದಲ್ಲಿ ಭಾರೀ ಹಿಮಪಾತ; ಯಾವುದೇ ಹಾನಿ ಸಂಭವಿಸಿಲ್ಲ

ಕೇದಾರನಾಥದಲ್ಲಿ ಭಾರೀ ಹಿಮಪಾತ; ಯಾವುದೇ ಹಾನಿ ಸಂಭವಿಸಿಲ್ಲ

ಬುಮ್ರಾ ವಿಶ್ವಕಪ್‌ನಿಂದ ಇನ್ನೂ ಹೊರಬಿದ್ದಿಲ್ಲ: ಗಂಗೂಲಿ

ಬುಮ್ರಾ ವಿಶ್ವಕಪ್‌ನಿಂದ ಇನ್ನೂ ಹೊರಬಿದ್ದಿಲ್ಲ: ಗಂಗೂಲಿ

ಶಿವಮೊಗ್ಗ: ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಗೆ ತಡೆಯಾಜ್ಞೆ ನೀಡಿದ  ಹೈಕೋರ್ಟ್‌

ಶಿವಮೊಗ್ಗ: ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಗೆ ತಡೆಯಾಜ್ಞೆ ನೀಡಿದ  ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.