BBMP ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ HDK

ನಿಷ್ಠೆಯಿಂದ ಪಕ್ಷದ ಕೆಲಸ ಮಾಡಿ ಪಕ್ಷದ ಮುಖಂಡರಿಗೆ HDK ತಾಕೀತು

Team Udayavani, Jun 1, 2023, 9:40 PM IST

BBMP ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ HDK

ಬೆಂಗಳೂರು: ಮುಂಬರುವ ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರು ಮಹಾನಗರದ ಎಲ್ಲಾ 28 ಕ್ಷೇತ್ರಗಳ ಪ್ರಮುಖ ಮುಖಂಡರ ಜತೆ ಇಂದು ಮಹತ್ವದ ಸಮಾಲೋಚನೆ ನಡೆಸಿದರು.

ಬಿಡದಿಯ ತೋಟದಲ್ಲಿ ಕರೆದಿದ್ದ ಈ ಸಭೆಯಲ್ಲಿ ಪಕ್ಷ ಸಂಘಟನೆ ಹಾಗೂ ಪಾಲಿಕೆ ಚುನಾವಣೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಅವರು ಮುಖಂಡರಿಗೆ ಕೆಲ ಗಂಭೀರ ಸೂಚನೆಗಳನ್ನು ನೀಡಿದರು.

ವಿಧಾನಸಭೆ ಚುನಾವಣೆಯ ಸೋಲಿನ ಕಾರಣಗಳನ್ನು ಮುಂದಿಟ್ಟುಕೊಂಡು ಕೆಲ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಮುಖ್ಯಮಂತ್ರಿಗಳು; ಗುಂಪುಗಾರಿಕೆ ಬೇಡ, ಕೆಲಸ ಮಾಡುವವರಷ್ಟೇ ಬೇಕು, ಯಾವುದೇ ಕಾರಣಕ್ಕೂ ಗುಂಪುಗಾರಿಕೆ ಸಹಿಸುವ ಪ್ರಶ್ನೆ ಇಲ್ಲ. ಯಾರು ಯಾರನ್ನೂ ಮೆಚ್ಚಿಸುವ ರೀತಿಯಲ್ಲಿ ಕೆಲಸ ಮಾಡುವ ಅಗತ್ಯವಿಲ್ಲ, ಪಕ್ಷವನ್ನು ಇನ್ನೂ ಅಧೋಗತಿಗೆ ತಳ್ಳುವುದು ಬೇಡ. ಪಕ್ಷದ ನೆಲೆ ಇರುವ ವಾರ್ಡುಗಳಲ್ಲಿ ಉತ್ತಮವಾಗಿ ಕೆಲಸ ಮಾಡಿ. ಜನರ ಸಂಪರ್ಕದಲ್ಲಿರಿ ಹಾಗೂ ಅವರಲ್ಲಿ ವಿಶ್ವಾಸ ಮೂಡಿಸಿ ಎಂದು ತಾಕೀತು ಮಾಡಿದರು.

ಪ್ರತಿ ವಾರ್ಡಿನ, ಪ್ರತಿ ಮತಗಟ್ಟೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಬೆಳೆಸಿ, ಜನರು ಹೆಚ್ಚೆಚ್ಚು ಪಕ್ಷಕ್ಕೆ ಸೇರಿಸಿಕೊಳ್ಳುವ ವಾತಾವರಣವನ್ನು ಸೃಷ್ಟಿ ಮಾಡಿ. ಜನರಲ್ಲಿ ಪಕ್ಷದ ಪರ ಒಲವು ವ್ಯಕ್ತವಾಗುವ ರೀತಿಯಲ್ಲಿ ಕೆಲಸ ಮಾಡಿ ಎಂದು ಮಾಜಿ ಮುಖ್ಯಮಂತ್ರಿಗಳು ಮುಖಂಡರಿಗೆ ಕಿವಿಮಾತು ಹೇಳಿದರು.

ಯಾವುದೇ ಕ್ಷಣದಲ್ಲಿ ಬಿಬಿಎಂಪಿ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಚುನಾವಣೆ ಯಾವಾಗ ಬೇಕಾದರೂ ಬರಲಿ. ನಮ್ಮ ಸಿದ್ಧತೆಗಳನ್ನು ನಾವು ಮಾಡಿಕೊಳ್ಳೋಣ. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆ ಎನ್ನುವ ಅಧೈರ್ಯ ಬೇಡ. ಅನೇಕ ಸೋಲುಗಳನ್ನು ದಾಟಿಕೊಂಡು ಜೆಡಿಎಸ್ ಪಕ್ಷ ಫೀನಿಕ್ಸ್ ಪಕ್ಷಿಯಂತೆ ಮೇಲೆದ್ದು ಬಂದಿದೆ ಎಂದು ಮುಖಂಡರಿಗೆ ಸ್ಥೈರ್ಯ ತುಂಬಿದರು.

ಪಕ್ಷ ಸಂಘಟನೆ ದೃಷ್ಟಿಯಿಂದ ಕಠಿಣ ಸೂಚನೆಗಳನ್ನು ಕೊಟ್ಟ ಕುಮಾರಸ್ವಾಮಿ ಅವರು, ವಿಧಾನಸಭೆ ಚುನಾವಣೆ ವೈಫಲ್ಯಗಳಿಂದ ಪಾಠ ಕಲಿಯುವಂತೆ ಹೇಳಿದರಲ್ಲದೆ, ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಕೆ.ಎನ್.ತಿಪ್ಪೇಸ್ವಾಮಿ, ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ 28 ವಿಧಾನಸಭೆ ಕ್ಷೇತ್ರಗಳ ಪ್ರಮುಖ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಮಹಾಲಿಂಗಪುರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಆಸ್ತಿ ಪಾಸ್ತಿ ನಷ್ಟ

ಟಾಪ್ ನ್ಯೂಸ್

Manipal ಗಾಂಜಾ ಸೇವನೆ ಪ್ರಕರಣ: ಓರ್ವ ವಶಕ್ಕೆ

Manipal ಗಾಂಜಾ ಸೇವನೆ ಪ್ರಕರಣ: ಓರ್ವ ವಶಕ್ಕೆ

Uppunda ನಕಲಿ ಸಹಿ ಮಾಡಿ ಹಣ ದುರುಪಯೋಗ: ನಿವೃತ್ತ ಸಿಇಒ, ನಿರ್ದೇಶಕ ವಿರುದ್ಧ ದೂರು ದಾಖಲು

Uppunda ನಕಲಿ ಸಹಿ ಮಾಡಿ ಹಣ ದುರುಪಯೋಗ: ನಿವೃತ್ತ ಸಿಇಒ, ನಿರ್ದೇಶಕ ವಿರುದ್ಧ ದೂರು ದಾಖಲು

coffee, ಔಷಧೀಯ ಉತ್ಪನ್ನ, ಸಂಬಾರ ಪದಾರ್ಥ ಖರೀದಿಗೆ ಕ್ಯಾಂಪ್ಕೊ ಚಿತ್ತ

coffee, ಔಷಧೀಯ ಉತ್ಪನ್ನ, ಸಂಬಾರ ಪದಾರ್ಥ ಖರೀದಿಗೆ ಕ್ಯಾಂಪ್ಕೊ ಚಿತ್ತ

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Udupi ಮಾದಕ ವ್ಯಸನಮುಕ್ತ ಜಿಲ್ಲೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅತ್ಯಾವಶ್ಯಕ

Udupi ಮಾದಕ ವ್ಯಸನಮುಕ್ತ ಜಿಲ್ಲೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅತ್ಯಾವಶ್ಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

karnataka govt logo

Karnataka: ಒಂದೇ ದಿನ 26,000 ಆಸ್ತಿ ನೋಂದಣಿ- ಸರಕಾರಕ್ಕೆ 311 ಕೋಟಿ ರೂ. ಆದಾಯ

ramak

KVG ಶಿಕ್ಷಣ ಸಂಸ್ಥೆಗಳ ಎ.ಎಸ್‌. ರಾಮಕೃಷ್ಣ ಕೊಲೆ ಪ್ರಕರಣ- ಸಹೋದರ ಸೇರಿ 6 ಮಂದಿ ದೋಷಿ

h d kumaraswamy

NICE: ನೈಸ್‌ ಸಂತ್ರಸ್ತರಿಗೆ ಭೂಮಿ ಮರಳಿಸಲು ಬೃಹತ್‌ ಹೋರಾಟ:ಕುಮಾರಸ್ವಾಮಿ

high court karnataka

High Court: ಗುಂಪು ಗಲಭೆ ಸಂತ್ರಸ್ತರಿಗೆ ಪರಿಹಾರ ಹೆಚ್ಚಳ

devegouda

Politics: ಒಂದೇ ಕುಟುಂಬ ಅಧಿಕಾರದಲ್ಲಿ ಇರಬೇಕೆಂಬ ಕಾರಣಕ್ಕಾಗಿ ಕೈ ರಾಜಕಾರಣ: ದೇವೇಗೌಡ

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

karnataka govt logo

Karnataka: ಒಂದೇ ದಿನ 26,000 ಆಸ್ತಿ ನೋಂದಣಿ- ಸರಕಾರಕ್ಕೆ 311 ಕೋಟಿ ರೂ. ಆದಾಯ

Manipal ಗಾಂಜಾ ಸೇವನೆ ಪ್ರಕರಣ: ಓರ್ವ ವಶಕ್ಕೆ

Manipal ಗಾಂಜಾ ಸೇವನೆ ಪ್ರಕರಣ: ಓರ್ವ ವಶಕ್ಕೆ

ramak

KVG ಶಿಕ್ಷಣ ಸಂಸ್ಥೆಗಳ ಎ.ಎಸ್‌. ರಾಮಕೃಷ್ಣ ಕೊಲೆ ಪ್ರಕರಣ- ಸಹೋದರ ಸೇರಿ 6 ಮಂದಿ ದೋಷಿ

Uppunda ನಕಲಿ ಸಹಿ ಮಾಡಿ ಹಣ ದುರುಪಯೋಗ: ನಿವೃತ್ತ ಸಿಇಒ, ನಿರ್ದೇಶಕ ವಿರುದ್ಧ ದೂರು ದಾಖಲು

Uppunda ನಕಲಿ ಸಹಿ ಮಾಡಿ ಹಣ ದುರುಪಯೋಗ: ನಿವೃತ್ತ ಸಿಇಒ, ನಿರ್ದೇಶಕ ವಿರುದ್ಧ ದೂರು ದಾಖಲು

ಸೆ. 30: ಕಂಬಳ ಸಮಿತಿ ಸಭೆ: ದೇವಿಪ್ರಸಾದ ಶೆಟ್ಟಿ ಬೆಳಪು

Sept. 30: ಕಂಬಳ ಸಮಿತಿ ಸಭೆ: ದೇವಿಪ್ರಸಾದ ಶೆಟ್ಟಿ ಬೆಳಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.