Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ


Team Udayavani, Jun 17, 2024, 7:26 AM IST

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ನ ಹಲವು ಸದಸ್ಯರ ಮನೆಗಳಲ್ಲಿ ರವಿವಾರ ಮಹಜರು ನಡೆಸಿರುವ ಪೊಲೀಸರು, ಕೃತ್ಯ ನಡೆದ ಸಂದರ್ಭದಲ್ಲಿ “ಡಿ’ ಗ್ಯಾಂಗ್‌ ಸದಸ್ಯರು ಧರಿಸಿದ್ದ ಬಟ್ಟೆ, ಚಪ್ಪಲಿ ಸೇರಿ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಮಹಜರು ವೇಳೆ ಪವಿತ್ರಾ ಗೌಡ ಮುಗುಳು ನಗುತ್ತಿದ್ದುದು ಅಚ್ಚರಿ ಮೂಡಿಸಿದೆ.

ಆರೋಪಿಗಳ ಹೇಳಿಕೆ ದಾಖಲಿಸಿಕೊಂಡಿರುವ ಖಾಕಿ ಪಡೆ, ಕೃತ್ಯ ನಡೆದ ವೇಳೆ ಆರೋಪಿಗಳು ಧರಿಸಿದ್ದ ಬಟ್ಟೆ, ಚಪ್ಪಲಿಗಳನ್ನು ಜಪ್ತಿ ಮಾಡಿ ಸಾಕ್ಷ್ಯವನ್ನಾಗಿ ಪರಿಗಣಿಸಿದೆ. ಆರೋಪಿಗಳಾದ ಪವಿತ್ರಾ ಗೌಡ ಹಾಗೂ ಅವರ ಮನೆಯಲ್ಲಿ ಕೆಲಸಕ್ಕಿದ್ದ ಪವನ್‌ ಅವರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರ್‌.ಆರ್‌. ನಗರದಲ್ಲಿರುವ ಪವಿತ್ರಾ ಗೌಡ ನಿವಾಸಕ್ಕೆ ರವಿವಾರ ಕರೆ ತಂದು ಮಹಜರು ನಡೆಸಿದ್ದಾರೆ. ಮನೆಯ ಇಂಚಿಂಚೂ ಜಾಗವನ್ನೂ ಜಾಲಾಡಿರುವ ಖಾಕಿ, ಪ್ರಕರಣಕ್ಕೆ ಅಗತ್ಯವಿರುವ ಸಾಕ್ಷ್ಯ ಸಂಗ್ರಹಿಸಿದೆ.

ರೇಣುಕಸ್ವಾಮಿ ಕೊಲೆಯಾದ ದಿನ ಪವಿತ್ರಾ ಗೌಡ ಪಟ್ಟಣಗೆರೆ ಶೆಡ್‌ನಿಂದ ಆರ್‌ಆರ್‌ ನಗರದ ತಮ್ಮ ನಿವಾಸಕ್ಕೆ ಬಂದಿದ್ದರು. ಹೀಗಾಗಿ ಶೆಡ್‌ಗೆ ಹೋದಾಗ ಅವರು ಧರಿಸಿದ್ದ ಬಟ್ಟೆ, ರೇಣುಕಾಸ್ವಾಮಿಗೆ ಹಲ್ಲೆ ನಡೆಸಿದ್ದ ಚಪ್ಪಲಿ ವಶಪಡಿಸಿಕೊಳ್ಳಲಾಗಿದೆ. ಪವಿತ್ರಾ ಗೌಡಗೆ ಸೇರಿದ ವೋಕ್ಸ್‌ವ್ಯಾಗೆನ್‌ ಹಾಗೂ ರೇಂಜ್‌ ರೋವರ್‌ ಕಾರುಗಳನ್ನು ತಪಾಸಣೆ ನಡೆಸಲಾಗಿದೆ. ಇನ್ನು ಪವಿತ್ರಾಳ 3 ಅಂತಸ್ತಿನ ಐಷಾರಾಮಿ ಮನೆಯಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಪರಿಶೀಲಿಸಲಾಗಿದೆ. ಪೊಲೀಸರ ಜತೆಗೆ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್‌) ತಂಡವೂ ಇತ್ತು. ಇದೇ ಮನೆಯಲ್ಲಿ ರೇಣುಕಾಸ್ವಾಮಿ ಮೇಲೆ ಪವಿತ್ರಾಗೌಡ ಹಾಗೂ ಪವನ್‌ ಹಲ್ಲೆ ನಡೆಸಿದ್ದರು. ಸತತ 3 ಗಂಟೆಗಳ ಕಾಲ ಮಹಜರು ನಡೆಸಿದ ಅನಂತರ ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಗೆ ಕರೆತರಲಾಯಿತು. ಪವಿತ್ರಾ ಗೌಡ 10 ವರ್ಷದಿಂದ ಆರ್‌.ಆರ್‌. ನಗರದ ಮನೆಯಲ್ಲಿ ವಾಸವಾಗಿದ್ದಾರೆ. ಪವಿತ್ರಾ ಗೌಡ ಮನೆಯ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದ ಆರೋಪಿ ಪವನ್‌ ತನ್ನ ರೂಂ ಅನ್ನು ಪೊಲೀಸರಿಗೆ ತೋರಿಸಿದ್ದಾನೆ. ಅಲ್ಲಿ ಪವನ್‌ ಪ್ಯಾಂಟ್‌, ಶರ್ಟ್‌ ಹಾಗೂ ಬಿಳಿ ಬಣ್ಣದ ಟವಲ್‌ ಜಪ್ತಿ ಮಾಡಿದ್ದು, ಅದರ ಮೇಲೆ ರಕ್ತದ ಗುರುತು ಪತ್ತೆಯಾಗಿವೆ ಎನ್ನಲಾಗಿದೆ.

ಕೊಲೆ ನಡೆದ ದಿನ ಆರೋಪಿ ನಂದೀಶ್‌ ಧರಿಸಿದ್ದ ಶೂ ಅನ್ನು ದರ್ಶನ್‌ ಮನೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲಿಂದ ಆರ್‌ಆರ್‌ ನಗರದಲ್ಲಿರುವ ನಂದೀಶನ ಮನೆಗೆ ತೆರಳಿ ಪರಿಶೀಲಿಸಿದ್ದಾರೆ. ಇನ್ನು ಆರೋಪಿಗಳಾದ ನಾಗರಾಜ್‌, ದೀಪಕ್‌, ನಂದೀಶ್‌ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆರ್‌ಆರ್‌ ನಗರದ ನಿವಾಸಿ ಆರೋಪಿ ವಿನಯ್‌ ಮನೆಯಲ್ಲೂ ಬಟ್ಟೆ, ಚಪ್ಪಲಿ ಜಪ್ತಿ ಮಾಡಲಾಗಿದೆ.

ಪವಿತ್ರಾ ಮ್ಯಾನೇಜರ್‌ ವಿಚಾರಣೆ
ಶನಿವಾರ ತಡರಾತ್ರಿ ಪವಿತ್ರಾ ಗೌಡ ಮ್ಯಾನೇಜರ್‌ ದೇವರಾಜ್‌ನನ್ನು ಮೈಸೂರು ರಸ್ತೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Ad

ಟಾಪ್ ನ್ಯೂಸ್

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

Australia Vs West Indies; ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

AUS Vs WI: ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

T20 ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾಕ್ಕೆ ಗೆಲುವು

T20 ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾಕ್ಕೆ ಗೆಲುವು

Supreme Court: ದ್ವೇಷ ಭಾಷಣ ನಿಯಂತ್ರಿಸಿ: ಸರಕಾರಕ್ಕೆ ಸುಪ್ರೀಂ ಸೂಚನೆ

Supreme Court: ದ್ವೇಷ ಭಾಷಣ ನಿಯಂತ್ರಿಸಿ: ಸರಕಾರಕ್ಕೆ ಸುಪ್ರೀಂ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aa-aa-crick-ssss

ಯಲ್ಲಾಪುರ: ನಟೋರಿಯಸ್ ಆರೋಪಿ ಕಾಲಿಗೆ ಪೊಲೀಸರ ಗುಂಡು

Gadkari–CM

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿಲ್ಲ: ನಿತಿನ್‌ ಗಡ್ಕರಿ

Sidddu-CM

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಪಾಲಿಸಿಲ್ಲ: ಸಿಎಂ ಸಿದ್ದರಾಮಯ್ಯ

Siganddor-brideg

“ಸಿಗಂದೂರು ಚೌಡೇಶ್ವರಿ’ ಸೇತುವೆ ಲೋಕಾರ್ಪಣೆ; ದ್ವೀಪ ಜನರ 70 ವರ್ಷಗಳ ಕನಸು ಸಾಕಾರ

1-hyder

Hyderabad; ಕಲಬೆರಕೆ ಸೇಂದಿ ಸೇವಿಸಿದ 7 ಮಂದಿ ಮೃ*ತ್ಯು, ಹಲವರು ಅಸ್ವಸ್ಥ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

suicide (2)

Mangaluru:ಕಾರು ಪಲ್ಟಿಯಾಗಿ ಗಂಭೀರ ಗಾಯಗೊಂಡ ಯುವಕ ಸಾ*ವು

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

1-aa-aa-RSS

ಗುರುದಕ್ಷಿಣೆ ಸಮರ್ಪಿಸಿ ಕೊನೆಯುಸಿರೆಳೆದ ಆರೆಸ್ಸೆಸ್‌ ಕಾರ್ಯಕರ್ತ ಬಾಬು ದೇವಾಡಿಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.