

Team Udayavani, Aug 11, 2019, 3:00 AM IST
ಹಾಸನ: ಹಾಸನ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಬೇಲೂರಿನ ಯಗಚಿ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಯಗಚಿ ನದಿ ಉಕ್ಕಿ ಹರಿಯುತ್ತಿದೆ. ಹೇಮಾವತಿ ಜಲಾಶಯಕ್ಕೆ 1.13 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿಯಿಂದ 60 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.
1991ರ ನಂತರ ಇದೇ ಮೊದಲ ಬಾರಿಗೆ ಹೇಮಾವತಿ ಜಲಾಶಯಕ್ಕೆ ಒಳ ಹರಿವು ಒಂದು ಲಕ್ಷ ಕ್ಯೂಸೆಕ್ ಹರಿದು ಬಂದು ದಾಖಲೆ ನಿರ್ಮಿಸಿದೆ. ಮಳೆಯಿಂದಾಗಿ ಸಕಲೇಶಪುರ ಪಟ್ಟಣದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಅಜಾದ್ ನಗರದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ ರಾಮನಾಥಪುರ ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಲಕ್ಷ್ಮಣೇಶ್ವರ ದೇಗುಲಕ್ಕೂ ನೀರು ನುಗ್ಗಿದೆ.
ರಾಮನಾಥಪುರದ ಕೆಲವು ಬಡಾವಣೆಗಳು ಜಲಾವೃತವಾಗಿದ್ದು, ಸಂತ್ರಸ್ತರನ್ನು ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸಕಲೇಶಪುರ ಪಟ್ಟಣದ ಹೇಮಾವತಿ ಸೇತುವೆ ಸಮೀಪದ ಹೊಳೆಮಲ್ಲೇಶ್ವರ ದೇವಸ್ಥಾನ ಮುಳುಗಿದೆ. ಗೊರೂರು ಅಣೆಕಟ್ಟಿನಿಂದ 1.25ಲಕ್ಷ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದ್ದು, ನದಿಪಾತ್ರದ ರೈತರ ಜಮೀನುಗಳು ಮುಳುಗಡೆಯಾಗಿವೆ.
Ad
ಮೈಸೂರು, ಬನ್ನೇರುಘಟ್ಟ ಮೃಗಾಲಯದ ಪ್ರವೇಶ ಶುಲ್ಕ ಹೆಚ್ಚಳ: ಸಚಿವ ಈಶ್ವರ ಖಂಡ್ರೆ
ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಪರ ಸಚಿವರ ದಂಡು
ನರ್ಸಿಂಗ್ ಕೋರ್ಸ್ ಶುಲ್ಕ ಈ ವರ್ಷ ಹೆಚ್ಚಳವಿಲ್ಲ: ಡಾ.ಶರಣಪ್ರಕಾಶ್ ಪಾಟೀಲ್
ವಿಧಾನಮಂಡಲ ಕಾಗದ ಪತ್ರ ಸಮಿತಿಗೆ ದಾಖಲೆ ತರಿಸಿಕೊಳ್ಳುವ ಅಧಿಕಾರ ಇಲ್ಲ
ಐದು ಹುಲಿಗಳ ಕೊಲ್ಲಲು ಬಳಸಿದ್ದು ಅತ್ಯಂತ ವಿಷಕಾರಿ ಕೀಟನಾಶಕ
ಪ್ರತಿಭೆಗೆ ಮುಕ್ತ ಅವಕಾಶ, ಸಾಧನೆಯೇ ಮೆರಿಟ್: ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್
ಮೈಸೂರು, ಬನ್ನೇರುಘಟ್ಟ ಮೃಗಾಲಯದ ಪ್ರವೇಶ ಶುಲ್ಕ ಹೆಚ್ಚಳ: ಸಚಿವ ಈಶ್ವರ ಖಂಡ್ರೆ
ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಪರ ಸಚಿವರ ದಂಡು
ನರ್ಸಿಂಗ್ ಕೋರ್ಸ್ ಶುಲ್ಕ ಈ ವರ್ಷ ಹೆಚ್ಚಳವಿಲ್ಲ: ಡಾ.ಶರಣಪ್ರಕಾಶ್ ಪಾಟೀಲ್
Supreme Court; ಕೇರಳ ನರ್ಸ್‌ಗೆ ಯಮೆನ್ ಗಲ್ಲು: ಸುಪ್ರೀಂಲ್ಲಿ ವಿಚಾರಣೆ
You seem to have an Ad Blocker on.
To continue reading, please turn it off or whitelist Udayavani.