

Team Udayavani, Aug 18, 2018, 2:34 PM IST
ಮಂಗಳೂರು: ನಗರದ ಕೆ.ಎಸ್.ರಾವ್ ರಸ್ತೆಯ ನವೀಕೃತ ಪ್ರಭಾತ್ ಥಿಯೇಟರ್ ಬುಧವಾರ ಉದ್ಘಾಟನೆಗೊಂಡಿದ್ದು, ಚಿತ್ರಪ್ರದರ್ಶನಕ್ಕೆ ತೆರೆದುಕೊಂಡಿದೆ. ಬೆಂಗಳೂರಿನ ಡಿ.ಎನ್. ಗೋಪಾಲಕೃಷ್ಣ ಅವರು ಸ್ಥಾಪಿಸಿರುವ ಲಕ್ಷ್ಮೀ ನಾರಾಯಣ ಎಂಟರ್‌ಪ್ರೈಸಸ್ “ಪ್ರಭಾತ್’ ಚಿತ್ರಮಂದಿರವನ್ನು ನಡೆಸುತ್ತಿದ್ದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ನಾರಾಯಣ್ ಅವರು ನವೀಕೃತ ಚಿತ್ರ ಮಂದಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಸ್ಥೆಯ ಪ್ರಧಾನ ಅರ್ಚಕ ನರಸಿಂಹ ಭಟ್ ಅವರು ಪೂಜೆ ಮತ್ತು ಪ್ರಾರ್ಥನೆಯನ್ನು ನೆರವೇರಿಸಿದರು. ಚಿತ್ರ ಮಂದಿರದ ಮೆನೇಜರ್ ವಿ. ಸುಬ್ರಾಯ ಪೈ, ಎಂಜಿನಿಯರ್ ಸುಧೀಂದ್ರ. ಹರೀಶ್ ಕುಮಾರ್, ಡೊಲ್ಬಿ ಅಟ್ಮೋಸ್ ಸ್ಪೀಕರ್ ಸಂಸ್ಥೆಯ ವೆಂಕಟ್ ಮತ್ತು ಸುನಿಲ್ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು.
ನವೀಕೃತ ಚಿತ್ರಮಂದಿರದಲ್ಲಿ ತೆಲುಗು ಭಾಷೆಯ “ಗೀತಾ ಗೋವಿಂದ’ ಹಿಂದಿಯ “ಸತ್ಯಮೇವ ಜಯತೆ’, ಮತ್ತು “ಗೋಲ್ಡ್’ ಚಿತ್ರಗಳು ಮೊದಲ ದಿನ ಪ್ರದರ್ಶನಗೊಂಡವು. ಸುಮಾರು ಎಂಟು ತಿಂಗಳ ಹಿಂದೆ ನವೀಕರಣ ಕಾಮಗಾರಿಯ ಪ್ರಯುಕ್ತ ಈ ಚಿತ್ರ ಮಂದಿರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಪ್ರಭಾತ್ ಚಿತ್ರ ಮಂದಿರದ ಪಕ್ಕದಲ್ಲಿರುವ “ಸುಚಿತ್ರಾ’ ಥಿಯೆಟರ್ ಕೂಡಾ ನವೀಕರಣಗೊಂಡಿದ್ದು, ಕಳೆದ ಎಪ್ರಿಲ್ 27 ರಂದು ಅದು ಉದ್ಘಾಟನೆಗೊಂಡಿತ್ತು.
ಅತ್ಯಾಧುನಿಕ ಸೌಕರ್ಯಗಳು: ಉತ್ತಮ ಗುಣಮಟ್ಟದಲ್ಲಿ ಹವಾನಿಯಂತ್ರಿತ ಸೌಲಭ್ಯ ಹಾಗೂ ಸಂಪೂರ್ಣ ಅಡ್ವಾನ್ಸ್‌ಡ್ ತಂತ್ರಜ್ಞಾನಗಳೊಂದಿಗೆ ಈ ಚಿತ್ರ ಮಂದಿರ ನವೀಕರಣಗೊಂಡಿದೆ. ಪ್ರೇಕ್ಷಕರಿಗೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಸಿಗುವ ಎಲ್ಲಾ ಅತ್ಯಾಧುನಿಕ ಸವಲತ್ತುಗಳು ಇಲ್ಲಿ ಲಭ್ಯವಿವೆ.
ಜೈಜೀನ್ ಸಿಲ್ವರ್ ಸ್ಕ್ರೀನ್, 4ಕೆ ಡಿಜಿಟಲ್ ಪ್ರೊಜೆಕ್ಷನ್ ಹಾಗೂ ಡಾಲ್ಬಿ ಅಟ್ಮೋಸ್ 64 ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಪ್ರೇಕ್ಷಕರಿಗೆ ಲೈವ್ ಅನುಭವ ನೀಡಲಿದೆ. ಹವಾನಿಯಂತ್ರಿತ ಚಿತ್ರಮಂದಿರದ ಬಾಲ್ಕನಿಯಲ್ಲಿ 145 ಹಾಗೂ ಕೆಳಗಡೆ 391 ಸೀಟ್ ವ್ಯವಸ್ಥೆ ಇದ್ದು, ಎಲ್ಲಾ ಸೀಟ್‌ಗಳು ಪುಶ್‌ಬ್ಯಾಕ್ ಸೌಲಭ್ಯವನ್ನು ಹೊಂದಿವೆ. ಸುಸಜ್ಜಿತ ಕ್ಯಾಂಟೀನ್ ಜತೆಗೆ ಪಾರ್ಕಿಂಗ್ ವ್ಯವಸ್ಥೆ ಇದೆ.
Ad
Belagavi: ವಿಷಯುಕ್ತ ನೀರು ಸೇವಿಸಿ 12 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು
Charmadi: ನೀವ್ ಹೇಳೋದ್ ಹೇಳ್ತಾನೆ ಇರಿ, ನಾವ್ ಮಾಡೋದ್ ಮಾಡ್ತಾನೆ ಇರ್ತೀವಿ…
ಆರಗ ಅವರು ಅಧಿಕಾರಿಗಳೊಂದಿಗೆ ಏಕವಚನದಲ್ಲಿ ವಿವೇಚನೆ ಇಲ್ಲದೆ ಮಾತನಾಡುತ್ತಾರೆ: ಕಿಮ್ಮನೆ
BJP ಆಡಳಿತವಿರುವ ರಾಜ್ಯಗಳಲ್ಲಿ ಏನೆಲ್ಲ ನಡೆಯುತ್ತಿದೆ ಚರ್ಚೆ ಗೆ ಬರಲಿ: ಸಂತೋಷ ಲಾಡ್ ಸವಾಲು
ಐದು ವರ್ಷಗಳಲ್ಲಿ ವನ್ಯಜೀವಿಗಳ ದಾಳಿಗೆ 254 ಸಾವು!
You seem to have an Ad Blocker on.
To continue reading, please turn it off or whitelist Udayavani.