ಪರಿಷತ್ : ಹಿಂದುಳಿದ ವರ್ಗ,ಮುಸ್ಲಿಂ ಅಥವಾ ಕ್ರೈಸ್ತರಿಗೆ ಅವಕಾಶಕ್ಕೆ ಸಿದ್ದರಾಮಯ್ಯ ಮನವಿ
ರಾಜ್ಯಸಭೆಗೆ ಜೈರಾಮ್ ರಮೇಶ್ ಹೆಸರು ಬಹುತೇಕ ಅಂತಿಮ
Team Udayavani, May 22, 2022, 3:39 PM IST
ಬೆಂಗಳೂರು : ಕಾಂಗ್ರೆಸ್ ನಲ್ಲಿ ಪರಿಷತ್ ಚುನಾವಣೆಗೆ ರಣತಂತ್ರ ಜೋರಾಗಿದ್ದು, ಒಂದು ಸ್ಥಾನ ಹಿಂದುಳಿದ ವರ್ಗ ಮತ್ತೊಂದು ಸ್ಥಾನ ಮುಸ್ಲಿಂ ಅಥವಾ ಕ್ರೈಸ್ತ ಸಮುದಾಯಕ್ಕೆ ಅವಕಾಶ ಕೊಡಲು ಸಿದ್ದರಾಮಯ್ಯ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಪರಿಷತ್ ಗೆ ಎಂ.ಆರ್. ಸೀತಾರಾಂ, ಎಂ.ಡಿ.ಲಕ್ಷ್ಮೀನಾರಾಯಣ, ಎಂ.ಸಿ.ವೇಣುಗೋಪಾಲ್, ತಿಪ್ಪಣ್ಣ ಕಮಕಾನೂರ, ಮನ್ಸೂರ್ ಅಲಿ ಖಾನ್ ಅಬ್ದುಲ್ ಜಬ್ಬಾರ್, ನಿವೇದಿತ್ ಆಳ್ವಾ, ಆಸ್ಕರ್ ಫರ್ನಾಡಿಸ್ ಪುತ್ರಿ ಹೆಸರು ಅಂತಿಮವಾಗಿದ್ದು, ರಾಜ್ಯಸಭೆಗೆ ಜೈರಾಮ್ ರಮೇಶ್ ಬಹುತೇಕ ಅಂತಿಮವಾಗಿದೆ ಎಂದು ತಿಳಿದು ಬಂದಿದೆ.
ಹೈಕಮಾಂಡ್ ಈ ಕುರಿತು ಈಗಾಗಲೇ ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಅವರ ಅಭಿಪ್ರಾಯ ಪಡೆದಿದ್ದು, ಎಸ್.ಆರ್.ಪಾಟೀಲ್ ಪರ ಅಂತಿಮ ಕ್ಷಣದ ವರೆಗೆ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಇಂದು ಎಸ್.ಆರ್.ಪಾಟೀಲ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.
ಇದನ್ನೂ ಓದಿ : ಏಕರೂಪ ನಾಗರಿಕ ಸಂಹಿತೆ ಜಾರಿಗೆ ಪ್ರಧಾನಿಯನ್ನು ಒತ್ತಾಯಿಸಿದ ರಾಜ್ ಠಾಕ್ರೆ
ಇನ್ನೊಂದೆಡೆ ದಲಿತ ಎಡಗೈ ಸಮುದಾಯಕ್ಕೆ ಪರಿಷತ್ ಚುನಾವಣೆ ಗೆ ಅವಕಾಶ ಕೊಡಲು ಒತ್ತಡ ಜೋರಾಗಿದ್ದು, ಮುಂಡರಗಿ ನಾಗರಾಜ್ ಹೆಸರು ಪ್ರಸ್ತಾಪವಾಗಿದೆ ಎಂದು ತಿಳಿದು ಬಂದಿದೆ.