ಕೋವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಅತ್ಯಂತ ದೊಡ್ಡ ಅಸ್ತ್ರ : ಸುಧಾಕರ್
Team Udayavani, Apr 21, 2021, 5:59 PM IST
ಬೆಂಗಳೂರು : ದೇಶದಲದಲಿ ಕೋವಿಡ್ ಸೋಂಕಿನ ವೇಗ ಹೆಚ್ಚಳವಾಗಿದ್ದು, ದೇಶದಾದ್ಯಂತ ಲಸಿಕೆ ಅಭಿಯಾನವೂ ಕೂಡ ಆಗುತ್ತಿದೆ.
ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೂಡ ಲಸಿಕೆಯನ್ನು ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಎಲ್ಲಾ ವಿಚಾರಗಳ ನಡುವೆ ಲಸಿಕೆಯನ್ನು ಸ್ವೀಕರಿಸದ ಕೆಲವು ಮಂದಿ ಮೃತರಾಗಿದ್ದು ಮತ್ತು ಲಸಿಕೆ ಸ್ವೀಕರಿಸದ ನಂತರೂ ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಕಾರಣದಿಂದಾಗಿ ಲಸಿಕೆಯ ಬಗ್ಗೆ ದೇಶದಾದ್ಯಂತ ಭಿನ್ನ ಧ್ವನಿ ಕೇಳಿ ಬರುತ್ತಿದೆ.
ಇದಕ್ಕೆ ಪೂರಕ ಎನ್ನುವಂತೆ ಆರೋಗ್ಯ ಮಂತ್ರಿ ಡಾ. ಕೆ. ಸುಧಾಕರ್ ಕೋವಿಡ್ ಲಸಿಕೆ ನಮ್ಮಲ್ಲಿರುವ ದೊಡ್ಡ ಅಸ್ತ್ರ ಎಂದು ಹೇಳಿದ್ದಾರೆ.
ಓದಿ : ಕೋವಿಡ್ 2ನೇ ಅಲೆ ಭೀತಿ : ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕೆಲವು ಟಿಪ್ಸ್
ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸುಧಾಕರ್, ದೇಶದಲ್ಲಿ ಈವರೆಗೂ ಸುಮಾರು 12.7 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದ್ದು, ಒಂದು ಅಥವಾ ಎರಡು ಡೋಸ್ ಲಸಿಕೆ ಪಡೆದ 99.96% ವ್ಯಕ್ತಿಗಳಲ್ಲಿ ಕೋವಿಡ್ ಸೋಂಕು ಕಂಡುಬಂದಿಲ್ಲ. ಕೋವಿಡ್ ವಿರುದ್ಧದ ಈ ಹೋರಾಟದಲ್ಲಿ ಲಸಿಕೆ ನಮಗಿರುವ ಅತ್ಯಂತ ದೊಡ್ಡ ಅಸ್ತ್ರವಾಗಿದ್ದು ಎಲ್ಲ ಅರ್ಹ ವ್ಯಕ್ತಿಗಳೂ ಕೂಡಲೇ ಲಸಿಕೆ ಪಡೆಯಬೇಕೆಂದು ಮನವಿ ಮಾಡುತ್ತೇನೆ. ಎಂದು ಅವರು ಬರೆದುಕೊಂಡಿದ್ದಾರೆ.
ದೇಶದಲ್ಲಿ ಈವರೆಗೂ ಸುಮಾರು 12.7 ಕೋಟಿ ಡೋಸ್ ಕೊರೊನಾ ಲಸಿಕೆ ವಿತರಿಸಲಾಗಿದ್ದು, ಒಂದು ಅಥವಾ ಎರಡು ಡೋಸ್ ಲಸಿಕೆ ಪಡೆದ 99.96% ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ಕಂಡುಬಂದಿಲ್ಲ.
ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ಲಸಿಕೆ ನಮಗಿರುವ ಅತ್ಯಂತ ದೊಡ್ಡ ಅಸ್ತ್ರವಾಗಿದ್ದು ಎಲ್ಲ ಅರ್ಹ ವ್ಯಕ್ತಿಗಳೂ ಕೂಡಲೇ ಲಸಿಕೆ ಪಡೆಯಬೇಕೆಂದು ಮನವಿ ಮಾಡುತ್ತೇನೆ. pic.twitter.com/XpzvHPmuXY
— Dr Sudhakar K (@mla_sudhakar) April 21, 2021
ಇನ್ನು, ಇಂದು(ಏ. 21) ದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ ದೇಶದಲ್ಲಿ ಹಠಾತ್ ಏರಿಕೆಯಾಗುತ್ತಿರುವ ‘ಡಬಲ್ ರೂಪಾಂತರಿ ಕೊರೋನಾ ವೈರಸ್’ ನನ್ನೂ ಮಣಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
ಓದಿ : ‘ಡಬಲ್ ರೂಪಾಂತರಿ ಕೋವಿಡ್ ವೈರಸ್’ ನನ್ನು ಮಣಿಸಲಿದೆ ಕೋವ್ಯಾಕ್ಸಿನ್ ಲಸಿಕೆ : ಐಸಿಎಂಆರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿ: ಧ್ರುವನಾರಾಯಣ್ ಮನವಿ
ಸುಶಿಕ್ಷಿತರಲ್ಲಿಯೇ ಹೆಚ್ಚುತ್ತಿದೆ ವರದಕ್ಷಿಣೆ ಪಿಡುಗು
ಮುನಿರತ್ನಗೆ ದೊಡ್ಡ ಇತಿಹಾಸವಿದೆ, ಅವರ ಬಗ್ಗೆ ಮಾತನಾಡುವುದಿಲ್ಲ: ಡಿಕೆ ಸುರೇಶ್ ವ್ಯಂಗ್ಯ
ಮಾನ ಮರ್ಯಾದೆ ಇದೆಯೇನ್ರಿ…? ಕಾಮಗಾರಿ ವಿಳಂಬಿಸಿದ ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ
ಸಿದ್ದರಾಮಯ್ಯ- ಡಿಕೆಶಿ ಆಲಿಂಗನ: ಯತ್ನಾಳ್ ವ್ಯಂಗ್ಯವಾಗಿ ಹೇಳಿದ್ದೇನು?