
ಚೆಂಬು: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಕೃಷಿ ನಾಶ
Team Udayavani, Sep 16, 2020, 1:20 PM IST

ಅರಂತೋಡು: ಸುಳ್ಯ ಸಮೀಪದ ಚೆಂಬು ಗ್ರಾಮದ ಅಡಿಕೆ ತೋಟವೊಂದಕ್ಕೆ ಕಾಡಾನೆಗಳು ನುಗ್ಗಿ ದಾಂಧಲೆ ನಡೆಸಿದೆ.
ನಿಡಿಂಜಿ ಗುಡ್ಡೆ ಮೋಹಿನಿಯವರ ಅಡಿಕೆ ತೋಟಕ್ಕೆ ದಾಳಿ ನಡೆಸಿ ಕಾಡಾನೆಗಳು, ಸುಮಾರು 40ಕ್ಕೂ ಹೆಚ್ಚು ಅಡಿಕೆ ಮರಗಳನ್ನು ನಾಶ ಮಾಡಿವೆ.
ಮಾತ್ರವಲ್ಲದೆ ಇತರ ಕ್ರಷಿ ಗಿಡಗಳನ್ನು ಮುರಿದು ಹಾಕಿವೆ. ಈ ತೋಟಕ್ಕೆ ಕಳೆದ ಕೆಲವು ವರ್ಷಗಳಿಂದ ಕಾಡಾನೆಗಳು ನಿರಂತರವಾಗಿ ದಾಳಿ ನಡೆಸುತ್ತಿವೆ ಎಂದು ಮನೆಯವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
