
ಕನ್ನಡ ಸಾರಸ್ವತ ಲೋಕದ ಹಿರಿಯ ಸಾಹಿತಿ ಸುಮತೀಂದ್ರ ನಾಡಿಗ್ ವಿಧಿವಶ
Team Udayavani, Aug 7, 2018, 9:41 AM IST

ಬೆಂಗಳೂರು: ಹಿರಿಯ ಸಾಹಿತಿ,ಕವಿ,ಪ್ರಖ್ಯಾತ ವಿಮರ್ಶಕ ಸುಮತೀಂದ್ರ ನಾಡಿಗ್ ಅವರು ಮಂಗಳವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಕಳೆದ ಮೂರು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಪುಟ್ಟೇನಹಳ್ಳಿ ನಿವಾಸದಲ್ಲಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಚಿಕ್ಕಮಗಳೂರಿನ ಕಳಸದಲ್ಲಿ 1935 ರಲ್ಲಿ ಜನಿಸಿದ್ದ ನಾಡಿಗ್ ಅವರ ಪೂರ್ಣ ಹೆಸರು ಸಮತೀಂದ್ರ ರಾಘವೇಂದ್ರ ನಾಡಿಗ್, ಇಂಗ್ಲೀಷ್ ಪ್ರೋಫೆಸರ್ ಆಗಿ ನಿವೃತ್ತರಾಗಿದ್ದ ಅವರು ಆಧುನಿಕ ಶೈಲಿಯ ಕವಿ ಎನಿಸಿಕೊಂಡಿದ್ದರು. ಕನ್ನಡದಲ್ಲಿ ಪಿಎಚ್‌ಡಿ ಪದವಿಯನ್ನೂ ಪಡೆದಿದ್ದರು.
ಕವಿ ಗೋಪಾಲ ಕೃಷ್ಣ ಅಡಿಗ ಅವರ ಆಪ್ತರಲ್ಲಿ ಓರ್ವರಾಗಿದ್ದ ನಾಡಿಗ್,ಜಿ.ಎಸ್.ಶಿವರುದ್ರಪ್ಪ, ಎಸ್.ಎಲ್.ಭೈರಪ್ಪ ಮೊದಲಾದ ಮೇರು ಸಾಹಿತಿಗಳ ಒಡನಾಡ ಹೊಂದಿದ್ದರು.
ನಾಡಿಗ್ ಅವರು ಬರೆದ ‘ದಾಂಪತ್ಯ ಗೀತ’ ಇಂಗ್ಲೀಷ್ ಸೇರಿದಂತೆ ಬಹುಭಾಷೆಗಳಿಗೆ ಭಾಷಾಂತರಗೊಂಡಿದೆ. ಶಬ್ಧ ಮಾರ್ತಾಂಡ ಎಂಬ ಬಿರುದು ಅವರಿಗೆ ಒಲಿದು ಬಂದಿತ್ತು.
ಬಹುಭಾಷಾ ಹಿಡಿತ ಹೊಂದಿದ್ದ ನಾಡಿಗ್ ಅವರು ಕನ್ನಡ, ಇಂಗ್ಲೀಷ್ ನಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದರೆ, ಹಿಂದಿ, ಮರಾಠಿ,ಕೊಂಕಣಿ ಮತ್ತು ಬೆಂಗಾಲಿ ಭಾಷೆಯನ್ನೂ ಬಲ್ಲವರಾಗಿದ್ದರು. ಹಲವು ಬರಹಗಳು ಬೆಂಗಾಲಿಯಿಂದ ಕನ್ನಡಕ್ಕೆ , ಕನ್ನಡದಿಂದ ಇಂಗ್ಲೀಷ್‌ಗೆ ತರ್ಜುಮೆ ಮಾಡಿದ ಹಿರಿಮೆ ಅವರದ್ದು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysore: ಕರ್ನಾಟಕದಲ್ಲಿ ರಾಕ್ಷಸರ ರಾಜ್ಯ ಆಡಳಿತಕ್ಕೆ ಬಂದಿದೆ; ಪ್ರತಾಪ್ ಸಿಂಹ ವಾಗ್ದಾಳಿ

Belagavi: ಬಾಲಕಾರ್ಮಿಕರ ರಕ್ಷಣೆಗೆ ಟಾಸ್ಕ್ ಫೋಸ್೯ ರಚನೆ: ಸಂತೋಷ್ ಲಾಡ್

Protest: ಕಳಪೆ ಕಾಮಗಾರಿ… ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

Shivamogga Incident: ರಾಗಿಗುಡ್ಡಕ್ಕೆ ಆತಂರಿಕ ಭದ್ರತಾ ವಿಭಾಗದ ಅಧಿಕಾರಿಗಳ ತಂಡ ಭೇಟಿ

Karnataka: ಅ. 10ರೊಳಗೆ ಕೇಂದ್ರ ಬರ ಅಧ್ಯಯನ ತಂಡ
MUST WATCH
ಹೊಸ ಸೇರ್ಪಡೆ

Nuclear Submarin:ಹಳದಿ ಸಮುದ್ರದಲ್ಲಿ ಚೀನಾ ಪರಮಾಣು ಜಲಾಂತರ್ಗಾಮಿ ದುರಂತ; 55 ನಾವಿಕರ ಸಾವು

Mysore: ಕರ್ನಾಟಕದಲ್ಲಿ ರಾಕ್ಷಸರ ರಾಜ್ಯ ಆಡಳಿತಕ್ಕೆ ಬಂದಿದೆ; ಪ್ರತಾಪ್ ಸಿಂಹ ವಾಗ್ದಾಳಿ

Udupi: ಆಭರಣ ಜ್ಯುವೆಲ್ಲರ್ಸ್ ಮಾಲಕ ಮಧುಕರ್ ಕಾಮತ್ ಪತ್ನಿ ರಾಧಾ ಕಾಮತ್ ನಿಧನ

Belagavi: ಬಾಲಕಾರ್ಮಿಕರ ರಕ್ಷಣೆಗೆ ಟಾಸ್ಕ್ ಫೋಸ್೯ ರಚನೆ: ಸಂತೋಷ್ ಲಾಡ್

Protest: ಕಳಪೆ ಕಾಮಗಾರಿ… ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ