Drought:ಬರಗಾಲದ ಪರಿಹಾರ ಕುರಿತು ಸಮೀಕ್ಷೆ; ಎನ್.ಡಿ.ಆರ್.ಎಫ್ ಪ್ರಕಾರ ಪರಿಹಾರ: ಮುಖ್ಯಮಂತ್ರಿ

Team Udayavani, Nov 29, 2023, 3:07 PM IST

11-cm

ಹಾವೇರಿ: ನಿಗಮ ಮಂಡಳಿ ಆಯ್ಕೆ ಕುರಿತು ಚರ್ಚೆ ಮಾಡಿ ಮೊದಲ ಹಂತದಲ್ಲಿ ಶಾಸಕರನ್ನು ಆಯ್ಕೆ ಮಾಡುತ್ತೇವೆ. ನಾನು, ಸುರ್ಜೆವಾಲಾ, ಡಿ.ಕೆ.ಶಿವಕುಮಾರ್ ಕುಳಿತು ಚರ್ಚೆ ಮಾಡುತ್ತೇವೆ. ಹೈಕಮಾಂಡ್ ನವರು ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಕಾಗಿನೆಲೆಯ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಶಾಸಕ‌ ಬಿ.ಆರ್.ಪಾಟೀಲ ರಾಜೀನಾಮೆ ಪತ್ರದ ಕುರಿತು ಈಗಾಗಲೇ ಬೆಳಗ್ಗೆ ದೂರವಾಣಿ ಮೂಲಕ ಅವರೊಂದಿಗೆ ಮಾತನಾಡಿದ್ದೇನೆ. ಸಂಜೆ ಬೆಂಗಳೂರಿಗೆ ಬರಲು ಹೇಳಿದ್ದೇನೆ. ಅಲ್ಲಿ ಚರ್ಚಿಸುತ್ತೇನೆ ಎಂದರು.

ಹೈಕೋರ್ಟ್ ನಲ್ಲಿ ಡಿ.ಕೆ.ಶಿವಕುಮಾರ್ ಗೆ ರಿಲೀಫ್ ಕುರಿತು ಮಾತನಾಡಿದ‌ ಸಿಎಂ, ಸಿಬಿಐ ತನಿಖೆ ಮಾಡಬೇಕು ಎಂಬುದನ್ನು ನಾವು ವಾಪಸ್ ತೆಗೆದುಕೊಂಡಿದ್ದೇವೆ. ಅದು ಕಾನೂನು ಪ್ರಕಾರ ಇಲ್ಲ. ಈ ಹಿಂದಿನ ಸರ್ಕಾರ ಕಾನೂನು ಬಾಹಿರವಾಗಿ ಮಾಡಿತ್ತು ಎಂದು ಹೇಳಿಸರು.

ಬರಗಾಲದ ಪರಿಹಾರ ಕುರಿತು ಸಮೀಕ್ಷೆ ಮಾಡುತ್ತಿದ್ದೇವೆ. ಎನ್ ಡಿ ಆರ್ ಎಫ್ ಪ್ರಕಾರ ಪರಿಹಾರ ಕೊಡುತ್ತೇವೆ. ಆದರೆ, ಕೇಂದ್ರ ಸರ್ಕಾರ ಒಂದು ನಯಾಪೈಸೆ ಕೊಡುತ್ತಿಲ್ಲ. ರೈತರು ಕಷ್ಟದಲ್ಲಿ ಇದ್ದಾರೆ. ಪರಿಹಾರ ಕೇಳುತ್ತಿದ್ದಾರೆ. ನಮ್ಮ ತೆರಿಗೆ ಹಣ ನಮಗೆ ಕೊಡಲು ಕೇಂದ್ರ ಒಪ್ಪುತ್ತಿಲ್ಲ ಎಂದರು.

ನಾವು ಕುಡಿಯುವ ನೀರಿಗೆ, ಮೇವಿಗೆ ಹಣ ಕೊಟ್ಟಿದ್ದೇವೆ. ನಾವು ಏನೂ ಮಾಡದೇ ಕುಳಿತಿಲ್ಲ. ಜಿಲ್ಲಾಧಿಕಾರಿಗಳಿಗೆ, ಮಂತ್ರಿಗಳಿಗೆ ಸೂಚನೆ ಕೊಟ್ಟಿದ್ದೇನೆ.ಬರಗಾಲದ ಬಗ್ಗೆ ಸಭೆ ನಡೆಸಬೇಕು. ಯಾರಿಗೂ ತೊಂದರೆ ಆಗಬಾರದು, ಸಮೀಕ್ಷೆ ಮಾಡಬೇಕು ಎಂದು ಹೇಳಿದರು.

ಜನಗಳಿಗೆ ಬರಗಾಲದಲ್ಲಿ ನರೇಗಾ ಯೋಜನೆಯಡಿ ನೂರು ದಿನದ ಬದಲು 150 ದಿನ ಕೆಲಸ ಕೊಡಬೇಕು ಎಂಬ ನಿಯಮವಿದೆ. ಆದರೆ, ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಕೊಡುತ್ತಿಲ್ಲ ಎಂದ ಅವರು, ಇಡೀ ದೇಶದಲ್ಲಿ ಹನ್ನೆರಡು ರಾಜ್ಯದಲ್ಲಿ ಬರಗಾಲ ಇದೆ. ಯಾವ ರಾಜ್ಯಕ್ಕೂ ಪರಿಹಾರ ಹಾಗೂ ಅನುಮತಿ ಕೊಟ್ಟಿಲ್ಲ. ಕೇಂದ್ರದಿಂದ ಬರಗಾಲ ತಂಡ ಅಧ್ಯಯನ ಮಾಡಿ ವರದಿ ಕೊಟ್ಟಿದೆ. ಆದರೂ ಪರಿಹಾರ ಕೊಟ್ಟಿಲ್ಲ ಎಂದರು.

ಇಲ್ಲಿಯ ಬಿಜೆಪಿಯವರು ಹೇಳುತ್ತಾರೆ. ಅವರಿಗೆ ಯಾಕೆ ನೋಡುತ್ತೀರಿ ಅಂತಾ. ಆದರೆ ನಾವು ಆ ಕಡೆ ನೋಡುವುದಿಲ್ಲ. ನಮಗೆ ಬರಬೇಕಾಗಿರುವ ಪರಿಹಾರ ಬರಬೇಕಲ್ಲ‌ ಎಂದು ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ಪ್ರಮುಖ ವಿಷಯಗಳ ಬಗೆಗಿನ ವಿಚಾರ, ವಿರೋಧ ಪಕ್ಷದವರು ಏನು ಪ್ರಸ್ತಾಪ ಮಾಡುತ್ತಾರೆ. ಅದಕ್ಕೆ ನಾವು ಉತ್ತರ ಕೊಡುವುದಕ್ಕೆ ತಯಾರಿದ್ದೇವೆ ಎಂದು ಹೇಳಿದ ಅವರು, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತೇವೆ ಎಂದರು.

ಸಿಎಂ ವಕೀಲರಾಗಿ ಡಿಕೆಶಿ ಕೇಸ್ ವಾಪಸ್ ಪಡೆದಿದ್ದು, ಎಷ್ಟರ ಮಟ್ಟಿಗೆ ಸರಿ ಎಂಬ ಎಚ್ ಡಿಕೆ ಹೇಳಿಕೆ ಕುರಿತು ಸಿಎಂ ಪ್ರತಿಕ್ರಿಯಿಸಿ, ನಾವು ವಕೀಲರಾಗಿ ಇರೋದಕ್ಕೆ ವಾಪಸ್ ಪಡೆದಿದ್ದೇವೆ. ಅವರ ವಕೀಲರು ಅಲ್ಲ. ಕಾನೂನು ಪ್ರಕಾರ ಇಲ್ಲ ಎಂಬ ಕಾರಣಕ್ಕೆ ವಾಪಸ್ ಪಡೆದಿದ್ದೇವೆ.

ವಕೀಲರಾಗಿ ಇರುವುದಕ್ಕೆ ವಾಪಸ್ ಪಡೆದಿದ್ದೇವೆ. ಇಲ್ಲ ಎಂದರೆ ಯಡಿಯೂರಪ್ಪ, ಕುಮಾರಸ್ವಾಮಿ ರೀತಿಯಲ್ಲಿ ನಾನೂ ಇರುತ್ತಿದ್ದೆ ಎಂದು ಕುಟುಕಿದರು.

ಟಾಪ್ ನ್ಯೂಸ್

10

Rajinikanth: ಬಾಲಿವುಡ್ ನ ಖ್ಯಾತ ನಿರ್ಮಾಪಕನ ಜೊತೆ ರಜಿನಿಕಾಂತ್‌ ಸಿನಿಮಾ

13-tech

Bollywood ಸೂಪರ್‌ಸ್ಟಾರ್‌ ರಣವೀರ್ ಸಿಂಗ್‌ ಈಗ ನಥಿಂಗ್ ಬ್ರ್ಯಾಂಡ್ ಅಂಬಾಸಿಡರ್

ಇವರೇ ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಗಗನಯಾತ್ರಿಗಳು… ಹೆಸರು ಬಹಿರಂಗಪಡಿಸಿದ ಪ್ರಧಾನಿ

ಇವರೇ ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಗಗನಯಾತ್ರಿಗಳು… ಹೆಸರು ಬಹಿರಂಗಪಡಿಸಿದ ಪ್ರಧಾನಿ

ಮದುವೆಯಾದ ಮೂರೇ ತಿಂಗಳಿಗೆ ಪತಿಗೆ ಹೃದಯಾಘಾತ… ಆಘಾತಕ್ಕೊಳಗಾಗಿ ಕಟ್ಟಡದಿಂದ ಜಿಗಿದ ಪತ್ನಿ

ಮದುವೆಯಾದ ಮೂರೇ ತಿಂಗಳಿಗೆ ಪತಿಗೆ ಹೃದಯಾಘಾತ… ಆಘಾತಕ್ಕೊಳಗಾಗಿ ಕಟ್ಟಡದಿಂದ ಜಿಗಿದ ಪತ್ನಿ

Bunty Bains: ಪಂಜಾಬಿನ ಖ್ಯಾತ ಸಂಗೀತ ಸಂಯೋಜಕ ಬಂಟಿ ಬೈನ್ಸ್ ಮೇಲೆ ಗುಂಡಿನ ದಾಳಿ

Bunty Bains: ಪಂಜಾಬಿನ ಖ್ಯಾತ ಸಂಗೀತ ಸಂಯೋಜಕ ಬಂಟಿ ಬೈನ್ಸ್ ಮೇಲೆ ಗುಂಡಿನ ದಾಳಿ

12-

Muddebihal: ವಸತಿ ಶಾಲೆಯಲ್ಲಿ ಬೆಂಕಿ ಅವಘಡ: ಓರ್ವನ ಸ್ಥಿತಿ ಗಂಭೀರ

Sidhu Moose Wala: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸಿದ್ದು ಮೂಸೆವಾಲ ಪೋಷಕರು – ವರದಿ

Sidhu Moose Wala: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸಿದ್ದು ಮೂಸೆವಾಲ ಪೋಷಕರು – ವರದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajyasabha Election: ಅಡ್ಡ ಮತದಾನ ಮಾಡಿದ ಎಸ್.ಟಿ.ಸೋಮಶೇಖರ್‌: ʼಕೈʼ ಅಭ್ಯರ್ಥಿಗೆ ಮತ

Rajyasabha Election: ಅಡ್ಡ ಮತದಾನ ಮಾಡಿದ ಎಸ್.ಟಿ.ಸೋಮಶೇಖರ್‌: ʼಕೈʼ ಅಭ್ಯರ್ಥಿಗೆ ಮತ

Government; ಎರಡು ದಿನಗಳೊಳಗೆ ಸರಕಾರಕ್ಕೆ ಜಾತಿ ಗಣತಿ ವರದಿ?

Government; ಎರಡು ದಿನಗಳೊಳಗೆ ಸರಕಾರಕ್ಕೆ ಜಾತಿ ಗಣತಿ ವರದಿ?

RGUHS Exam; “ಕಾಗದ ರಹಿತ ಪರೀಕ್ಷೆ’ಯತ್ತ ರಾಜೀವ್‌ಗಾಂಧಿ ಆರೋಗ್ಯ ವಿವಿ

RGUHS Exam; “ಕಾಗದ ರಹಿತ ಪರೀಕ್ಷೆ’ಯತ್ತ ರಾಜೀವ್‌ಗಾಂಧಿ ಆರೋಗ್ಯ ವಿವಿ

Nirmala Sitharaman ಲೋಕಸಭೆ ಸ್ಪರ್ಧೆ ಖಾತ್ರಿ: ಪ್ರಹ್ಲಾದ್‌ ಜೋಶಿ

Nirmala Sitharaman ಲೋಕಸಭೆ ಸ್ಪರ್ಧೆ ಖಾತ್ರಿ: ಪ್ರಹ್ಲಾದ್‌ ಜೋಶಿ

State Govt; ಉದ್ಯೋಗಮೇಳದಲ್ಲಿ 1 ಲಕ್ಷ ಆಕಾಂಕ್ಷಿಗಳು!

State Govt; ಉದ್ಯೋಗಮೇಳದಲ್ಲಿ 1 ಲಕ್ಷ ಆಕಾಂಕ್ಷಿಗಳು!

MUST WATCH

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

ಹೊಸ ಸೇರ್ಪಡೆ

10

Rajinikanth: ಬಾಲಿವುಡ್ ನ ಖ್ಯಾತ ನಿರ್ಮಾಪಕನ ಜೊತೆ ರಜಿನಿಕಾಂತ್‌ ಸಿನಿಮಾ

13-tech

Bollywood ಸೂಪರ್‌ಸ್ಟಾರ್‌ ರಣವೀರ್ ಸಿಂಗ್‌ ಈಗ ನಥಿಂಗ್ ಬ್ರ್ಯಾಂಡ್ ಅಂಬಾಸಿಡರ್

ಇವರೇ ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಗಗನಯಾತ್ರಿಗಳು… ಹೆಸರು ಬಹಿರಂಗಪಡಿಸಿದ ಪ್ರಧಾನಿ

ಇವರೇ ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಗಗನಯಾತ್ರಿಗಳು… ಹೆಸರು ಬಹಿರಂಗಪಡಿಸಿದ ಪ್ರಧಾನಿ

ಮದುವೆಯಾದ ಮೂರೇ ತಿಂಗಳಿಗೆ ಪತಿಗೆ ಹೃದಯಾಘಾತ… ಆಘಾತಕ್ಕೊಳಗಾಗಿ ಕಟ್ಟಡದಿಂದ ಜಿಗಿದ ಪತ್ನಿ

ಮದುವೆಯಾದ ಮೂರೇ ತಿಂಗಳಿಗೆ ಪತಿಗೆ ಹೃದಯಾಘಾತ… ಆಘಾತಕ್ಕೊಳಗಾಗಿ ಕಟ್ಟಡದಿಂದ ಜಿಗಿದ ಪತ್ನಿ

Bunty Bains: ಪಂಜಾಬಿನ ಖ್ಯಾತ ಸಂಗೀತ ಸಂಯೋಜಕ ಬಂಟಿ ಬೈನ್ಸ್ ಮೇಲೆ ಗುಂಡಿನ ದಾಳಿ

Bunty Bains: ಪಂಜಾಬಿನ ಖ್ಯಾತ ಸಂಗೀತ ಸಂಯೋಜಕ ಬಂಟಿ ಬೈನ್ಸ್ ಮೇಲೆ ಗುಂಡಿನ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.