“ಪೈ ಇಂಟರ್‌ನ್ಯಾಷನಲ್‌’ ಜತೆಗೆ ಟಿಸಿಎಲ್‌ ಒಡಂಬಡಿಕೆ

Team Udayavani, Oct 3, 2019, 3:04 AM IST

pai

ಬೆಂಗಳೂರು: ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಉತ್ತಮ ಉತ್ಪನ್ನ, ಸೇವೆ ಜತೆಗೆ ಆಕರ್ಷಕ ಬಹುಮಾನಗಳನ್ನು ನೀಡುವ ಮೂಲಕ ಎಲೆಕ್ಟ್ರಾನಿಕ್ಸ್‌ ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ “ಪೈ ಇಂಟರ್‌ನ್ಯಾಷನಲ್‌’ ಜತೆಗೆ ಟಿಸಿಎಲ್‌ ಸಂಸ್ಥೆಯು ಟಿ.ವಿ.ಮಾರಾಟ ಒಡಂಬಡಿಕೆ ಮಾಡಿಕೊಂಡಿದೆ.

ಇಂದಿರಾನಗರದ ಪೈ ಶೋರೂಂನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಹೊಸ 4ಕೆ ಎ1 ಟಿಸಿಎಲ್‌ ಟಿವಿಯನ್ನು ಬಿಡುಗಡೆ ಮಾಡುವ ಮೂಲಕ ಸಂಸ್ಥೆಯ ಎಂಡಿ ರಾಜ್‌ಕುಮಾರ್‌ ಪೈ ಹಾಗೂ ಭಾರತ ಟಿಸಿಎಲ್‌ ಸಂಸ್ಥೆಯ ಮುಖ್ಯಸ್ಥ ಮೈಕ್‌ ಚೆನ್‌ ಒಡಂಬಡಿಕೆ ಮಾಡಿ ಕೊಂಡರು. ಹೀಗಾಗಿ, ಇನ್ನು ಮುಂದೆ ಪೈ ಇಂಟರ್‌ನ್ಯಾಷನಲ್‌ನ ಎಲ್ಲಾ ಮಳಿಗೆಗಳಲ್ಲೂ ಟಿಸಿಎಲ್‌ ಬ್ರಾಂಡ್‌ನ‌ ಟಿವಿಗಳು ಗ್ರಾಹಕರಿಗೆ ಲಭ್ಯವಿರಲಿವೆ.

ಟಿಸಿಎಲ್‌ ಸಂಸ್ಥೆಯ ಭಾರತದ ಮುಖ್ಯಸ್ಥ ಮೈಕ್‌ ಚೆನ್‌ ಮಾತನಾಡಿ, ಸದ್ಯ ಟಿವಿ ಮಾರಾಟ ಉದ್ಯಮದಲ್ಲಿ ಟಿಸಿಎಲ್‌ ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. 2022ರ ವೇಳೆಗೆ ಮೊದಲನೇ ಸ್ಥಾನಕ್ಕೆ ಏರುವ ಗುರಿ ಹೊಂದಿದೆ. ಇನ್ನು ಭಾರತದಲ್ಲಿ 5ನೇ ಸ್ಥಾನದಲ್ಲಿದ್ದು, ದೀಪಾವಳಿ ಹಬ್ಬದ ವೇಳೆಗೆ 4ನೇ ಸ್ಥಾನಕ್ಕೆ ಬರುವ ನಿರೀಕ್ಷೆ ಇದೆ. ದೀರ್ಘ‌ ಕಾಲದ ಬಾಳಿಕೆಯ ದೃಷ್ಟಿ ಇಟ್ಟುಕೊಂಡು ಟಿವಿಯನ್ನು ಉತ್ಪಾದಿಸುತ್ತಿದ್ದೇವೆ. ಇತರ ಕಂಪನಿಗಳ ಪ್ರಬಲ ಪೈಪೋಟಿ ನಡುವೆ ಗ್ರಾಹಕರಿಗೆ ಗುಣಮಟ್ಟದ ಟಿವಿಗಳನ್ನು ಉತ್ತಮ ಬೆಲೆಯಲ್ಲಿ ನೀಡುವುದು ನಮ್ಮ ಸಂಸ್ಥೆಯ ಗುರಿಯಾಗಿದೆ. ಪೈ ಇಂಟರ್‌ನ್ಯಾಷನಲ್‌ ಸಹಯೋಗದಲ್ಲಿ ಟಿಸಿಎಲ್‌ ಟಿವಿ ಮಾರಾಟಕ್ಕೆ ಒಡಂಬಡಿಕೆ ಮಾಡಿಕೊಂಡಿರುವುದು ಸಂತೋಷ ವಾಗಿದೆ ಎಂದರು.

ಪೈನಲ್ಲಿ ಟಿಸಿಎಲ್‌ ಟಿವಿ ಖರೀದಿಗೆ ಬಹುಮಾನ: ಒಡಂಬಡಿಕೆ ಹಿನ್ನೆಲೆ ಪೈ ಇಂಟರ್‌ನ್ಯಾಷನಲ್‌ ಮಳಿಗೆಗಳಲ್ಲಿ ಟಿಸಿಎಲ್‌ ಬ್ಯಾಂಡ್‌ನ‌ ಟಿ.ವಿಯನ್ನು ಖರೀದಿಸುವ ಅದೃಷ್ಟ ಶಾಲಿ ಗ್ರಾಹಕರಿಗೆ ಮೊದಲನೆ ಬಹುಮಾನವಾಗಿ 164 ಸೆ.ಮೀ. ಟಿಸಿಎಲ್‌ 4ಕೆ ಎ1 ಟಿವಿ, ಎರಡನೇ ಬಹುಮಾನವಾಗಿ 138.7 ಸೆ.ಮೀ. ಟಿಸಿಎಲ್‌ 4ಕೆ ಎ1 ಟಿವಿ, ಮೂರನೇ ಬಹುಮಾನವಾಗಿ 108 ಸೆ.ಮೀ ಟಿಸಿಎಲ್‌ 4ಕೆ ಎ1 ಟಿವಿ ಹಾಗೂ ನಾಲ್ಕನೇ ಬಹುಮಾನವಾಗಿ 100 ಅದೃಷ್ಟ ಶಾಲಿ ಗ್ರಾಹಕರಿಗೆ ಬ್ಲೂಟೂತ್‌ ಸ್ಪೀಕರ್‌ಗಳನ್ನು ಇಡಲಾಗಿದೆ.

ಮೆಗಾ ಫೆಸ್ಟಿವಲ್‌ ಸೇಲ್‌: ನವರಾತ್ರಿ ಹಾಗೂ ದೀಪಾ ವಳಿ ಹಿನ್ನೆಲೆ ಪೈ ಇಂಟರ್‌ನ್ಯಾಷನಲ್‌ನಲ್ಲಿ ಮೆಗಾ ಫೆಸ್ಟಿವಲ್‌ ಸೇಲ್ಸ್‌ ನಡೆಯುತ್ತಿದ್ದು, ಅದೃಷ್ಟಶಾಲಿ ಗ್ರಾಹಕರಿ ಗಾಗಿ ಏಳು ಕೋಟಿ ರೂ.ಮೌಲ್ಯದ ಬಹು ಮಾನಗಳನ್ನು ನೀಡಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿದ ಪೈ ಇಂಟರ್‌ನ್ಯಾಷನಲ್‌ ಎಲೆಕ್ಟ್ರಾನಿಕ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್‌ ಪೈ ಅವರು, ಕಳೆದ ಸೆಪ್ಟೆಂಬರ್‌ 28ರಿಂದ ಆರಂಭವಾದ ಮೆಗಾ ಫೆಸ್ಟಿವಲ್‌ ಸೇಲ್‌ ಮುಂದಿನ ನವೆಂಬರ್‌ವರೆಗೂ ನಡೆಯಲಿದೆ. ಈ ವೇಳೆ ಪೈ ಇಂಟರ್‌ನ್ಯಾಷನಲ್‌ನ ಯಾವುದೇ ಮಳಿಗೆಯಲ್ಲಿ ಕನಿಷ್ಠ 2,000 ರೂ.ಖರೀದಿಗೆ ಒಂದು ಲಕ್ಕಿ ಡ್ರಾ ಕೂಪನ್‌ ಲಭ್ಯವಾಗಲಿದೆ. ನವೆಂಬರ್‌ನಲ್ಲಿ ಸೇಲ್‌ ಮುಗಿದ ಬಳಿಕ ಕೂಪನ್‌ ಪಡೆದ ಗ್ರಾಹಕರ ಜೆನ್ಯೂನ್‌ ಲಕ್ಕಿ ಡ್ರಾ ನಡೆಸಿ ಅದೃಷ್ಟ ಶಾಲಿ ಬಹುಮಾನ ವಿತರಿಸಲಾಗುತ್ತದೆ ಎಂದರು.

ಈ ಬಾರಿ ಬಂಪರ್‌ ಬಹುಮಾನವಾಗಿ 10 ಹ್ಯೂಂಡೇ ಸ್ಯಾನ್ಟ್ರೋ ಕಾರುಗಳು, ಮೆಗಾ ಬಂಪರ್‌ ಬಹುಮಾನವಾಗಿ 5 ಐ 20 ಕಾರುಗಳು, ಸೂಪರ್‌ ಬಂಪರ್‌ ಬಹುಮಾನವಾಗಿ 5 ಹ್ಯೂಂಡೇ ಗ್ರಾಂಡ್‌ ಐ20 ಕಾರುಗಳನ್ನು ಸೇರಿದಂತೆ ಒಟ್ಟು 20 ಕಾರ್‌ಗಳು ಹಾಗೂ ಲಕ್ಕಿ ಡ್ರಾನ ಮೊದಲ ಬಹುಮಾನವಾಗಿ 160 ಸುಜುಕಿ ಆಕ್ಸಿಸ್‌ 125 ಬೈಕ್‌ (ದ್ವಿಚಕ್ರವಾಹನ) ನಿಗದಿ ಪಡಿಸಲಾಗಿದೆ. ಉಳಿದಂತೆ 8,000 ಅದೃಷ್ಟ ಶಾಲಿ ಗ್ರಾಹಕರು 1,000 ರೂ. ಪೈ ಇಂಟರ್‌ನ್ಯಾಷನಲ್‌ ಕೂಪನ್‌, 80,000 ಗ್ರಾಹಕರು 500 ರೂ. ಪೈ ಇಂಟರ್‌ನ್ಯಾಷನಲ್‌ ಕೂಪನ್‌ ಪಡೆಯಲಿದ್ದಾರೆ. ಒಟ್ಟಾರೆ 88,180 ಅದೃಷ್ಟ ಶಾಲಿ ಗ್ರಾಹಕರಿಗೆ ಏಳು ಕೋಟಿ ರೂ.ಮೌಲ್ಯದ ಬಹುಮಾನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಟಿವಿ ಮಾರಾಟದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಟಿಸಿಎಲ್‌ ಜತೆ ಮಾರಾಟ ಒಡಂಬಡಿಕೆ ಮಾಡಿಕೊಂಡಿರುವುದು ಖುಷಿಯಾಗಿದೆ. ಟಿಸಿಎಲ್‌ ಟಿವಿ ಖರೀದಿಸಿದರೆ ಗ್ರಾಹಕರಿಗೆ ಬಂಪರ್‌ ಪ್ರಶಸ್ತಿ ಗೆಲ್ಲುವ ಅವಕಾಶವಿದೆ.
-ರಾಜ್‌ಕುಮಾರ್‌ ಪೈ, ವ್ಯವಸ್ಥಾಪಕ ನಿರ್ದೇಶಕ, ಪೈ ಇಂಟರ್‌ನ್ಯಾಷನಲ್‌ ಎಲೆಕ್ಟ್ರಾನಿಕ್‌ ಲಿಮಿಟೆಡ್‌

ಟಾಪ್ ನ್ಯೂಸ್

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ಬೆಂಕಿಗೂ ಹೆದರಲ್ಲ, ಜನರಿಗೂ ಬೆದರಲ್ಲ :ನಾಗರಹೊಳೆ ರಸ್ತೆಯಲ್ಲಿ 2 ಗಂಟೆ ಜನರನ್ನು ಕಾಡಿದ ಸಲಗ

ಬೆಂಕಿಗೂ ಹೆದರಲ್ಲ, ಜನರಿಗೂ ಬೆದರಲ್ಲ :ನಾಗರಹೊಳೆ ರಸ್ತೆಯಲ್ಲಿ 2 ಗಂಟೆ ಜನರನ್ನು ಕಾಡಿದ ಸಲಗ

1-fffsdfdsdsfsf

ಬಿಜೆಪಿ ಹಿರಿಯ ನಾಯಕ, ಮಾಜಿ ಶಾಸಕ ರಾಮ್ ಭಟ್ ವಿಧಿವಶ

ರಂಗು ರಂಗಿನ ಬೆಳಕಿನಲ್ಲಿ ಹೆಜ್ಜೆ ಹಾಕಿ ಮನಸೂರೆಗೊಂಡ ಪುಟಾಣಿ ಮಾಡೆಲ್ಸ್

ರಂಗು ರಂಗಿನ ಬೆಳಕಿನಲ್ಲಿ ಹೆಜ್ಜೆ ಹಾಕಿ ಮನಸೂರೆಗೊಂಡ ಪುಟಾಣಿ ಮಾಡೆಲ್ಸ್

dr-sudhakar

ಒಮಿಕ್ರಾನ್ ಸೋಂಕಿತರ ಸಂಪರ್ಕಿತರಿಗೆ ಸೋಂಕು ಕಂಡುಬಂದಿಲ್ಲ; ಸಚಿವ ಡಾ.ಕೆ.ಸುಧಾಕರ್

MUST WATCH

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

ಹೊಸ ಸೇರ್ಪಡೆ

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.