2022ರಲ್ಲೂ ಬಿಜೆಪಿ ಇರಲಿದೆ, ಮುಂದೆಯೂ ಅಧಿಕಾರವನ್ನ ನಡೆಸಲಿದ್ದೇವೆ: ಸಿಎಂ ಬೊಮ್ಮಾಯಿ
Team Udayavani, Dec 30, 2021, 4:16 PM IST
ಬೆಂಗಳೂರು: ಬಿಜೆಪಿಯು 2022ರಲ್ಲೂ ಇರಲಿದೆ, 2023ಕ್ಕೂ ಮತ್ತೆ ಅಧಿಕಾರಕ್ಕೆ ಬರಲಿದೆ. ಮುಂದೆಯೂ ಅಧಿಕಾರವನ್ನು ನಡೆಸಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಗಿಂತ ನಮಗೆ ದೊಡ್ಡ ಪ್ರಮಾಣದ ಯಶಸ್ಸು ಸಿಕ್ಕಿದೆ. ಈ ಭಾಗದಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದರಿಂದ ನಮಗೆ ಸಾಧನೆ ಮಾಡಲಾಗಿರಲಿಲ್ಲ. ನಮ್ಮಕ್ಷೇತ್ರದಲ್ಲಿ ಯಾವತ್ತೂ ಕೂಡ ಗೆದ್ದಿರಲಿಲ್ಲ. ನಮ್ಮಲ್ಲಿ ಅಲ್ಪ ಸಂಖ್ಯಾತರು 60% ಇದ್ದಾರೆ ಎಂದರು.
ಇದನ್ನೂ ಓದಿ:ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ…ನಾಗಾಲ್ಯಾಂಡ್ನಲ್ಲಿ ಆಫ್ಸಪಾ ಇನ್ನೂ 6 ತಿಂಗಳು ವಿಸ್ತರಣೆ
ಫಲಿತಾಂಶದಿಂದ ಬಿಜೆಪಿ ಬುಡ ಅಲ್ಲಾಡುತ್ತಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಗೆ ಬುಡವೇ ಇಲ್ಲ. ಈಗಾಗಲೇ ಬುಡವೇ ಹೊರಟುಹೋಗಿದೆ. ಗ್ರಾಮ ಪಂಚಾಯತಿಯಲ್ಲಿ ನಾವು ಹೆಚ್ಚಿದ್ದೇವೆ. ಪಟ್ಟಣ ಪಂಚಾಯತಿಯಲ್ಲಿ ಈಗ ಹೆಚ್ಚಿನ ಫಲಿತಾಂಶ ಪಡೆಯುತ್ತಿದ್ದೇವೆ. ಅಲ್ಪಸಂಖ್ಯಾತರಿರುವ ಯಾವುದೋ ಕಡೆ ನಗರ ಸಭೆಯಲ್ಲಿ ನಾಲ್ಕು ಸೀಟು ಹೆಚ್ಚು ಪಡೆದಿದ್ದಾರೆ. ಅಷ್ಟಕ್ಕೆ ಗೆದ್ದಿದ್ದೇವೆ ಅಂತ ಬೀಗುವುದು ಬೇಡ ಎಂದು ತಿರುಗೇಟು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ