ಪರಿಷತ್‌ ವಿಪಕ್ಷ ನಾಯಕ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರೀ ಪೈಪೋಟಿ

ಛಲವಾದಿ ನಾರಾಯಣಸ್ವಾಮಿ ಪರ ಅಶೋಕ್‌, ಸಿ.ಟಿ. ರವಿ ಪರ ಹೈಕಮಾಂಡ್‌

Team Udayavani, Jun 20, 2024, 6:50 AM IST

bjpಪರಿಷತ್‌ ವಿಪಕ್ಷ ನಾಯಕ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರೀ ಪೈಪೋಟಿ

ಬೆಂಗಳೂರು: ವಿಧಾನ ಪರಿಷತ್‌ ವಿಪಕ್ಷ ನಾಯಕನ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಈಗ ಭಾರೀ ಲಾಬಿ ಪ್ರಾರಂಭವಾಗಿದ್ದು, ಒಕ್ಕಲಿಗ, ದಲಿತ ಅಥವಾ ಒಬಿಸಿ ಸಮುದಾಯದ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದೆ.

ಸಿ.ಟಿ. ರವಿ, ಛಲವಾದಿ ನಾರಾಯಣಸ್ವಾಮಿ ಹಾಗೂ ಎನ್‌.ರವಿಕುಮಾರ್‌ ಮಧ್ಯೆ ಈ ಸ್ಥಾನಕ್ಕಾಗಿ ಪೈಪೋಟಿ ಸೃಷ್ಟಿಯಾಗಿದ್ದು, ಛಲವಾದಿ ನಾರಾಯಣಸ್ವಾಮಿ ಪರ ವಿಧಾನಸಭೆಯ ವಿಪಕ್ಷ ನಾಯಕ ಆರ್‌. ಅಶೋಕ್‌ ಬ್ಯಾಟಿಂಗ್‌ ಪ್ರಾರಂಭಿಸಿದ್ದಾರೆ. ಆದರೆ, ಕಾಂಗ್ರೆಸ್‌ನಿಂದ ವಲಸೆ ಬಂದವರಿಗೆ ಈ ಆಯಕಟ್ಟಿನ ಸ್ಥಾನ ಕೊಡಲು ಬಿಜೆಪಿ ವರಿಷ್ಠರು ಒಪ್ಪುವರೇ? ಎಂಬ ಪ್ರಶ್ನೆ ಉದ್ಭವವಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ವಿಧಾನಸಭೆ, ವಿಧಾನ ಪರಿಷತ್‌ ಎರಡೂ ಕಡೆ ಹಳೇ ಮೈಸೂರು ಭಾಗಕ್ಕೆ ಮಣೆ ಹಾಕಿದಂತಾಗುತ್ತದೆ.

ಈ ಸ್ಥಾನದ ಮೇಲೆ ಸಿ.ಟಿ.ರವಿ ಕಣ್ಣಿಟ್ಟಿದ್ದು, ಹೈಕಮಾಂಡ್‌ ನಾಯಕರ ಮೂಲಕ ಒತ್ತಡ ಹೇರಲಾಗುತ್ತಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಬೆಂಬಲ ಅವರಿಗೆ ಲಭಿಸುವ ಸಾಧ್ಯತೆ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸಿ.ಟಿ.ರವಿ ವಿಚಾರದಲ್ಲಿ ತುಸು ಮೆತ್ತಗಾಗಿದ್ದಾರೆ. ಈ ಕಾರಣಕ್ಕಾಗಿಯೇ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ಮುನ್ನೆಲೆಗೆ ಬಂದ ಸಂದರ್ಭದಲ್ಲಿ ಸಿ.ಟಿ.ರವಿ ಏಕಾಂಗಿಯಾಗಿ ವಕಾಲತ್ತು ವಹಿಸಿದ್ದು ಬಿಜೆಪಿಯ ಬದಲಾದ ರಾಜಕೀಯ ಸಮೀಕರಣದ ಸಂಕೇತ ಎಂದು ಹೇಳಲಾಗುತ್ತಿದೆ.

ಅಧಿವೇಶನ ವೇಳೆ ನೇಮಕ?
ವಿಪಕ್ಷ ನಾಯಕ ಸ್ಥಾನದ ವಿಚಾರದಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಅಳೆದೂ-ತೂಗಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಸನ್ನಿವೇಶ ಆಧರಿಸಿ ಸಿ.ಟಿ.ರವಿ ಅಥವಾ ಎನ್‌. ರವಿಕುಮಾರ್‌ ಪರ ಅವರ ನಿಲುವು ತೆಗೆದುಕೊಳ್ಳುವ ಸಾಧ್ಯತೆ ಇದೆ. ಮಳೆಗಾಲದ ಅಧಿವೇಶನದಲ್ಲಿಯೇ ವಿಪಕ್ಷ ನಾಯಕ ಸ್ಥಾನಕ್ಕೆ ನೇಮಕವಾಗುವ ಸಾಧ್ಯತೆ ದಟ್ಟವಾಗಿದ್ದು, ತೆರೆಮರೆಯಲ್ಲಿ ಪ್ರಯತ್ನ ಬಿರುಸಾಗಿ ಸಾಗಿದೆ.

 

Ad

ಟಾಪ್ ನ್ಯೂಸ್

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

Mumbai; ಹಲ್ಲೆಕೋರ ಮಹಾರಾಷ್ಟ್ರ “ಶಿಂಧೆ’ ಶಾಸಕನ ವಿರುದ್ಧ 2 ದಿನ ಬಳಿಕ ಎಫ್ಐಆರ್‌

Mumbai; ಹ*ಲ್ಲೆಕೋರ ಮಹಾರಾಷ್ಟ್ರ “ಶಿಂಧೆ’ ಶಾಸಕನ ವಿರುದ್ಧ 2 ದಿನ ಬಳಿಕ ಎಫ್ಐಆರ್‌

ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌

ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌

ಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆ

ಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆ

Kolukkumala; ಹೂ ಬದಲು ಹುಲಿಯ ದರ್ಶನ: ಸ್ವಲ್ಪದರಲ್ಲೇ ಕೇರಳ ಚಾರಣಿಗ ಪಾರು

Kolukkumala; ಹೂ ಬದಲು ಹುಲಿಯ ದರ್ಶನ: ಸ್ವಲ್ಪದರಲ್ಲೇ ಕೇರಳ ಚಾರಣಿಗ ಪಾರು

Mumbai: ಹಣವಿದ್ದ ಬ್ಯಾಗ್‌ ಜತೆ ಮಹಾರಾಷ್ಟ್ರ ಸಚಿವ: ವಿಪಕ್ಷಗಳಿಂದ ಟೀಕೆ

Mumbai: ಹಣವಿದ್ದ ಬ್ಯಾಗ್‌ ಜತೆ ಮಹಾರಾಷ್ಟ್ರ ಸಚಿವ: ವಿಪಕ್ಷಗಳಿಂದ ಟೀಕೆ

Chhattisgarh: ಒಟ್ಟು 37.5 ಲಕ್ಷ ರೂ. ಇನಾಮು ಹೊತ್ತಿದ್ದ 22 ನಕ್ಸಲರ ಶರಣಾಗತಿ

Chhattisgarh: ಒಟ್ಟು 37.5 ಲಕ್ಷ ರೂ. ಇನಾಮು ಹೊತ್ತಿದ್ದ 22 ನಕ್ಸಲರ ಶರಣಾಗತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೃದಯಾಘಾತ: ಮತ್ತೆ ನಾಲ್ವರು ದಿಢೀರ್‌ ಸಾವು

ಹೃದಯಾಘಾತ: ಮತ್ತೆ ನಾಲ್ವರು ದಿಢೀರ್‌ ಸಾವು

ದ್ವೇಷ ಭಾಷಣ ಮಾಡಬೇಡಿ: ಹರೀಶ್‌ ಪೂಂಜಗೆ ಹೈಕೋರ್ಟ್‌

ದ್ವೇಷ ಭಾಷಣ ಮಾಡಬೇಡಿ: ಹರೀಶ್‌ ಪೂಂಜಗೆ ಹೈಕೋರ್ಟ್‌

ಯುಜಿಸಿಇಟಿ: ಆಪ್ಷನ್‌ ಎಂಟ್ರಿ ದಿನಾಂಕ ವಿಸ್ತರಣೆ

KEA; ಯುಜಿಸಿಇಟಿ: ಆಪ್ಷನ್‌ ಎಂಟ್ರಿ ದಿನಾಂಕ ವಿಸ್ತರಣೆ

ಹೈಕೋರ್ಟ್‌

ಸಿಬಿಎಸ್‌ಸಿ ಶಾಲೆಗಳಲ್ಲಿ ಕನ್ನಡ ಕಡ್ಡಾಯ: ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್‌ ಸೂಚನೆ

High Court: ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಆರೋಪ; ಸಿಎಂ ವಿರುದ್ಧದ ವಿಚಾರಣೆಗೆ ತಡೆ

High Court: ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಆರೋಪ; ಸಿಎಂ ವಿರುದ್ಧದ ವಿಚಾರಣೆಗೆ ತಡೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

police

ಬಾಕಿ ಬಿಲ್‌ ಕೇಳಿದ ಮಾಲಕ: ಅಂಗಡಿ ಬ್ಯಾನರ್‌ಗೆ ಬೆಂಕಿ ಹಚ್ಚಿದ ಗ್ರಾಹಕ

arrest-lady

ವಿಚಾರಣಾಧೀನ ಕೈದಿಗೆ ನೀಡಲು ತಂದಿದ್ದ ಅನುಮಾನಾಸ್ಪದ ಪುಡಿ; ಮಹಿಳೆ ವಶಕ್ಕೆ

Malpe ಸೈಂಟ್‌ ಮೇರಿಸ್‌ ಬಳಿ ನಾಡದೋಣಿ ದುರ್ಘ‌ಟನೆ: ದೋಣಿ ಮಗುಚಿ ಓರ್ವ ಸಾವು, ಇಬ್ಬರಿಗೆ ಗಾಯ

Malpe ಸೈಂಟ್‌ ಮೇರಿಸ್‌ ಬಳಿ ನಾಡದೋಣಿ ದುರ್ಘ‌ಟನೆ: ದೋಣಿ ಮಗುಚಿ ಓರ್ವ ಸಾವು, ಇಬ್ಬರಿಗೆ ಗಾಯ

bosaraju

ಕೊಡಗಿನಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ: ಮುನ್ನೆಚ್ಚರ ವಹಿಸಲು ಸಚಿವರ ಸೂಚನೆ

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.