Udayavni Special

ಮೋಜು, ಮಸ್ತಿಗೆ ವಂಡರ್‌ ಲಾ ಬೆಸ್ಟ್‌!

Team Udayavani, Sep 26, 2019, 3:06 AM IST

moju

ಬೆಂಗಳೂರು: “ನಗರದ ಪ್ರೇಕ್ಷಣೀಯ ಸ್ಥಳಗಳಲ್ಲಿ ವಂಡರ್‌ಲಾ ಪಾರ್ಕ್‌ ಸಹ ಒಂದಾಗಿದೆ’ಎಂದು ನಟಿ ಹರಿಪ್ರಿಯಾ ಹೇಳಿದರು. ಮೈಸೂರು ರಸ್ತೆಯ ವಂಡರ್‌ಲಾದಲ್ಲಿ ವೇವ್‌ ರೈಡರ್‌ ಹಾಗೂ ಡ್ರಾಪ್‌ ಲೂಪ್‌ ಎನ್ನುವ ಎರಡು ನೂತನ ರೈಡ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹೊರ ರಾಜ್ಯಗಳಿಂದ ಹಾಗೂ ಬೇರೆ ಬೇರೆ ನಗರಗಳಿಂದ ಬರುವ ಪರಿಚಯಸ್ಥರು ಬೆಂಗಳೂರಿನಲ್ಲಿ ಯಾವೆಲ್ಲ ಪ್ರೇಕ್ಷಣೀಯ ಸ್ಥಳಗಳು ಇವೆ ಎಂದು ಕೇಳಿದರೆ, ವಂಡರ್‌ ಲಾಗೆ ತಪ್ಪದೆ ಹೋಗಿ ಎಂದು ಸಜೆಸ್ಟ್‌ ಮಾಡುತ್ತೇನೆ ಎಂದರು.

ಈಗ ಮೋಜು ಮಾಡುವುದರ ಜತೆಗೆ ವಿಶ್ರಾಂತಿಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಂದಿಗೆ ವಂಡರ್‌ಲಾದಲ್ಲಿ ಉತ್ತಮ ಆಹಾರ ವ್ಯವಸ್ಥೆಯೂ ಇರುವುದರಿಂದ ವಂಡರ್‌ ಲಾ ಥ್ರಿಲ್‌ ನೀಡಲಿದೆ. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಮೋಜು ಮಾಡುವುದಕ್ಕೆ ಸೂಕ್ತವಾದ ಸ್ಥಳ ಇದಾಗಿದೆ ಎಂದರು.

ವಂಡರ್‌ಲಾ ಪಾರ್ಕ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್‌ ಜೋಸೆಫ್ ಮಾತನಾಡಿ, ವಂಡರ್‌ಲಾ ಪಾರ್ಕ್‌ ನಲ್ಲಿ ಈಗಾಗಲೇ 64 ರೀತಿಯ ವಿವಿಧ ಥ್ರಿಲ್‌ ನೀಡುವ ರೈಡ್‌ (ಆಟಗಳು) ಇದ್ದು, ಈಗ ಹೊಸದಾಗಿ ವೇವ್‌ ರೈಡರ್‌ ಹಾಗೂ ಡ್ರಾಪ್‌ ಲೂಪ್‌ ರೈಡ್‌ಗಳನ್ನು ಪರಿಚಯಿಸಲಾಗಿದೆ. ವೇವ್‌ ರೈಡರ್‌ ಅನ್ನು ಇಟಲಿಯಿಂದ ಆಮದು ಮಾಡಿಕೊಳ್ಳಲಾಗಿದ್ದು, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಇದರಲ್ಲಿ ರೈಡ್‌ ಮಾಡುವವರಿಗೆ ಶೌಲ್ಡರ್‌ ಲಾಕ್‌ ಹಾಗೂ ಲಾಜಿಕ್‌ ಕಂಟ್ರೋಲರ್‌ಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.  ಅದೇ ರೀತಿ ಡ್ರಾಪ್‌ ಲೂಪ್‌ ಸಹ ವಿಶೇಷ ಅನುಭವ ನೀಡಲಿದ್ದು, 12 ಮೀಟರ್‌ ಎತ್ತರದಿಂದ ಕೆಳಗೆ ನೀರಿನಲ್ಲಿ ಟ್ಯೂಬ್‌ನ ಮೂಲಕ ಇಳಿಸಲಾಗುತ್ತದೆ ಎಂದು ಹೇಳಿದರು.

ವಂಡರ್‌ಲಾ ನಿರ್ದೇಶಕರಾದ ಅರುಣ್‌ ಕೆ. ಚಿಟ್ಟಿಲಪಿಲ್ಲಿ ಮಾತನಾಡಿ, ದಸರಾ ಹಬ್ಬದ ಹಿನ್ನೆಲೆಯಲ್ಲಿ “ದಸರಾ ಧಮಾಕ ‘ಎನ್ನುವ ವಿಶೇಷ ಪ್ಯಾಕೇಜ್‌ ಪ್ರಾರಂಭಿಸಲಾಗಿದೆ. ಸೆ.28ರಿಂದ ಅ.8 ವರೆಗೆ ಪ್ಯಾಕೇಜ್‌ ಇರಲಿದೆ. ಟಿಕೆಟ್‌ ದರ ತಲಾ 1480 ರೂ. ನಿಗದಿ ಮಾಡಲಾಗಿದೆ. ದಸರಾ ಧಮಾಕದ ಅಂಗವಾಗಿ ಮ್ಯಾಜಿಕ್‌ ಶೋ, ಡಿಜೆ, ವಿವಿಧ ವಿಶೇಷ ಆಹಾರ ಮೇಳ, ಶಿಂಗಾರಿ ಮೇಳವನ್ನು ಆಯೋಜಿಸಲಾಗಿದೆ ಎಂದರು.

ವಂಡರ್‌ ಲಾ ಪಾರ್ಕ್‌ಗೆ ಬರುವರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವಂಡರ್‌ ಲಾದಲ್ಲಿ ಯಾವುದೇ ಅನಾಹುತ ಸಂಭವಿಸದ ರೀತಿಯಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ಶುದ್ಧತೆಯನ್ನೂ ಕಾಪಾಡಿಕೊಳ್ಳಲಾಗುತ್ತಿದೆ ಎಂದರು. ಪ್ರತಿಯೊಬ್ಬರಿಗೆ ಸಾಮಾನ್ಯ ದಿನಗಳಲ್ಲಿ ಟಿಕೆಟ್‌ ದರ ತಲಾ 1089 ರೂ. ಹಾಗೂ ವಾರಾಂತ್ಯದಲ್ಲಿ 1395 ರೂ. ನಿಗದಿ ಮಾಡಲಾಗಿದೆ.

ಈಗ ವಂಡರ್‌ಕ್ಲಬ್‌ ಸದಸ್ಯತ್ವ ಪಡೆಯಲು ಇಚ್ಛಿಸುವವರಿಗೆ ಗೋಲ್ಡ್‌ ಹಾಗೂ ಡೈಮಂಡ್‌ ಎನ್ನುವ ಎರಡು ವಿಶೇಷ ಕಾರ್ಡ್‌ ನೀಡಲಾಗುತ್ತಿದೆ. ಸದಸ್ಯತ್ವ ಪಡೆಯುವ ಮೂಲಕ ವಿಶೇಷ ಕೊಡುಗೆಗಳನ್ನು ಪಡೆಯ ಬಹುದು. ದಂಪತಿಗಳು, ಯುವಕ, ಯುವತಿಯರು ಹಾಗೂ ಕುಟುಂಬ ಸದಸ್ಯರಿಗೆ ಪ್ರತ್ಯೇಕ ವಿಭಾಗಗಳಿದ್ದು ಮೂರರಿಂದ ಆರು ವರ್ಷದ ವರೆಗೆ ಈ ಕಾರ್ಡ್‌ಗಳನ್ನು ಬಳಸಬಹುದಾಗಿದೆ.

ದಂಪತಿಗಳಿಗೆ ಗೋಲ್ಡ್‌ ಕಾರ್ಡ್‌ ಪರಿಚಯಿಸಲಾಗಿದ್ದು ಮೂರು ವರ್ಷಕ್ಕೆ 18,299 ರೂ. ಹಾಗೂ ಡೈಮಂಡ್‌ ಕಾರ್ಡ್‌ ಆರು ವರ್ಷಕ್ಕೆ 33,999 ರೂ. ಇದೆ. ಕುಟುಂಬ ಸದಸ್ಯರಿಗೆ ಗೋಲ್ಡ್‌ ಕಾರ್ಡ್‌ ಮೂರು ವರ್ಷಕ್ಕೆ 25 ಸಾವಿರ ಹಾಗೂ ಡೈಮಂಡ್‌ ಕಾರ್ಡ್‌ ಆರು ವರ್ಷಕ್ಕೆ 47,500 ರೂ. ನಿಗದಿ ಮಾಡ‌ಲಾಗಿದೆ. ಹೆಚ್ಚಿನ ಮಾಹಿತಿಗೆ 9945500011 ಸಂಪರ್ಕಿಸಬಹುದು.

ಟಾಪ್ ನ್ಯೂಸ್

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ನಳಿನ್ ಕುಮಾರ್ ಕಟೀಲ್

ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ನಳಿನ್ ಕುಮಾರ್ ಕಟೀಲ್

100 ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :  ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

100ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್‌ ಮೋದಿಗೆ ಮತ್ತೆ ನಿರಾಶೆ

ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್‌ ಮೋದಿಗೆ ಮತ್ತೆ ನಿರಾಶೆ

babul supriyo

ಸಂಸದ ಸ್ಥಾನಕ್ಕೆ ಬಾಬುಲ್‌ ಸುಪ್ರಿಯೋ ಅಧಿಕೃತ ರಾಜೀನಾಮೆ

fftytry

ಬಸ್‌ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ 

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದಲ್ಲಿ ಕೇಸರಿ ನಿಷೇಧ ಆಗಿದೆಯೇ: ಆರಗ ಪ್ರಶ್ನೆ

ದೇಶದಲ್ಲಿ ಕೇಸರಿ ನಿಷೇಧ ಆಗಿದೆಯೇ: ಆರಗ ಪ್ರಶ್ನೆ

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಆರು ಮಂದಿ ಸಾಧಕರಿಗೆ 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಆರು ಮಂದಿ ಸಾಧಕರಿಗೆ 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಅಸಹಾಯಕತೆಯಿಂದ ಅಸಂಬದ್ಧ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ: ಸಚಿವ ಸುನೀಲ್ ಕುಮಾರ್

ಅಸಹಾಯಕತೆಯಿಂದ ಅಸಂಬದ್ಧ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ: ಸಚಿವ ಸುನೀಲ್ ಕುಮಾರ್

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ನಳಿನ್ ಕುಮಾರ್ ಕಟೀಲ್

ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ನಳಿನ್ ಕುಮಾರ್ ಕಟೀಲ್

100 ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :  ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

100ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್‌ ಮೋದಿಗೆ ಮತ್ತೆ ನಿರಾಶೆ

ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್‌ ಮೋದಿಗೆ ಮತ್ತೆ ನಿರಾಶೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.