ಭೀಕರ ಭೂಕಂಪ: ತಾಯಿ, ಅಣ್ಣ, ಅಕ್ಕನನ್ನು ಕಳೆದುಕೊಂಡ 18 ತಿಂಗಳ ಪುಟ್ಟ ಬಾಲೆಯ ಆರ್ತನಾದ…

Team Udayavani, Feb 7, 2023, 11:00 AM IST

tdy-4

ಅಜಾಜ್‌ (‌ ಸಿರಿಯಾ): ಭೀಕರ ಭೂಕಂಪಕ್ಕೆ ಟರ್ಕಿ, ಸಿರಿಯಾ ದೇಶಗಳು ಅಕ್ಷರಶಃ ಸ್ಮಶಾನದಂತಾಗಿದೆ. 4 ಸಾವಿರಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಮನೆಯಲ್ಲಿ ಮಲಗಿದ್ದ, ಆಗಷ್ಟೇ ಎದ್ದು ಅಡುಗೆ ಮನೆಗೆ ಕೆಲಸಕ್ಕೆ ಹೊರಟ್ಟಿದ್ದ ಗೃಹಿಣಿಯರು, ಮೈಕೊರೆಯುವ ಚಳಿಗೆ ಬೆಚ್ಚಗೆಯ ಹೊದಿಕೆಯನ್ನು ಹೊತ್ತು ಮಲಗಿದ್ದ ಪುಟ್ಟ ಪುಟಾಣಿಗಳು ಒಮ್ಮೆಗೆ ಕಂಪಿಸಿದ ಭೂಮಿಗೆ ಶವವಾಗಿ ಹೋಗಿದ್ದಾರೆ. ನಿದ್ದೆಯಲ್ಲೇ ಇದ್ದ ಅದೆಷ್ಟೋ ಮಂದಿ ಸಾವಿನ ನಿದ್ದೆಗೆ ಜಾರಿದ್ದಾರೆ. ಯಾರೋ ಅದೆಲ್ಲೋ ಬಿದ್ದ ಕಟ್ಟಡದ ಅಡಿಯಿಂದ, ಕತ್ತಲ ಕೂಪದಿಂದ ಸಹಾಯ ಮಾಡಿ, ಉಸಿರು ಗಟ್ಟುತ್ತಿದೆ ಎಂದು ಕಿರುಚುತ್ತಿದ್ದಾರೆ. ಆದರೆ ಆ ಧ್ವನಿ ಹೊರಗೆ ಯಾರಿಗೂ ಕೇಳುತ್ತಿಲ್ಲ. ಮೈಮೇಲೆ ಇಡೀ ಕಟ್ಟಡವೇ ಬಿದ್ದು ನೋವಿನಲ್ಲಿ ಚೀರಾಟ ಮಾಡುತ್ತಿರುವ ವ್ಯಕ್ತಿಗಳು, ಮನೆಯೇ ಬಿದ್ದು, ಅಲ್ಲೇ ಸಮಾಧಿಯಾದ ಜನರು…

ಇದು ಟರ್ಕಿ, ಸಿರಿಯಾ ದೇಶದ ಭೂಕಂಪದ ಭಯಾನಕ, ಕರುಣಾಜನಕ ದೃಶ್ಯಗಳು. ಈ ಭೀಕರತೆಯಿಂದ ಬದುಕಿ ಬಂದವರು ಹಲವರಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಸಿಬ್ಬಂದಿಗಳು ಸಾವಿರಾರು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಣೆಯಾದವರಲ್ಲಿ ಒಬ್ಬರು ಒಂದೂವರೆ ವರ್ಷದ ಪುಟ್ಟ ಹೆಣ್ಣು ಮಗು ರಘದ್ ಇಸ್ಮಾಯಿಲ್. ಚಳಿಗೆ ಹಾಕಿಕೊಂಡಿದ್ದ ಸ್ವೆಟರ್‌ ನಲ್ಲಿ ಧೂಳು ಮೆತ್ತಿಕೊಂಡಿದೆ. ಪುಟ್ಟ ಬಾಲೆಗೆ ಭೂಕಂಪ ಅಂದರೆ ಏನು ಅನ್ನೋದೇ ತಿಳಿದಿಲ್ಲ. ಆ ಭೀಕರತೆಯಿಂದ ರಕ್ಷಣೆಯಾಗಿ ಈಗ ಮಗು ಅವರ ಸಂಬಂಧಿಕರ ಕೈ ಸೇರಿದೆ.

ಸಿರಿಯಾದ ಪುಟ್ಟ ಬಾಲೆ ಈಗ ಅಂಕಲ್‌ ಮನೆಯಲ್ಲಿದೆ. ರಘದ್ ಇಸ್ಮಾಯಿಲ್ ಗೆ ಹಸಿವಾಗುತ್ತಿದೆ. ಆ ಹಸಿವಿಗೆ ತಾಯಿಯ ಎದೆ ಹಾಲು ಬೇಕು. ಅಳು ನಿಲ್ಲಿಸಿ, ಆಕೆಯೊಂದಿಗೆ ಆಡಲು ಅವಳ ಅಕ್ಕ, ಅಣ್ಣ ತಂಗಿ ಬೇಕು. ಆದರೆ ಅವರು ಯಾರೂ ಅವಳೊಂದಿಗೆ ಇಲ್ಲ. ಕಾರಣ ಭೀಕರ ಭೂಕಂಪಕ್ಕೆ ಅವರೆಲ್ಲಾ ಕೊನೆಯುಸಿರೆಳೆದಿದ್ದಾರೆ.

ರಘದ್ ಇಸ್ಮಾಯಿಲ್ ಅವರ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆನ್ನಿಗೆ ತೀವ್ರತರದ ಏಟು ಬಿದ್ದಿದೆ. ಈ ನೋವಿನಲ್ಲೇ  ತನ್ನ ಗರ್ಭಿಣಿ ಪತ್ನಿ, 4 ವರ್ಷದ ಮಗ, 5 ವರ್ಷದ ಮಗಳು ಇನ್ನಿಲ್ಲ ಎನ್ನುವ ಅತ್ಯಂತ ಆಘಾತಕಾರಿ ಸುದ್ದಿ ತಲುಪಿದೆ.

ಭೀಕರತೆಯಿಂದ ಬದುಕುಳಿದ  ರಘದ್ ಇಸ್ಮಾಯಿಲ್ ತನ್ನ ಅಂಕಲ್‌ ಮನೆಯಲ್ಲಿ ಬ್ರೆಡ್‌ ತಿನ್ನುತ್ತಿರುವ ಫೋಟೋ ಈಗ ವೈರಲ್ ಆಗಿದೆ… ತನ್ನ ತಾಯಿ, ಅಕ್ಕ, ಅಣ್ಣ ಇಲ್ಲ ಎನ್ನುವ ಅರಿವೂ ಕೂಡ ಪುಟ್ಟ ಬಾಲೆಗೆ ಇಲ್ಲ.

ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವು ನೋವಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಟರ್ಕಿಯಲ್ಲಿ 7 ದಿನ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ.

ಟಾಪ್ ನ್ಯೂಸ್

ಮೋದಿಯನ್ನೇ ಟೀಕಿಸಿದ ರಾಯಚೂರು ನಗರ ಬಿಜೆಪಿ ಶಾಸಕ: ಆಡಿಯೊ ವೈರಲ್

ಮೋದಿಯನ್ನೇ ಟೀಕಿಸಿದ ರಾಯಚೂರು ನಗರ ಬಿಜೆಪಿ ಶಾಸಕ: ಆಡಿಯೊ ವೈರಲ್

ದಕ್ಷಿಣ ಆಗ್ನೇಯ ರೈಲ್ವೆ…ಒಂದು ವರ್ಷದಲ್ಲಿ 1ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದ ಟಿಕೆಟ್ ಪರೀಕ್ಷಕ

ದಕ್ಷಿಣ ಆಗ್ನೇಯ ರೈಲ್ವೆ…ಒಂದು ವರ್ಷದಲ್ಲಿ 1ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದ ಟಿಕೆಟ್ ಪರೀಕ್ಷಕ

After gathering the opinion of the activists, the candidate was selected: Nalin Kumar Kateel

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ: ನಳಿನ್ ಕುಮಾರ್ ಕಟೀಲ್

5–sirsi

ಇಬ್ಬರು ಶಾಸಕರ ರಾಜೀನಾಮೆ? ಶಿರಸಿಯತ್ತ ಎಲ್ಲರ ಚಿತ್ತ!

IPL: Michael Vaughan Makes Bold Title Prediction

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

elephant

ಕಾಡಾನೆಯ ಹನಿಟ್ರ್ಯಾಪ್: ತೀರ್ಥಹಳ್ಳಿ ಪಟ್ಟಣಕ್ಕೆ ನುಗ್ಗಿದ್ದ ಕಾಡಾನೆಯ ಸೆರೆಯಾಗಿಸಿದ ಭಾನುಮತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

donald-trump

ಟ್ರಂಪ್ ವಿರುದ್ಧ ಕ್ರಿಮಿನಲ್ ಅರೋಪ: ಏನಿದು ಟ್ರಂಪ್- ಪಾರ್ನ್ ಸ್ಟಾರ್ ಡೇನಿಯಲ್ಸ್ ಹಣದ ವಿಚಾರ?

ಪೋಪ್‌ ಫ್ರಾನ್ಸಿಸ್‌ ಆರೋಗ್ಯದಲ್ಲಿ ಚೇತರಿಕೆ: ಇನ್ನೂ ಕೆಲ ದಿನ ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ

ಪೋಪ್‌ ಫ್ರಾನ್ಸಿಸ್‌ ಆರೋಗ್ಯದಲ್ಲಿ ಚೇತರಿಕೆ: ಇನ್ನೂ ಕೆಲ ದಿನ ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ

ಗೂಢಚರ್ಚೆ ಆರೋಪ: ಪತ್ರಕರ್ತನ ಬಂಧನ

ಗೂಢಚರ್ಚೆ ಆರೋಪ: ರಷ್ಯಾದಿಂದ ಅಮೆರಿಕಾದ ಪತ್ರಕರ್ತನ ಬಂಧನ

ಟೆಕ್ಕಿಗಳ ಸಂಗಾತಿಗೂ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ

ಟೆಕ್ಕಿಗಳ ಸಂಗಾತಿಗೂ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ

captor

ಎರಡು ಕಾಪ್ಟರ್‌ ಗಳ ಡಿಕ್ಕಿ: 9 ಅಮೆರಿಕ ಯೋಧರ ಸಾವು

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

6-sirsi

ಶಿರಸಿ: ಕೂಡ್ಲಗಿ ಶಾಸಕ ರಾಜೀನಾಮೆ