
ವಿಮಾನ ಅಪಘಾತದಲ್ಲಿ ನಾಪತ್ತೆ: 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಪತ್ತೆಯಾದ 4 ಮಕ್ಕಳು
ದಟ್ಟಾರಣ್ಯದಲ್ಲಿ ಮಕ್ಕಳು ಬದುಕಿದ್ಹೇಗೆ? ಇಲ್ಲಿದೆ ಹುಡುಕಾಟದ ರೋಚಕ ಸ್ಟೋರಿ
Team Udayavani, Jun 10, 2023, 12:25 PM IST

ಬೊಗೋಟಾ: ಕೊಲಂಬಿಯಾ ಅಮೆಜಾನ್ ಮಳೆ ಕಾಡಿನಲ್ಲಿ ನಾಪತ್ತೆಯಾಗಿದ್ದ ನಾಲ್ಕು ಮಕ್ಕಳು ಸುಮಾರು ಒಂದು ತಿಂಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದಾರೆ. ದಟ್ಟಾರಣ್ಯದಲ್ಲಿ ವಿಮಾನ ಪತನದಲ್ಲಿ ನಾಪತ್ತೆಯಾಗಿದ್ದ ಮಕ್ಕಳು ಇದೀಗ ಸುರಕ್ಷಿತ ತಾಣ ಸೇರಿದ್ದಾರೆ.
ಮೂಲತಃ ಹುಯಿಟೊಟೊ ಸ್ಥಳೀಯ ಗುಂಪಿನ, 13, ಒಂಬತ್ತು, ನಾಲ್ಕು ಮತ್ತು ಒಂದು ವರ್ಷ ವಯಸ್ಸಿನ ಮಕ್ಕಳು ಕಳೆದ ಮೇ 1 ರಿಂದ ಕಾಡಿನಲ್ಲಿ ಏಕಾಂಗಿಯಾಗಿ ಅಲೆದಾಡುತ್ತಿದ್ದರು. ಅಂದು ಅವರು ಪ್ರಯಾಣಿಸುತ್ತಿದ್ದ ಸೆಸ್ನಾ 206 ಅಪಘಾತಕ್ಕೀಡಾಗಿತ್ತು.
ಸ್ಯಾನ್ ಜೋಸ್ ಡೆಲ್ ಗುವಿಯಾರ್ ಪಟ್ಟಣಕ್ಕೆ 350 ಕಿಲೋಮೀಟರ್ (217-ಮೈಲಿ) ಪ್ರಯಾಣದಲ್ಲಿ ಅರರಾಕುರಾ ಎಂದು ಕರೆಯಲ್ಪಡುವ ಕಾಡಿನ ಪ್ರದೇಶದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳ ನಂತರ ಪೈಲಟ್ ಎಂಜಿನ್ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ವಿಮಾನದಲ್ಲಿ ನಾಲ್ಕು ಮಕ್ಕಳು, ಈ ಮಕ್ಕಳ ತಾಯಿ, ಓರ್ವ ಸ್ಥಳೀಯ ನಾಯಕ ಮತ್ತು ಪೈಲಟ್ ಇದ್ದರು. ಏಳು ಮಂದಿಯಿದ್ದ ಸಿಂಗಲ್ ಇಂಜಿನ್ ನ ವಿಮಾನ ಅಮೆಜಾನ್ ಕಾಡಿನಲ್ಲಿ ಅಪಘಾತಕ್ಕೀಡಾಗಿತ್ತು.
ಪೈಲಟ್, ಮಕ್ಕಳ ತಾಯಿ ಮತ್ತು ಸ್ಥಳೀಯ ಸ್ಥಳೀಯ ನಾಯಕನ ದೇಹಗಳು ಅಪಘಾತದ ಸ್ಥಳದಲ್ಲಿ ಕಂಡುಬಂದಿದ್ದವು. ಆದರೆ ಮಕ್ಕಳು ಪತ್ತೆಯಾಗಿರಲಿಲ್ಲ. ರಕ್ಷಣಾ ತಂಡವು ಕಾಡಿನಲ್ಲಿ ಹುಡುಕಾಟ ಮುಂದುವರಿಸಿತ್ತು.
160 ಮಂದಿ ಸೈನಿಕರು, 70 ಮಂದಿ ಸ್ಥಳೀಯರ ಜೊತೆಗೆ ಹುಡುಕಾಟ ನಡೆಸಲಾಗಿತ್ತು. ಈ ಪ್ರದೇಶವು ಚಿರತೆಗಳು, ಹಾವುಗಳು ಮತ್ತು ಇತರ ಪರಭಕ್ಷಕಗಳ ನೆಲೆಯಾಗಿದೆ. ಜೊತೆಗೆ ಶಸ್ತ್ರಸಜ್ಜಿತ ಮಾದಕವಸ್ತು ಕಳ್ಳಸಾಗಣೆ ಗುಂಪುಗಳಿಗೂ ಇದು ನೆಲೆಯಾಗಿದೆ. ಆದರೆ ಹೆಜ್ಜೆಗುರುತುಗಳು, ಡಯಾಪರ್, ಅರ್ಧ-ತಿನ್ನಲಾದ ಹಣ್ಣುಗಳು ಮುಂತಾದ ಸುಳಿವುಗಳನ್ನು ಆಧರಿಸಿ ರಕ್ಷಣಾ ತಂಡವು ಗುರಿ ತಲುಪಿತು.
ಮಕ್ಕಳು ಅಲೆದಾಡುವುದನ್ನು ಮುಂದುವರೆಸುವ ಕಾರಣ ಅವರನ್ನು ಪತ್ತೆಹಚ್ಚಲು ಹೆಚ್ಚು ಕಷ್ಟಕರವಾಗುವುದರಿಂದ ವಾಯುಪಡೆಯು ಸ್ಪ್ಯಾನಿಷ್ ಮತ್ತು ಮಕ್ಕಳ ಸ್ವಂತ ಸ್ಥಳೀಯ ಭಾಷೆಯಲ್ಲಿ ಸೂಚನೆಗಳೊಂದಿಗೆ 10,000 ಫ್ಲೈಯರ್ ಗಳನ್ನು ಕಾಡಿಗೆ ಎಸೆದಿದ್ದರು. ಇದರಲ್ಲಿ ಮಕ್ಕಳಿಗೆ ಸ್ಥಳದಲ್ಲಿಯೇ ಇರಲು ಸೂಚಿಸಲಾಗಿತ್ತು.
ಮಿಲಿಟರಿ ಆಹಾರದ ಪೊಟ್ಟಣಗಳು ಮತ್ತು ಬಾಟಲ್ ನೀರನ್ನು ಅಲ್ಲಲ್ಲಿ ಎಸೆಯಲಾಗಿತ್ತು. ಮಕ್ಕಳ ಅಜ್ಜಿ ರೆಕಾರ್ಡ್ ಮಾಡಿದ ಸಂದೇಶವನ್ನು ಪ್ರಸಾರ ಮಾಡುತ್ತಿದ್ದರು, ಅವರನ್ನು ಚಲಿಸದಂತೆ ಸೂಚಿಸುತ್ತಿದ್ದರು.
ಮಿಲಿಟರಿ ಮಾಹಿತಿಯ ಪ್ರಕಾರ, ಅಪಘಾತದ ಸ್ಥಳದಿಂದ ಪಶ್ಚಿಮಕ್ಕೆ ಐದು ಕಿಲೋಮೀಟರ್ (ಮೂರು ಮೈಲುಗಳು) ದೂರದಲ್ಲಿ ಮಕ್ಕಳನ್ನು ಪತ್ತೆ ಮಾಡಲಾಗಿದೆ.
ಮಕ್ಕಳು ಸುರಕ್ಷಿತವಾಗಿ ಸಿಕ್ಕಿದ ವಿಚಾರವನ್ನು ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೊ ಹಂಚಿಕೊಂಡಿದ್ದಾರೆ. “ಇಂದು ನಮಗೆ ಮ್ಯಾಜಿಕಲ್ ದಿನ” ಎಂದು ಪೆಟ್ರೊ ರಾಜಧಾನಿ ಬೊಗೋಟಾದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

USA: ವಿವೇಕ್ ಜತೆ ಊಟಕ್ಕೆ 41 ಲಕ್ಷ ರೂ !

Britain: ಸಿಗರೇಟ್ ನಿಷೇಧಕ್ಕೆ ಬ್ರಿಟನ್ ಚಿಂತನೆ

Nikki Haley: ಅಮೆರಿಕದ ಮೇಲೆ ಯುದ್ಧ ಸಾರಲು ಚೀನಾ ಸಿದ್ಧತೆ ನಡೆಸುತ್ತಿದೆ: ನಿಕ್ಕಿ ಹ್ಯಾಲೆ

UNGA; “ಜಮ್ಮು ಕಾಶ್ಮೀರ ನಮ್ಮದೇ..”: ವಿಶ್ವಸಂಸ್ಥೆಯಲ್ಲಿ ಪಾಕ್ ಗೆ ಭಾರತದ ಖಡಕ್ ಉತ್ತರ

ಖಲಿಸ್ತಾನಿ ಹತ್ಯೆಯ ಗುಪ್ತಚರ ಮಾಹಿತಿಯನ್ನು ವಾರದ ಹಿಂದೆ ಭಾರತಕ್ಕೆ ನೀಡಲಾಗಿತ್ತು: ಟ್ರೂಡೊ
MUST WATCH
ಹೊಸ ಸೇರ್ಪಡೆ

World Cup 2023; ರೋಹಿತ್- ವಿರಾಟ್ ಗಿಂತ ಬಾಬರ್ ಅಜಂ ಉತ್ತಮ ಪ್ರದರ್ಶನ ನೀಡಬಹುದು: ಗಂಭೀರ್

Kumta ; ಮಸೀದಿಯಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮೌಲ್ವಿಯ ಬಂಧನ

Doddaballapur:15 ಟನ್ ಗೋ ಮಾಂಸ ಸಾಗಿಸುತ್ತಿದ್ದ ಏಳು ಮಂದಿಯ ಬಂಧನ

Video: ಬೈಕ್‌ನಲ್ಲಿ ಚಲಿಸುವ ವೇಳೆ ಹಾವು ಕಡಿತ; ಸೆರೆ ಹಿಡಿದ ಹಾವಿನಿಂದಲೇ ಪ್ರಾಣ ಹಾನಿ.!

ಪ್ರೀತಿ, ಗೀತಿ ಇತ್ಯಾದಿ…: ನೆಚ್ಚಿನವಾಡು ತೆಲುಗು ಸಿನಿಮಾ