
ಅತೀ ಕಿರಿಯ ವಯಸ್ಸಿನಲ್ಲಿ ಪುಸ್ತಕ ಬರೆದು ವಿಶ್ವ ದಾಖಲೆ ನಿರ್ಮಿಸಿದ 4ರ ಪೋರ
Team Udayavani, Apr 1, 2023, 8:45 PM IST

ದುಬಾಯಿ: ಸಾಧನೆ ಮಾಡಲು ವಯಸ್ಸಿನ ಹಂಗಿಲ್ಲ ಎಂಬುದನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನ ಪೋರನೊಬ್ಬ ಸಾಬೀತು ಮಾಡಿದ್ದಾನೆ.
ಹೌದು ಇಲ್ಲಿನ ನಾಲ್ಕು ವರ್ಷದ ಪೋರನೊಬ್ಬ ತನ್ನ ಅತೀ ಕಿರಿಯ ವಯಸ್ಸಿನಲ್ಲಿ ಪುಸ್ತಕ ಬರೆಯುವ ಮೂಲಕ ವಿಶ್ವ ದಾಖಲೆಯನ್ನೇ ಬರೆದಿದ್ದಾನೆ.
ಅಬುಧಾಬಿಯ ನಿವಾಸಿಯಾಗಿರುವ ಸಯೀದ್ ರಶೆದ್ ಅಲ್ ಮ್ಹೇರಿ ಎಂಬ ಪುಟ್ಟ ಬಾಲಕನೇ ತನ್ನ ನಾಲ್ಕನೇ ವರ್ಷಕ್ಕೆ ಪುಸ್ತಕ ಬರೆದು ಜಗತ್ತಿನಾದ್ಯಂತ ಮೆಚ್ಚುಗೆಗೆ ಪಾತ್ರನಾಗಿದ್ದಾನೆ ಜೊತೆಗೆ ಅತೀ ಕಿರಿಯ ವಯಸ್ಸಿನಲ್ಲಿ ಪುಸ್ತಕ ಬರೆದ ಹೆಗ್ಗಳಿಕೆಯೂ ಈತನ ಮೇಲಿದೆ.
ಸಯೀದ್ ರಶೆದ್ ಅಲ್ ಮ್ಹೇರಿ ಬರೆದ ‘ದಿ ಎಲಿಫೆಂಟ್ ಸೀಡ್ಸ್ ಆಂಡ್ ಬೇರ್’ ಮಕ್ಕಳ ಕಥೆ ಮಾರ್ಚ್ 9ಕ್ಕೆ ಸುಮಾರು ಒಂದು ಸಾವಿರ ಪ್ರತಿಗಳು ಮಾರಾಟವಾದೆ ಅಲ್ಲದೆ ಈ ದಾಖಲೆಯನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಬಾಲಕ ಸಯೀದ್ ಪುಸ್ತಕವನ್ನು ಬರೆಯಲು ಎಂಟು ವರ್ಷದ ಸಹೋದರಿ ಅಲ್ದಾಬಿ ಅವರಿಂದ ಸ್ಫೂರ್ತಿ ಪಡೆದಿದ್ದಾನಂತೆ. ಬಾಲಕನ ಸಹೋದರಿ ದ್ವಿಭಾಷಾ ಪುಸ್ತಕ ಸರಣಿಯನ್ನು ಪ್ರಕಟಿಸಿದ ಅತ್ಯಂತ ಕಿರಿಯ ಮಹಿಳೆ ಎಂಬ ದಾಖಲೆಯನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ.
ತಮ್ಮ ಮಗ ಮತ್ತು ಮಗಳ ಸಾಧನೆಯ ಕುರಿತಂತೆ ಪೋಷಕರು ಸಂತಸ ವ್ಯಕ್ತಪಡಿಸಿದ್ದು. ತಮ್ಮ ಮಕ್ಕಳು ಇತರರಿಗೆ ಮಾದರಿಯಾಗಿದ್ದಾರೆ. ಅವರ ಸಾಧನೆಗೆ ನಾವು ಬೆನ್ನೆಲುಬಾಗಿ ನಿಂತಿದ್ದೇವೆ ಎಂದು ಪೋಷಕರು ಹೇಳಿದ್ದಾರೆ.
ಇದನ್ನೂ ಓದಿ: ಪಂದ್ಯಕ್ಕೆ ಮಳೆ ಅಡ್ಡಿ : ಕೆಕೆಆರ್ ವಿರುದ್ಧ 7 ರನ್‌ಗಳಿಂದ ಗೆದ್ದ ಪಂಜಾಬ್ ಕಿಂಗ್ಸ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
