ಇಸ್ರೋ ಚಂದ್ರಯಾನವನ್ನು ಅಣಕವಾಡಿದ್ದ ಪಾಕ್ ಸಚಿವನ ’40 GB’ ಟ್ವೀಟ್ ರಹಸ್ಯವೇನು?

ಏಳು ವರ್ಷಗಳ ಹಿಂದೆ ಫವಾದ್ ಮಾಡಿದ್ದ ಪೋಲಿ ಟ್ವೀಟ್ ನ ಅರ್ಥವೇನು ಗೊತ್ತಾ?

Team Udayavani, Sep 9, 2019, 5:30 PM IST

ಇಸ್ಲಾಮಾಬಾದ್: ಭಾರತ ಮಾತ್ರವಲ್ಲದೇ ವಿಶ್ವವೇ ಕಾತರದಿಂದ ಕಾಯುತ್ತಿದ್ದ ಇಸ್ರೋ ವಿಜ್ಞಾನಿಗಳ ಚಂದ್ರಯಾನ-2ರ ಅಂತಿಮ ಹಂತ, ವಿಕ್ರಂ ಲ್ಯಾಂಡರ್ ಚಂದ್ರನ ನೆಲದಲ್ಲಿ ಇಳಿಯುವ ಪ್ರಕ್ರಿಯೆ ಕೊನೇ ಕ್ಷಣದಲ್ಲಿ ವಿಫಲವಾಗಿತ್ತು. ಆದರೆ ಇಸ್ರೋ ವಿಜ್ಞಾನಿಗಳ ಈ ಸಾಧನೆಯನ್ನು ವಿಶ್ವವೇ ಕೊಂಡಾಡಿತ್ತು.

ಆದರೆ ಭಾರತದ ಪ್ರತೀ ಆಂತರಿಕ ವಿಚಾರಗಳಿಗೂ ಮೂಗು ತೂರಿಸುವ ಪ್ರವೃತ್ತಿಯನ್ನು ಹೊಂದಿರುವ ನೆರೆ ರಾಷ್ಟ್ರ ಪಾಕಿಸ್ಥಾನ ಮಾತ್ರ ಚಂದ್ರಯಾನ ಯೋಜನೆಯ ಕುರಿತಾಗಿಯೂ ತನ್ನ ಕೊಂಕು ನುಡಿಗಳನ್ನಾಡಿತ್ತು. ಅದರಲ್ಲೂ ಪಾಕಿಸ್ಥಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಟ್ವೀಟ್ ಮಾಡಿ, ‘ಓಹ್..! ಕೆಲಸಕ್ಕೆ ಬಾರದ ವಿಚಾರಗಳಲ್ಲಿ ಪಂಗಾ ತೆಗೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಡಿಯರ್ ಇಂಡಿಯಾ’ ಎಂದು ಇಸ್ರೋ ವಿಜ್ಞಾನಿಗಳ ಪ್ರಯತ್ನವನ್ನು ಅಣಕಿಸಿದ್ದರು.

ಚೌಧರಿ ಅವರ ಈ ಟ್ವೀಟ್ ಗೆ ಭಾರತದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಇನ್ನೊಂದು ಕುತೂಹಲಕರ ಬೆಳವಣಿಗೆ ಒಂದರಲ್ಲಿ ಫವಾದ್ ಚೌಧರಿ ಮದುವೆ ಕುರಿತಾಗಿ 2012ರಲ್ಲಿ ಮಾಡಿದ್ದ ಟ್ವೀಟ್ ಒಂದನ್ನು ಬಗೆದು ಇದೀಗ ಮತ್ತೆ ವೈರಲ್ ಮಾಡಲಾಗುತ್ತಿದೆ.

2012ರ ಫೆಬ್ರವರಿ 10ರ ಬೆಳ್ಳಂಬೆಳಿಗ್ಗೆ ಟ್ವೀಟ್ ಒಂದನ್ನು ಮಾಡಿದ್ದ ಫವಾದ್ ಚೌಧರಿ ಅವರು ಅದರಲ್ಲಿ ಹೀಗೆ ಬರೆದುಕೊಂಡಿದ್ದರು. ‘ಸರಿಯಾದ ಪ್ರಾಯದಲ್ಲಿ ಸರೀಯಾದ ಹುಡುಗಿಯನ್ನು ಮದುವೆಯಾಗುವುದರಿಂದ ನಿಮ್ಮ ಕಂಪ್ಯೂಟರ್ ನಲ್ಲಿ 40ಜಿಬಿ ಡಾಟಾ ಉಳಿಸಬಹುದು’ ಎಂದು ಅವರು ಬರೆದುಕೊಂಡಿದ್ದರು.

ಯುವಕರು ಸರಿಯಾದ ಪ್ರಯಾದಲ್ಲಿ ತಮಗೆ ತಕ್ಕಳಾಗಿರುವ ವಧುವನ್ನು ಮದುವೆಯಾಗುವುದರಿಂದ ಕಂಪ್ಯೂಟರ್ ನಲ್ಲಿ ‘ನೀಲಿ ಚಿತ್ರ’ಗಳನ್ನು ಶೇಖರಿಸಿಟ್ಟುಕೊಂಡು ನೋಡುವುದು ತಪ್ಪುತ್ತದೆ ಇದರಿಂದ ಕಂಪ್ಯೂಟರ್ ನಲ್ಲಿ 40 ಜಿಬಿ ಸ್ಥಳಾವಕಾಶ ಉಳಿತಾಯವಾಗುತ್ತದೆ ಎಂಬುದು ಫವಾದ್ ಅಚರ ಪೋಲಿ ಟ್ವೀಟ್ ನ ಅರ್ಥವಾಗಿತ್ತು!

ಸದಾ ಭಾರತದ ಕಾಲೆಳೆಯುವುದರಲ್ಲೇ ಆನಂದ ಕಾಣುವ ಈ ಪಾಕ್ ಸಚಿವನ ಏಳು ವರ್ಷಗಳ ಹಿಂದಿನ ಈ ಟ್ವೀಟ್ ಇದೀಗ ಮತ್ತೆ ಟ್ರೋಲ್ ಆಗತೊಡಗಿದೆ. ಭಾರತೀಯರು ಮಾತ್ರವಲ್ಲದೇ ಕೆಲವು ಪಾಕಿಸ್ಥಾನಿಯರೂ ಸಹ ಫವಾದ್ ಅವರನ್ನು ಟ್ವಿಟ್ಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಡಿಯರ್ ಇಂಡಿಯಾ ಚಂದ್ರಯಾನದಂತಹ ಹುಚ್ಚು ಸಾಹಸಗಳಿಗೆ ಮತ್ತು ಅಭಿನಂದನ್ ರಂತಹ ಮೂರ್ಖರನ್ನು ಗಡಿಪ್ರದೇಶಕ್ಕೆ ಕಳುಹಿಸುವ ಬದಲು ನಿಮ್ಮಲ್ಲಿ ಇರುವ ಬಡತನವನ್ನು ನಿವಾರಿಸುವಲ್ಲಿ ನಿಮ್ಮ ಗಮನವನ್ನು ಕೆಂದ್ರೀಕರಿಸಿ’ ಎಂದು ಇನ್ನೊಂದು ಟ್ವೀಟ್ ನಲ್ಲಿ ಫವಾದ್ ಚೌಧರಿ ಭಾರತೀಯರನ್ನು ಕೆಣಕಿದ್ದರು.


‘ಇಂತವರನ್ನು ನಮ್ಮ ಸಚಿವರೆಂದು ಹೇಳಿಕೊಳ್ಳಲು ನಮಗೆ ನಾಚಿಕೆಯಾಗುತ್ತಿದೆ’ ಎಂದು ಓರ್ವ ಪಾಕಿಸ್ಥಾನಿ ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು ಟ್ವೀಟ್ ಮಾಡಿ. ‘ನಿಜವಾಗಿಯೂ ಈ ವ್ಯಕ್ತಿ ಪಾಕಿಸ್ಥಾನದಲ್ಲಿ ಸಚಿವರೇ..?, ಅದು ಹೇಗೆ’ ಎಂದು ಕಿಡಿ ಕಾರಿದ್ದಾರೆ.

ಒಟ್ಟಿನಲ್ಲಿ ವಿಶ್ವವೇ ಶಹಬ್ಬಾಸ್ ಎಂದಿರುವ ಭಾರತದ ಚಂದ್ರಯಾನ ಪ್ರಯತ್ನವನ್ನು ಲೇವಡಿ ಮಾಡಲು ಹೋಗಿ ಸ್ವತಃ ತಾನೇ ಲೇವಡಿಗೊಳಗಾಗಿರುವ ಪಾಕಿಸ್ಥಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವನ ಪಡಿಪಾಟಲು ಇದೀಗ ಹೆಳತೀರದಾಗಿದೆ!

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ