ಈ ವರ್ಷ 49 ಪತ್ರಕರ್ತರ ಹತ್ಯೆ ; 16 ವರ್ಷಗಳಲ್ಲೇ ಇದು ಕನಿಷ್ಟ

ಪತ್ರಕರ್ತರಿಗೆ ಸಿಂಹಸ್ವಪ್ನವಾಗಿರುವ ರಾಷ್ಟ್ರಗಳು ಯಾವವು ಗೊತ್ತಾ?

Team Udayavani, Dec 17, 2019, 10:35 PM IST

Journalist-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಲಂಡನ್: 2019ರಲ್ಲಿ ವಿಶ್ವಾದ್ಯಂತ ಒಟ್ಟು 49 ಪತ್ರಕರ್ತರು ಹತ್ಯೆಗೀಡಾಗಿದ್ದಾರೆ. ಆದರೆ ಸಮಾಧಾನದ ಸಂಗತಿಯೆಂದರೆ ಕಳೆದ 16 ವರ್ಷಗಳಲ್ಲೇ ಈ ವರ್ಷ ಹತ್ಯೆಗೀಡಾಗಿರುವ ಪತ್ರಕರ್ತರ ಸಂಖ್ಯೆ ಕಡಿಮೆ. ಈ ವರ್ಷ ಒಟ್ಟು 57 ಪತ್ರಕರ್ತರನ್ನು ಒತ್ತೆಯಾಳುಗಳನ್ನಾಗಿ ಇರಿಸಲಾಗಿದೆ ಮತ್ತು 389 ಪತ್ರಕರ್ತರು ವಿವಿಧ ದೇಶಗಳ ಸೆರೆಮನೆಯಲ್ಲಿ ಬಂಧಿಸಲ್ಟಟ್ಟಿದ್ದಾರೆ. ಸೀಮಾತೀತ ವರದಿಗಾರರ ಕೂಟವೊಂದು ಸಿದ್ಧಪಡಿಸಿರುವ ವರದಿಯಲ್ಲಿ ಈ ಮಾಹಿತಿಗಳನ್ನು ನೀಡಲಾಗಿದೆ.

ಪ್ಯಾರಿಸ್ ಮೂಲದ ಪತ್ರಕರ್ತರ ಕೂಟವಾಗಿರುವ ಇದು ಹೊರತಂದಿರುವ ತನ್ನ ವರದಿಯಲ್ಲಿ ಉಲ್ಲೇಖಿಸಿರುವಂತೆ ಈ ವರ್ಷ ಹತ್ಯೆಗೀಡಾಗಿರುವ ಪತ್ರಕರ್ತರ ಸಂಖ್ಯೆ 2003ರ ಬಳಿಕ ಕನಿಷ್ಟವಾದುದಾಗಿದೆ.

ಪತ್ರಕರ್ತರಿಗೆ ಕಾರ್ಯನಿರ್ವಹಿಸಲು ಭೀತಿಯ ವಾತಾವರಣ ಇರುವ ವಿಶ್ವದ ರಾಷ್ಟ್ರಗಳ ಪಟ್ಟಿಯಲ್ಲಿ ಮೆಕ್ಸಿಕೋ, ಸಿರಿಯಾ, ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಸೋಮಾಲಿಯಾ ಅಗ್ರ ಐದು ಸ್ಥಾನಗಳನ್ನು ಪಡೆದುಕೊಂಡಿವೆ. ಮೆಕ್ಸಿಕೋ ಮತ್ತು ಸಿರಿಯಾ ದೇಶಗಳಲ್ಲಿ ಈ ವರ್ಷ ತಲಾ 10 ಪತ್ರಕರ್ತರು ಹತ್ಯೆಗೀಡಾಗಿದ್ದಾರೆ.

ಇನ್ನು ಅಫ್ಘಾನಿಸ್ಥಾನದಲ್ಲಿ ಐವರು, ಪಾಕಿಸ್ಥಾನದಲ್ಲಿ ನಾಲ್ವರು ಮತ್ತು ಸೊಮಾಲಿಯಾದಲ್ಲಿ ಮೂವರು ಪತ್ರಕರ್ತರು ಈ ವರ್ಷ ಹತ್ಯೆಗೀಡಾಗಿದ್ದಾರೆ. ವಿಶ್ವಾದ್ಯಂತ ಈ ವರ್ಷ ಹತ್ಯೆಯಾಗಿರುವ 49 ಪತ್ರಕರ್ತರಲ್ಲಿ 32 ಪತ್ರಕರ್ತರ ಹತ್ಯೆ ಈ ಐದು ದೇಶಗಳಲ್ಲೇ ನಡೆದಿದೆ ಎನ್ನುವುದು ಕಳವಳಕಾರಿ ಸಂಗತಿಯಾಗಿದೆ.

ಈ ವರ್ಷ ಹತ್ಯೆಗೀಡಾಗಿರುವ ಒಟ್ಟು 49 ಪತ್ರಕರ್ತರಲ್ಲಿ 46 ಪುರುಷರು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ. ಇನ್ನು ವರದಿಗಾರಿಕೆಯ ಸಂದರ್ಭದಲ್ಲಿ ಹತ್ಯೆಗೀಡಾದ ಪತ್ರಕರ್ತರ ಸಂಖ್ಯೆ 08 ಆಗಿದ್ದರೆ ನಿರ್ಧಿಷ್ಟವಾಗಿ ಗುರಿಯಾಗಿಸಿಕೊಂಡು 31 ಪತ್ರಕರ್ತರನ್ನು ಈ ವರ್ಷ ಹತ್ಯೆ ಮಾಡಲಾಗಿದೆ.

ಬ್ರಝಿಲ್, ಚಿಲಿ, ಮೆಕ್ಸಿಕೋ, ಹೊಂಡುರಾಸ್, ಕೊಲಂಬಿಯಾ ಮತ್ತು ಹೈಟಿಯಲ್ಲಿ ಇನ್ನೂ ಎಂಟು ಪತ್ರಕರ್ತರು ಹತ್ಯೆಗೀಡಾಗಿರುವ ವರದಿ ಲಭ್ಯವಾಗಿದ್ದು ಆದರೆ ಈ ಪ್ರಕರಣಗಳ ಪರಿಶೀಲನೆ ಬಾಕಿ ಇರುವುದರಿಂದ ಇವುಗಳನ್ನು ಈ ಪಟ್ಟಿಯಲ್ಲಿ ಪರಿಗಣಿಸಲಾಗಿಲ್ಲ ಎಂದು ಈ ಒಕ್ಕೂಟ ಮಾಹಿತಿ ನೀಡಿದೆ.

ಟಾಪ್ ನ್ಯೂಸ್

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಚಿನ್ನ ಪಡೆದು ದುಡ್ಡು ಕೊಡುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಮನಗರ: ಪತಿಯ ಕಿರುಕುಳ ತಾಳಲಾರದೆ ಗರ್ಭಿಣಿ ಆತ್ಮಹತ್ಯೆಗೆ ಶರಣು

ರಾಮನಗರ: ಪತಿಯ ಕಿರುಕುಳ ತಾಳಲಾರದೆ ಗರ್ಭಿಣಿ ಆತ್ಮಹತ್ಯೆಗೆ ಶರಣು

ಪಡಿತರ ವಿತರಣೆಗೆ ಅಗತ್ಯದಷ್ಟು ಜೋಳ, ರಾಗಿ ಸಿಗುತ್ತಿಲ್ಲ : ಸಚಿವ ಕತ್ತಿ

ಪಡಿತರ ವಿತರಣೆಗೆ ಅಗತ್ಯದಷ್ಟು ಜೋಳ, ರಾಗಿ ಸಿಗುತ್ತಿಲ್ಲ : ಸಚಿವ ಕತ್ತಿ

ಜೆಡಿಎಸ್‌ ಕೋರ್‌ ಕಮಿಟಿ: ಬಂಡೆಪ್ಪ ಸಾರಥ್ಯ ಎನ್‌.ಎಂ. ನಬಿ ಕಾರ್ಯಾಧ್ಯಕ್ಷ

ಜೆಡಿಎಸ್‌ ಕೋರ್‌ ಕಮಿಟಿ: ಬಂಡೆಪ್ಪ ಸಾರಥ್ಯ ಎನ್‌.ಎಂ. ನಬಿ ಕಾರ್ಯಾಧ್ಯಕ್ಷಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಜ್ಜ ಸಿಗರೇಟ್‌ ಸೇದಿದರೆ ಮೊಮ್ಮಗಳಿಗೆ ಕೊಬ್ಬು!

ಅಜ್ಜ ಸಿಗರೇಟ್‌ ಸೇದಿದರೆ ಮೊಮ್ಮಗಳಿಗೆ ಕೊಬ್ಬು!

ದಿವಾಳಿಯಾಗುತ್ತಿದೆ ಪಾಕಿಸ್ತಾನ; ರಸ್ತೆ ಅಡವಿಟ್ಟು ಸಾಲ ಪಡೆದ ಪಾಕ್‌!

ದಿವಾಳಿಯಾಗುತ್ತಿದೆ ಪಾಕಿಸ್ತಾನ; ರಸ್ತೆ ಅಡವಿಟ್ಟು ಸಾಲ ಪಡೆದ ಪಾಕ್‌!

ಬುರ್ಕಿನಾ ಪಾಸೊ ಅಧ್ಯಕ್ಷ ರೋಚ್ ಬಂಧನ; ಕ್ರಿಪ್ರ ಕ್ರಾಂತಿಯಲ್ಲಿ ದೇಶ ಮಿಲಿಟರಿ ವಶಕ್ಕೆ

ಬುರ್ಕಿನಾ ಪಾಸೊ ಅಧ್ಯಕ್ಷ ರೋಚ್ ಬಂಧನ; ಕ್ರಿಪ್ರ ಕ್ರಾಂತಿಯಲ್ಲಿ ದೇಶ ಮಿಲಿಟರಿ ವಶಕ್ಕೆ

ನೋವು, ಇಂದು ನಲಿವು: “ಬಾಲನೆರೆ’ ಮಹಿಳೆಯ ಕಹಾನಿ!

ಅಂದು ನೋವು, ಇಂದು ನಲಿವು: “ಬಾಲನೆರೆ’ ಮಹಿಳೆಯ ಕಹಾನಿ!

ಉಕ್ರೇನ್‌ ಸುತ್ತ “ನ್ಯಾಟೋ’ ಕವಚ

ಉಕ್ರೇನ್‌ ಸುತ್ತ “ನ್ಯಾಟೋ’ ಕವಚ

MUST WATCH

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

udayavani youtube

ಗಣರಾಜ್ಯ ದಿನದ ಮೆರವಣಿಗೆ 2022

ಹೊಸ ಸೇರ್ಪಡೆ

ವದಸಬ್ಸಬ್ಸವದ

ಆರೋಗ್ಯ ಕಾಪಾಡಿಕೊಳ್ಳಲು ಸಲಹೆ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಸ್ಗ್ಸಗಸ್ಗದಸ

ಅನುಮತಿ ಇಲ್ಲದ್ದರಿಂದ ತೆರವು

ಯತೆಯತೆಹತೆಹಗ

ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಿ: ಸಿದ್ದು 

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.