ಮನೆಮಂದಿಗೆ ಬಂದೂಕು ತೋರಿಸಿ 5 ವಾರದ ನಾಯಿ ಮರಿಯನ್ನು ಹೊತ್ತೊಯ್ದ ಕಳ್ಳರು
ಕೋಟ್ಯಂತರ ಆಸ್ತಿ ಹೋದರೂ ಪರವಾಗಿಲ್ಲ ನಾಯಿ ಮರಿ ಹುಡುಕಿಕೊಡಿ ಎಂದ ಮಾಲೀಕ
Team Udayavani, Dec 18, 2022, 3:50 PM IST
ವಾಷಿಂಗ್ಟನ್ : ಮನೆಮಂದಿ ಇರುವಾಗಲೇ ಮನೆಯ ಮುಂಬಾಗಿಲನ್ನು ಮುರಿದು ಒಳ ಪ್ರವೇಶಿಸದ ಕಳ್ಳರ ತಂಡವೊಂದು ಶಸ್ತ್ರಾಸ್ತ್ರಗಳನ್ನು ತೋರಿಸಿ ಮನೆಯಲ್ಲಿದ್ದ 5 ವಾರದ ನಾಯಿ ಮರಿಯೊಂದನ್ನು ಕದ್ದೊಯ್ದ ಘಟನೆ ವಾಷಿಂಗ್ಟನ್ ಡಿಸಿಯ ನೈಋತ್ಯ ಪ್ರದೇಶದಲ್ಲಿ ನಡೆದಿದೆ.
ಘಟನೆ ಕುರಿತು ಮೆಟ್ರೋಪಾಲಿಟನ್ ಪೊಲೀಸರಿಗೆ ಮನೆಮಂದಿ ದೂರು ನೀಡಿದ್ದಾರೆ.
ಕಳೆದ ಗುರುವಾರ ರಾತ್ರಿ ಏಳು ಗಂಟೆಯ ಸುಮಾರಿಗೆ ಶಸ್ತ್ರ ಸಜ್ಜಿತರಾಗಿ ಬಂದ ಮೂವರು ಕಳ್ಳರ ತಂಡ ವಾಷಿಂಗ್ಟನ್ ಡಿಸಿಯ ನೈಋತ್ಯ ಪ್ರದೇಶದಲ್ಲಿರುವ ಮನೆಯೊಂದರ ಮುಂಬಾಗಿಲನ್ನು ಒಡೆದು ಮನೆಯೊಳಗೆ ಪ್ರವೇಶ ಮಾಡಿ ಮನೆ ಮಾಲಿಕನಿಗೆ ಹರಿತವಾದ ಆಯುಧವನ್ನು ತೋರಿಸಿ ಬಳಿಕ ಬಂದೂಕಿನ ಗುರಿಯನ್ನು ಮಾಲೀಕನ ಹಣೆಯ ಮೇಲಿಟ್ಟು ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ ಈ ವೇಳೆ ಮನೆಯೊಳಗಿದ್ದ ಡೀಮೊ ಎಂಬ ಹೆಸರಿನ ಐದು ವಾರದ ಅಮೆರಿಕನ್ ಬುಲ್ ಡಾಗ್ ನಾಯಿ ಮರಿಯನ್ನು ಕೂಡಾ ಕಳ್ಳರು ಹೊತ್ತೊಯ್ದಿದ್ದಾರೆ.
ಘಟನೆ ನಡೆದ ಬಳಿಕ ಮನೆ ಮಾಲೀಕ ಮೆಟ್ರೋಪಾಲಿಟನ್ ಪೊಲೀಸರಿಗೆ ದೂರು ನೀಡಿದ್ದು ನಾಯಿ ಮರಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.
ಡೀಮೊ ಎಂಬ ಹೆಸರಿನ 5 ವಾರಗಳ ನಾಯಿಮರಿ ಬೂದು ಬಣ್ಣವನ್ನು ಹೊಂದಿದ್ದು. ಇದು ಮಾತ್ರವಲ್ಲದೆ ಎರಡು ಐಫೋನ್ಗಳು, ಎರಡು ಪ್ಲೇಸ್ಟೇಷನ್ಗಳು, ಒಂದು ಜೊತೆ ಕಾರ್ಟಿಯರ್ ಗ್ಲಾಸ್ಗಳು, ವಜ್ರದ ಕಿವಿಯೋಲೆಗಳು ಮತ್ತು ಚಿನ್ನದ ಉಂಗುರ ಸೇರಿದಂತೆ ಸಾವಿರಾರು ಡಾಲರ್ ಮೌಲ್ಯದ ಆಸ್ತಿಯನ್ನು ಅವರು ಕದ್ದಿದ್ದಾರೆ ಎಂದು ದೂರು ನೀಡಿದ್ದಾರೆ.
ನಾಯಿ ಮರಿ ಹುಡುಕಿ ಕೊಡುವಂತೆ ಮನವಿ:
ಕೊಟ್ಟಿಗಟ್ಟಲೆ ಮೌಲ್ಯದ ವಸ್ತುಗಳನ್ನು ಕಳೆದುಕೊಂಡರೂ ಮನೆ ಮಾಲೀಕ ಮೆನೆಯಲ್ಲಿ ಕಳೆದುಹೋದ ಯಾವ ವಸ್ತುವೂ ಸಿಗದಿದ್ದರೂ ಪರವಾಗಿಲ್ಲ ಆದರೆ ನಾಯಿ ಮರಿಯನ್ನು ಮಾತ್ರ ಹುಡುಕಿ ಕೊಡಿ ಎಂದು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮತ್ತೆ ಮಸಿ ಎರಚುವ ಬೆದರಿಕೆ: ಫೇಸ್ ಶೀಲ್ಡ್ ಧರಿಸಿದ ಮಹಾರಾಷ್ಟ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ