
ಇಂಡೋನೇಷ್ಯಾದಲ್ಲಿ 7.6 ತೀವ್ರತೆಯ ಭೂಕಂಪ, ಹಲವು ಕಟ್ಟಡಗಳಿಗೆ ಹಾನಿ ; ಸುನಾಮಿ ಎಚ್ಚರಿಕೆ
Team Udayavani, Sep 11, 2022, 9:20 AM IST

ಜಕಾರ್ತಾ: ಇಂಡೋನೇಷ್ಯಾದ ಪೂರ್ವ ಪಪುವಾ ನ್ಯೂಗಿನಿಯಾದಲ್ಲಿ ಭಾನುವಾರ ಮುಂಜಾನೆ 7.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮಡಂಗ್ ಪ್ರಾಂತ್ಯದಲ್ಲಿ ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಭೂಕಂಪದ ಬಳಿಕ ಅಮೆರಿಕದ ಜಿಯೊಲಾಜಿಕಲ್ ಸರ್ವೇ ಸಂಸ್ಥೆಯು ಸುನಾಮಿ ಸಂಭವಿಸುವ ಎಚ್ಚರಿಕೆಯ ಸಂದೇಶವನ್ನು ನೀಡಿದೆ.
ಕರಾವಳಿಯ ಸಮುದ್ರಗಳಲ್ಲಿ ಅಲೆಗಳ ಅಬ್ಬರ ಜೋರಾಗಲಿದೆ ಯಾರೂ ಸಮುದ್ರತೀರಕ್ಕೆ ತೆರಳದಂತೆ ಸೂಚನೆ ನೀಡಿದೆ. ಭೂಕಂಪನದಿಂದಾಗಿ ಪಪುವಾ ನ್ಯೂಗಿನಿಯಾದ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿದೆ ಜೊತೆಗೆ ಹಲವು ಕಟ್ಟಡಗಳಿಗೆ ಹಾನಿಯಾಗಿವೆ, ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಭೂಕಂಪನದ ಅನುಭವ ಸುಮಾರು 300 ಮೈಲಿಗಳು ದೂರದವರೆಗೂ ವ್ಯಾಪಿಸಿತ್ತು ಎನ್ನಲಾಗಿದೆ. ಕೆಲವು ಪ್ರದೇಶಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳಲ್ಲಿ ಭೂ ಕಂಪನದ ದೃಶ್ಯ ಸೆರೆಹಿಡಿಯಲಾಗಿದೆ.
ಇಂಡೋನೇಷ್ಯಾದ ವೆಸ್ಟ್ ಪಪುವಾ ಪ್ರಾಂತ್ಯದಲ್ಲಿ ನಿನ್ನೆಯಷ್ಟೇ (ಸೆ.10) 6.2 ಹಾಗೂ 5.5 ತೀವ್ರತೆಯ ಎರಡು ಭೂಕಂಪಗಳು ವರದಿಯಾಗಿದ್ದವು.
ಇದನ್ನೂ ಓದಿ : ಬಿರುಸಿನ ಮಳೆ : ಉಡುಪಿ ಜಿಲ್ಲೆಗಳಲ್ಲಿ ಇಂದು, ನಾಳೆ ಎಲ್ಲೋ ಅಲರ್ಟ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ: 17 ಮಂದಿ ಸಾವು, 80ಕ್ಕೂ ಅಧಿಕ ಮಂದಿಗೆ ಗಾಯ

ಅಮೆರಿಕದ ಉನ್ನತ ನಾಯಕತ್ವದೊಂದಿಗೆ ಅಜಿತ್ ದೋವಲ್ ನಿರ್ಣಾಯಕ ಮಾತುಕತೆ

ಎರಡು ವರ್ಷದಿಂದ ಕಾಡಿದ ಕ್ಯಾನ್ಸರ್; 45ರ ವಯಸ್ಸಿಗೆ ಕೊನೆಯುಸಿರೆಳೆದ ಅಮೆರಿಕಾದ ಜನಪ್ರಿಯ ನಟಿ

ನೈಟ್ ಕ್ಲಬ್ ಮೇಲೆ ಬಂದೂಕುಧಾರಿಗಳ ಫೈರಿಂಗ್: 8 ಮಂದಿ ಮೃತ್ಯು

ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಭಾರತೀಯರ ಮೇಲೆ ಖಲಿಸ್ತಾನಿ ಬೆಂಬಲಿಗರಿಂದ ದಾಳಿ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
