
ಗೆಲುವೆಂಬ ಮರೀಚಿಕೆಯ ಬೆನ್ನು ಹತ್ತಿ….
ಉಕ್ರೇನ್ ಮೇಲೆರಗಿ 3 ತಿಂಗಳಾದರೂ ರಷ್ಯಾಕ್ಕಿನ್ನೂ ಸಿಕ್ಕಿಲ್ಲ ಜಯ!
Team Udayavani, May 25, 2022, 6:45 AM IST

ಮಾಸ್ಕೋ/ಕೀವ್: ರಷ್ಯಾ- ಉಕ್ರೇನ್ ಯುದ್ಧ ಮಂಗಳವಾರಕ್ಕೆ(ಮೇ 24) ಸರಿಯಾಗಿ ನಾಲ್ಕನೇ ತಿಂಗಳಿಗೆ ಕಾಲಿಟ್ಟಿದೆ. ತನ್ನ ಕಾಲಬುಡದಲ್ಲೇ ಇರುವ ಸಣ್ಣ ದೇಶದ ಮೇಲೆ ಯುದ್ಧ ಸಾರಿದ್ದ ರಷ್ಯಾಕ್ಕೆ 3 ತಿಂಗಳು ಕಳೆದರೂ ಸ್ಪಷ್ಟ ಜಯ ಸಿಕ್ಕಿಲ್ಲ!
ಸದ್ಯದಲ್ಲಿ ಅಂಥ ಲಕ್ಷಣಗಳೂ ಕಾಣಿಸುತ್ತಿಲ್ಲ. ವಿಜಯ ಮರೀಚಿಕೆಯ ಬೆನ್ನಟ್ಟಿ ಹೊರಟಿರುವ ಪುಟಿನ್ ಸೇನೆಗೆ ಉಕ್ರೇನ್ ಹಾಳುಗೆಡವಿದ್ದಷ್ಟೇ ತೃಪ್ತಿ ಎಂಬಂತಾಗಿದೆ.
ಕಳೆದ 3 ತಿಂಗಳಲ್ಲಿ ಉಕ್ರೇನ್ ಅಕ್ಷರಶಃ ನಲುಗಿಹೋಗಿದೆ ನಿಜ. ಹಾಗಂತ ರಷ್ಯಾವೇನೂ ಆ ಉನ್ಮಾದದಲ್ಲಿ ತೇಲಾಡುತ್ತಿಲ್ಲ. ಪಾಶ್ಚಿಮಾತ್ಯ ರಾಷ್ಟ್ರಗಳು, ನ್ಯಾಟೋ ದೇಶಗಳು ಹಾಗೂ ಐರೋಪ್ಯ ಒಕ್ಕೂಟ ಹೇರಿರುವ ಆರ್ಥಿಕ- ವ್ಯಾವಹಾರಿಕ ದಿಗ್ಬಂಧನಗಳ ಹೊಡೆತಗಳಿಗೆ ಸಿಲುಕಿ ಸಾಮಾಜಿಕವಾಗಿ, ಆರ್ಥಿಕವಾಗಿ ಸಾಕಷ್ಟು ನಲುಗಿದೆ. ಅದನ್ನು ಹೇಳಿಕೊಳ್ಳುವಂತಿಲ್ಲ, ಬಿಡುವಂತಿಲ್ಲ ಎಂಬಂತಾಗಿದೆ ಅದರ ಪರಿಸ್ಥಿತಿ.
ಪುಟಿನ್ ಸಾಮ್ರಾಜ್ಯ ಹೇಗಿದೆ ಈಗ?
ಶಾಪಿಂಗ್ ಮಾಲ್‌ಗಳಲ್ಲಿದ್ದ ಬಹುತೇಕ ಶೋರೂಂಗಳು ಪಾಶ್ಚಿಮಾತ್ಯ ಕಂಪನಿಗಳದ್ದಾಗಿದ್ದು ಅವೆಲ್ಲವೂ ಬಾಗಿಲು ಹಾಕಿವೆ. ಕೈಗಾರಿಕಾ ಕ್ಷೇತ್ರದಲ್ಲಿ ದೈತ್ಯ ಕಂಪನಿಗಳಿಗೆ 3 ತಿಂಗಳಲ್ಲಿ 38 ಸಾವಿರ ಕೋಟಿ ರೂ. ನಷ್ಟವಾಗಿದೆ. ಆರ್ಥಿಕ ತುರ್ತು ಪರಿಸ್ಥಿತಿಯ ಭೀತಿಯಲ್ಲಿ ಧನಿಕರು, ಮೇಲ್ಮಧ್ಯಮ, ಮಧ್ಯಮ ವರ್ಗದವರು ದೇಶ ತೊರೆಯುತ್ತಿದ್ದಾರೆ. ಹಲವು ಕಂಪನಿಗಳು ಮುಚ್ಚಿವೆ. ಸಾವಿರಾರು ಮಂದಿ ನಿರುದ್ಯೋಗಿಗಳಾಗಿದ್ದಾರೆ, ಇಲ್ಲವೇ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ಅಪಾಯದಿಂದ ಪಾರಾಗಿದ್ದ ಪುಟಿನ್?
ಯುದ್ಧ ಶುರುವಾದ ನಂತರ, ಉಕ್ರೇನ್‌ನಿಂದ ಪುಟಿನ್ ಹತ್ಯೆಯ ಪ್ರಯತ್ನ ನಡೆದಿದ್ದು, ಅವರು ಗಂಡಾಂತರದಿಂದ ಪಾರಾಗಿದ್ದರು ಎಂದು ಉಕ್ರೇನ್‌ನ ಗುಪ್ತಚರ ಇಲಾಖೆ ಹೇಳಿದೆ. ದಾಳಿ ಶುರುವಾದ ಕೆಲವೇ ದಿನಗಳಲ್ಲಿ ಕಪ್ಪು ಸಮುದ್ರ ಹಾಗೂ ಕ್ಯಾಸ್ಪಿಯನ್ ಸಮುದ್ರದ ಮಧ್ಯಭಾಗದ ಕಕಾಸಸ್ ಎಂಬಲ್ಲಿ ಪುಟಿನ್ ಭೇಟಿ ನೀಡಿದ್ದಾಗ ಅವರ ಮೇಲೆ ದಾಳಿ ನಡೆಸಲಾಗಿತ್ತು. ಆದರೆ, ಅದರಿಂದ ಅವರು ಪಾರಾಗಿದ್ದರು ಎಂದೂ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
