ಮೋದಿಕೇರ್‌ಗೆ ಅಮೆರಿಕ ಮೆಚ್ಚುಗೆ

Team Udayavani, May 12, 2019, 6:00 AM IST

ವಾಷಿಂಗ್ಟನ್‌: ಕೇಂದ್ರ ಸರಕಾರದ ಆಯುಷ್ಮಾನ್‌ ಭಾರತ ಅತ್ಯಂತ ಮಹತ್ವದ ಆರೋಗ್ಯ ಯೋಜನೆ ಎಂದು ಅಮೆರಿಕದ ಚಿಂತಕರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಚಿಕಿತ್ಸೆಯ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಯೋಜನೆಯ ಮೊದಲ ವರ್ಷದ ವಿಶ್ಲೇಷಣೆ ಆಧರಿಸಿ ಸೆಂಟರ್‌ ಫಾರ್‌ ಗ್ಲೋಬಲ್‌ ಡೆವಲಪ್‌ಮೆಂಟ್‌ (ಸಿಜಿಡಿ) ಸಂಶೋಧಕರು, ಒಟ್ಟಾರೆ ಪರಿಣಾಮ ಧನಾತ್ಮಕವಾಗಿದೆ ಎಂದಿದ್ದಾರೆ. ಈ ಯೋಜನೆ ಅಡಿ ಚಿಕಿತ್ಸೆ ಪಡೆದ ವರ ಸಂಖ್ಯೆ ಆರಂಭಿಕ ನಿರೀಕ್ಷೆಗಿಂತ ತುಂಬಾ ಹೆಚ್ಚಿದೆ ಎಂದೂ ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ