ಅರ್ಮೇನಿಯಾ, ಅಝರ್ ಬೈಜಾನ್ ಯುದ್ಧ ತೀವ್ರ: 58 ಸೈನಿಕರು, 9 ನಾಗರಿಕರು ಸಾವು

ಸೋವಿಯತ್ ಒಕ್ಕೂಟ ಪತನದ ಬಳಿಕ ಅರ್ಮೇನಿಯಾ ಹಾಗೂ ಅಝರ್ ಬೈಜಾನ್ ಸ್ವತಂತ್ರ ದೇಶಗಳಾಗಿದ್ದವು.

Team Udayavani, Sep 29, 2020, 3:19 PM IST

ಅರ್ಮೇನಿಯಾ, ಅಝರ್ ಬೈಜಾನ್ ಯುದ್ಧ ತೀವ್ರ: 58 ಸೈನಿಕರು, 9 ನಾಗರಿಕರು ಸಾವು

ಯೆರೆವಾನ್: ಕ್ರಿಶ್ಚಿಯನ್ ಸಮುದಾಯದ ಪ್ರಾಬಲ್ಯ ಹೊಂದಿರುವ ಅರ್ಮೇನಿಯಾ ಹಾಗೂ ಮುಸ್ಲಿಂ ಬಾಹುಳ್ಯ ಹೊಂದಿರುವ ಅಝರ್ ಬೈಜಾನ್ ದೇಶಗಳ ನಡುವೆ ಸಂಭವಿಸಿದ ಯುದ್ಧದಲ್ಲಿ 58 ಸೈನಿಕರು, 9 ಮಂದಿ ನಾಗರಿಕರು ಸಾವನ್ನಪ್ಪಿದ್ದು, ಉಭಯ ದೇಶಗಳು ಶಾಂತಿ ಕಾಪಾಡುವಂತೆ ವಿಶ್ವಸಂಸ್ಥೆ ಕರೆ ನೀಡಿರುವುದಾಗಿ ವರದಿ ತಿಳಿಸಿದೆ. ಸುಮಾರು ಎರಡು ದಶಕಗಳಿಂದಲೂ ಎರಡೂ ದೇಶಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದು, ನಗೊರ್ನೊ-ಕರಬಾಖ್ ಪ್ರದೇಶ!

ಅಝರ್ ಬೈಜಾನ್ ನ ಏಳು ಮಂದಿ ಹಾಗೂ ಅರ್ಮೇನಿಯಾದ ಇಬ್ಬರು ಸೇರಿದಂತೆ ಒಂಬತ್ತು ಮಂದಿ ನಾಗರಿಕರು ಸಾವನ್ನಪ್ಪಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ.ಎರಡು ದೇಶಗಳ ಯುದ್ಧದಲ್ಲಿ ಯಾವುದೇ ಸೈನಿಕರು ಸಾವನ್ನಪ್ಪಿರುವ ಬಗ್ಗೆ ಅಝರ್ ಬೈಜಾನ್ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಆದರೆ ಅರ್ಮೇನಿಯಾದ ಪ್ರತ್ಯೇಕತವಾದಿ ಅಧಿಕಾರಿಗಳು ಬಿಡುಗಡೆ ಮಾಡಿರುವ ವಿಡಿಯೋ ಫೂಟೇಜ್ ನಲ್ಲಿ ಶಸ್ತ್ರಸಜ್ಜಿತ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಇದರಲ್ಲಿ ಸೈನಿಕರ ಸುಟ್ಟ ಶವಗಳಿರುವುದು ಕಂಡುಬಂದಿದ್ದು, ಇದು ಅಝರ್ ಬೈಜಾನ್ ಸೈನಿಕರ ಶವ ಎಂದು ಹೇಳಿದೆ.

ಸೋವಿಯತ್ ಒಕ್ಕೂಟ ಪತನದ ಬಳಿಕ ಅರ್ಮೇನಿಯಾ ಹಾಗೂ ಅಝರ್ ಬೈಜಾನ್ ಸ್ವತಂತ್ರ ದೇಶಗಳಾಗಿದ್ದವು. ಆದರೆ ನಗೊರ್ನೊ-ಕರಬಾಖ್ ಅಂತರಾಷ್ಟ್ರೀಯವಾಗಿ ಅಝರ್ ಬೈಜಾನ್ ನ ಭಾಗ ಎಂದು ಗುರುತಿಸಲಾಗಿತ್ತು. ಆದರೆ ಇಲ್ಲಿ ಅರ್ಮೇನಿಯಾ ಸಮುದಾಯವೇ ಹೆಚ್ಚಿದೆ. ಅಲ್ಲದೇ ಅರ್ಮೇನಿಯಾಕ್ಕೆ ರಷ್ಯಾದ ಬೆಂಬಲವಿದ್ದು, ಅಝರ್ ಬೈಜಾನ್ ಗೆ ಟರ್ಕಿ ಬೆಂಬಲ ನೀಡಿರುವುದೇ ಸಂಘರ್ಷ ಉಲ್ಬಣಗೊಳ್ಳಲು ಕಾರಣವಾಗಿದೆ ಎಂದು ವರದಿ ತಿಳಿಸಿತ್ತು.

ಇದನ್ನೂ ಓದಿ:ವಿಧಾನ ಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ: ಅ.28ರಂದು ಚುನಾವಣೆ

ಈ ದೇಶಗಳ ಬಗ್ಗೆ ದಕ್ಷಿಣ ಏಷ್ಯಾ ಯಾವಾಗಲೂ ತನ್ನದೇ ದೃಷ್ಟಿಕೋನ ಹೊಂದಿದೆ. ಭಾರತ ಅರ್ಮೇನಿಯಾ ಹಾಗೂ ಅಝರ್ ಬೈಜಾನ್ ದೇಶಗಳ ನಡುವೆ ಉತ್ತಮ ಬಾಂಧವ್ಯ ಹೊಂದಿದೆ. ಎರಡು ದೇಶಗಳ ನಡುವಿನ ಯುದ್ಧದಿಂದಾಗಿ ಉತ್ತರ ದಕ್ಷಿಣ ಅಂತಾರಾಷ್ಟ್ರೀಯ ಸಾರಿಗೆ ಕಾರಿಡಾರ್ (ಮುಂಬೈ ಟು ಚಾಬಾಹಾರ್ ವಯಾ ಅಝರ್ ಬೈಜಾನ್ ಟು ಮಾಸ್ಕೋ ನ ಭಾರತದ ಮಹತ್ವದ ಸಂಪರ್ಕ ಯೋಜನೆಗೆ ತೊಡಕು ಉಂಟಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

2018ರಲ್ಲಿ ಅಝರ್ ಬೈಜಾನ್ ನಲ್ಲಿನ ಬಾಕುವಿನಲ್ಲಿ ಸಂಭವಿಸಿದ ಅಗ್ನಿ ದುರಂತದ ವೇಳೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಚಿವೆ ಸುಷ್ಮಾ ಸ್ವರಾಜ್ ಅವರು ಭೇಟಿ ನೀಡಿದ್ದರು. ಇಲ್ಲಿನ ದೇವಾಲಯಗಳನ್ನು ಹಿಂದೆ ಹಿಂದೂಗಳು ಮತ್ತು ಝೋರಾಸ್ಟ್ರಿಯನ್ ಸಮುದಾಯ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿತ್ತು. ಬಹುಶಃ ಇವರೆಲ್ಲ ಭಾರತದಿಂದ ಭೇಟಿ ನೀಡುತ್ತಿದ್ದ ವ್ಯಾಪಾರಿಗಳು. ಆದರೆ ಅರ್ಮೇನಿಯಾ ದೇಶದ ವಿಚಾರಕ್ಕೆ ಬಂದರೆ, ಅದು ಹಲವಾರು ಪ್ರಮುಖ ವಿಷಯಗಳಲ್ಲಿ ಭಾರತದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ವರದಿ ಹೇಳಿತ್ತು.

ಪ್ರತ್ಯೇಕತೆಗಾಗಿ ಹಾತೊರೆಯುತ್ತಿರುವ ನಗೊರ್ನೊ-ಕರಬಾಖ್ ಗಾಗಿ ಎರಡು ದೇಶಗಳ ನಡುವೆ ಯುದ್ಧ ನಡೆದಿದ್ದು, ಸುಮಾರು 23 ಮಂದಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ವರದಿ ತಿಳಿಸಿತ್ತು.

ಟಾಪ್ ನ್ಯೂಸ್

hd-kumarswaamy

ಸೈದ್ದಾಂತಿಕ ಬದ್ಧತೆಯ ಬಗ್ಗೆ ರಾಹುಲ್ ಗಾಂಧಿ ಬಿಡಿಸಿ ಹೇಳಬೇಕು: ಕುಮಾರಸ್ವಾಮಿ

ct-ravi

ಪಠ್ಯದಲ್ಲಿ ಹೆಗಡೆವಾರ್ ಭಾಷಣ ಸೇರ್ಪಡೆಯಾದರೆ ತಪ್ಪೇನು?: ಸಿ.ಟಿ.ರವಿ

ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ

ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ

ಸಿದ್ದಾಪುರ: ಶಂಕರನಾರಾಯಣ ಸ.ಹಿ.ಪ್ರಾ.ಶಾಲೆ; ಮುಖ್ಯ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ

ಸಿದ್ದಾಪುರ: ಶಂಕರನಾರಾಯಣ ಸ.ಹಿ.ಪ್ರಾ.ಶಾಲೆ; ಮುಖ್ಯ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ

thumb 5

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ ಪತ್ತೆ

ದತ್ತಪೀಠದ ಹೋಮ-ಹವನ ನಡೆಯುವ ಜಾಗದಲ್ಲಿ ಮಾಂಸಾಹಾರ; ಹಿಂದೂ ಪರ ಸಂಘಟನೆಗಳ ಆಕ್ರೋಶ

ದತ್ತಪೀಠದ ಹೋಮ-ಹವನ ನಡೆಯುವ ಜಾಗದಲ್ಲಿ ಮಾಂಸಾಹಾರ; ಹಿಂದೂ ಪರ ಸಂಘಟನೆಗಳ ಆಕ್ರೋಶ

ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ನವರೇ ಭಾರತ್ ಛೋಡೋ..; ಬಿಜೆಪಿ ಟೀಕೆ

ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ನವರೇ ಭಾರತ್ ಛೋಡೋ..; ಬಿಜೆಪಿ ಟೀಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಪ್ರಧಾನಿ ಮೋದಿ ನೇಪಾಲಕ್ಕೆ; ಬುದ್ಧನ ಜನ್ಮಸ್ಥಳದಲ್ಲೇ ಬುದ್ಧ ಪೂರ್ಣಿಮೆ ಆಚರಣೆ

ಇಂದು ಪ್ರಧಾನಿ ಮೋದಿ ನೇಪಾಲಕ್ಕೆ; ಬುದ್ಧನ ಜನ್ಮಸ್ಥಳದಲ್ಲೇ ಬುದ್ಧ ಪೂರ್ಣಿಮೆ ಆಚರಣೆ

UAE

ಯುಎಇ ತೆರಳಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

crime (2)

ನ್ಯೂಯಾರ್ಕ್ ಸೂಪರ್ ಮಾರ್ಕೆಟ್ ನಲ್ಲಿ ಗುಂಡಿನ ದಾಳಿ:ಕನಿಷ್ಠ 10 ಮಂದಿ ಬಲಿ

Explosive Covid Outbreak in North Korea

ಉತ್ತರ ಕೊರಿಯಾದಲ್ಲಿ ಮಿತಿಮೀರಿದ ಕೋವಿಡ್; ಮೂರು ದಿನದಲ್ಲಿ 820,620 ಪ್ರಕರಣಗಳು ಪತ್ತೆ!

1-sddsdad

ಪಾಕಿಸ್ಥಾನ : ಸಿಖ್ ಸಮುದಾಯದ ವ್ಯಾಪಾರಿಗಳಿಬ್ಬರ ಬರ್ಬರ ಹತ್ಯೆ

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

hd-kumarswaamy

ಸೈದ್ದಾಂತಿಕ ಬದ್ಧತೆಯ ಬಗ್ಗೆ ರಾಹುಲ್ ಗಾಂಧಿ ಬಿಡಿಸಿ ಹೇಳಬೇಕು: ಕುಮಾರಸ್ವಾಮಿ

1-sds

75ರ ಸಂಭ್ರಮದಲ್ಲಿ ಹಿರಿಯ ರಾಜಕಾರಣಿ ಹೆಚ್. ವಿಶ್ವನಾಥ್

ಪತ್ರಕರ್ತರಿಂದ ತುಂಬಾ ಪ್ರೇರಿತನಾಗಿರುವೆ

ಪತ್ರಕರ್ತರಿಂದ ತುಂಬಾ ಪ್ರೇರಿತನಾಗಿರುವೆ

ct-ravi

ಪಠ್ಯದಲ್ಲಿ ಹೆಗಡೆವಾರ್ ಭಾಷಣ ಸೇರ್ಪಡೆಯಾದರೆ ತಪ್ಪೇನು?: ಸಿ.ಟಿ.ರವಿ

ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ

ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.