“ಮೆದುಳು ತಿನ್ನುವ ಅಮೀಬಾ’ಗೆ ದ.ಕೊರಿಯಾದಲ್ಲಿ ಮೊದಲ ಬಲಿ
ಇದೊಂದು ಮಾರಣಾಂತಿಕ ಸೋಂಕು ಮಣ್ಣು, ಸರೋವರ, ನದಿಗಳಲ್ಲಿರುತ್ತದೆ ಅಮೀಬಾ
Team Udayavani, Dec 28, 2022, 7:25 AM IST
ಸಿಯೋಲ್:“ಮೆದುಳು ತಿನ್ನುವ ಅಮೀಬಾ’ಗೆ ದಕ್ಷಿಣ ಕೊರಿಯಾದ 50ರ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಈ ಮೂಲಕ ದ.ಕೊರಿಯಾದಲ್ಲಿ ಮಾರಣಾಂತಿಕ “ನಗ್ಲೆàರಿಯಾ ಫೌಲೇರಿ’ ಸೋಂಕಿನಿಂದ ಮೊದಲ ಸಾವು ದಾಖಲಾದಂತಾಗಿದೆ.
ಸುಮಾರು 4 ತಿಂಗಳಿಂದ ಥಾಯ್ಲೆಂಡ್‌ನಲ್ಲಿ ವಾಸವಾಗಿದ್ದ ವ್ಯಕ್ತಿ 2 ವಾರಗಳ ಹಿಂದಷ್ಟೇ ಕೊರಿಯಾಗೆ ಮರಳಿದ್ದರು. ಇತ್ತೀಚೆಗೆ ಅವರಿಗೆ ತಲೆನೋವು, ಜ್ವರ, ವಾಂತಿ, ಮಾತನಾಡುವಾಗ ತೊದಲುವುದು, ಕುತ್ತಿಗೆಯಲ್ಲಿ ಬಿಗಿತ ಮುಂತಾದ ಮಿದುಳು ಪೊರೆ ಉರಿತದ ಸಮಸ್ಯೆ ತಲೆದೋರಿತ್ತು. ಕೂಡಲೇ ಅವರನ್ನು ತುರ್ತು ನಿಗಾ ಘಟಕಕ್ಕೆ ಸೇರಿಸಿ ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ “ನಗ್ಲೆàರಿಯಾ ಫೌಲೇರಿ’ ಸೋಂಕು ಇರುವುದು ದೃಢಪಟ್ಟಿತ್ತು.
ಈ ಸೋಂಕಿನ ಮೂಲವೇನು?
ಮಲಿನಯುಕ್ತ ನೀರಿನಲ್ಲಿ ಈಜುವುದು ಮತ್ತು ಸೋಂಕಿನ ನೀರಿನಲ್ಲಿ ಮೂಗನ್ನು ತೊಳೆಯುವುದರಿಂದ ಈ ಸೋಂಕು ಹರಡುತ್ತದೆ. ಏಕಕೋಶ ಜೀವಿಯಾದ ಈ ನಗ್ಲೆàರಿಯಾ ಫೌಲೇರಿ ಎಂಬ ಅಮೀಬಾವೇ ಸೋಂಕಿನ ಮೂಲ. ಇದು ಮಣ್ಣು, ಸರೋವರ, ನದಿಗಳಲ್ಲಿ ಇರುತ್ತವೆ. ಈ ಅಮೀಬಾವನ್ನು ಒಳಗೊಂಡಿರುವ ನೀರು ಮನುಷ್ಯರ ಮೂಗಿನೊಳಕ್ಕೆ ಸೇರಿದರೆ, ಅದು ನೇರವಾಗಿ ಮೆದುಳಿನ ಸೋಂಕಿಗೆ ಕಾರಣವಾಗುತ್ತದೆ. ಹೀಗಾಗಿಯೇ ಇದನ್ನು “ಮೆದುಳು ತಿನ್ನುವ ಅಮೀಬಾ’ ಎಂದು ಕರೆಯುತ್ತಾರೆ. ಅಮೆರಿಕದಲ್ಲಿ ಪ್ರತಿ ವರ್ಷ 3 ಮಂದಿ ಈ ಸೋಂಕಿಗೆ ತುತ್ತಾಗುತ್ತಾರೆ. ಆದರೆ, ಈ ಸೋಂಕು ಸಾಮಾನ್ಯವಾಗಿ ಮಾರಣಾಂತಿಕವೇ ಆಗಿರುತ್ತದೆ.
ಸೋಂಕು ಮೊದಲು ಪತ್ತೆಯಾಗಿದ್ದು- 1965ರಲ್ಲಿ ಆಸ್ಟ್ರೇಲಿಯಾದಲ್ಲಿ.
ಮೊದಲ 3 ಸಾವು ಸಂಭವಿಸಿದ್ದು – 1965ರಲ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ