
ಬ್ರಿಟನ್ ಪಿಎಂ ಸುನಕ್ ತೆರಿಗೆ ವಿವರ ಬಹಿರಂಗ
Team Udayavani, Mar 24, 2023, 6:40 AM IST

ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ ತೆರಿಗೆ ಪಾವತಿ ಮಾಡಿದ ಮಾಹಿತಿಯನ್ನು ಬಿಡುಗಡೆಗೊಳಿಸಿದ್ದಾರೆ. 2019ರಲ್ಲಿ ಮುಂಚೂಣಿ ರಾಜಕಾರಣಿಯಾದ ನಂತರದಿಂದ 2022ರವರೆಗೆ 10 ಲಕ್ಷ ಪೌಂಡ್‌ಗೂ ಅಧಿಕ ಮೊತ್ತವನ್ನು ತೆರಿಗೆ ರೂಪದಲ್ಲಿ ಅವರು ಪಾವತಿಸಿದ್ದಾರೆ.
ತೆರಿಗೆ ವಿಷಯದಲ್ಲಿ ಪಾರದರ್ಶಕತೆ ಕಾಪಾಡುವುದಾಗಿ ಕಳೆದ ವರ್ಷ ನವೆಂಬರ್‌ನಲ್ಲಿ ಭರವಸೆ ನೀಡಿದ್ದರು. ಅದರಂತೆ ರಿಷಿ ಸುನಕ್ ಅವರು ತೆರಿಗೆ ಪಾವತಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಬ್ರಿಟನ್ ಪ್ರಧಾನಮಂತ್ರಿಗಳ ಕಚೇರಿ ಬಿಡುಗಡೆಗೊಳಿಸಿದ ಮಾಹಿತಿ ಪ್ರಕಾರ, 2019ರಿಂದ 2022ರವರೆಗೆ ರಿಷಿ ಸುನಕ್ ಒಟ್ಟು 47.66 ಲಕ್ಷ ಪೌಂಡ್ ಆದಾಯ ಗಳಿಸಿದ್ದಾರೆ.
ಅದೇ ರೀತಿ 10.53 ಲಕ್ಷ ಪೌಂಡ್ ತೆರಿಗೆ ಪಾವತಿಸಿದ್ದಾರೆ.
ಟಾಪ್ ನ್ಯೂಸ್
