ಪೊಲೀಸ್ ಸಮವಸ್ತ್ರ ಧರಿಸಿದ ವ್ಯಕ್ತಿಯಿಂದ ಕೆನಡಾದಲ್ಲಿ ಭೀಕರ ಗುಂಡಿನ ದಾಳಿ: 16 ಸಾವು
30 ವರ್ಷಗಳ ಬಳಿಕ ದೇಶದಲ್ಲಿ ಇಂತಹ ಭೀಕರ ಕೃತ್ಯ
Team Udayavani, Apr 20, 2020, 8:13 AM IST
ಕೆನಡಾ: ಪೊಲೀಸ್ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬರು ಕೆನಡಾದ ನೋವಾ ಸ್ಕಾಟಿಯಾದಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿ 16 ಜನರನ್ನು ಹತ್ಯೆಗೈದಿದ್ದು, 30 ವರ್ಷಗಳ ಬಳಿಕ ದೇಶದಲ್ಲಿ ಇಂತಹ ಭೀಕರ ಕೃತ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು 51 ವರ್ಷದ ಗೇಬ್ರಿಯಲ್ ವೋರ್ಟ್ ಮನ್ ಎಂದು ಗುರುತಿಸಲಾಗಿದ್ದು ಈತ ಪೊಲೀಸರ ವೇಷ ಧರಿಸಿ ಕಾರನ್ನು ಕೂಡ ರಾಯಲ್ ಕೆನೆಡಿಯನ್ ಮೌಂಟೆಡ್ ಪೊಲೀಸ್ ಕ್ರೂಸರ್ ರೀತಿ ಮಾರ್ಪಾಟು ಮಾಡಿಕೊಂಡಿದ್ದ. ಬಳಿಕ ನೋವಾ ಸ್ಕಾಟಿಯಾ ಪ್ರಾಂತ್ಯದ ಹಾಲಿಫಾಕ್ಸ್ ನ ಉತ್ತರಕ್ಕೆ 60 ಮೈಲಿ ದೂರದ ಪೋರ್ಟಾಪಿಕ್ ಎಂಬ ಸಣ್ಣ ಗ್ರಾಮೀಣ ಪಟ್ಟಣದಲ್ಲಿ ಭಾನುವಾರ ತಡರಾತ್ರಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದ.
ಪರಿಣಾಮವಾಗಿ ಪೊಲೀಸ್ ಮಹಿಳಾ ಅಧಿಕಾರಿ ಸೇರಿದಂತೆ 16 ಜನ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮದ ಮನೆಯೊಂದರಲ್ಲಿ ಅನೇಕ ಶವಗಳು ಸಿಕ್ಕಿದ್ದು, ದುಷ್ಕರ್ಮಿಯನ್ನು ಪೊಲೀಸರು ಹತ್ಯೆಗೈದಿದ್ದಾರೆ.
ದುಷ್ಕರ್ಮಿ ಪೋರ್ಟಾಪಿಕ್ ನಲ್ಲಿ ತಾತ್ಕಲಿಕವಾಗಿ ನೆಲೆಸಿದ್ದ. ಬಹುಶಃ ಈತ ತನ್ನ ಹಿಟ್ ಲೀಸ್ಟ್ ನಲ್ಲಿದ್ದವರನ್ನು ಮೊದಲು ಹತ್ಯೆ ಮಾಡಿ ಮಾಡಿ ಬಳಿಕ ಒಟ್ಟಾರೆಯಾಗಿ ಶೂಟೌಟ್ ಮಾಡಿದ್ದಾನೆಂದು ಪೊಲೀಸರು ಶಂಕಿಸಿದ್ದಾರೆ. ಆರಂಭದಲ್ಲಿ ಪೊಲೀಸರು ದುಷ್ಕರ್ಮಿಯನ್ನು ಬಂಧಿಸಿರುವುದಾಗಿ ಘೋಷಣೆ ಮಾಡಿದ್ದರೂ ಬಳಿಕ ಆತ ಮೃತಪಟ್ಟಿದ್ದಾನೆಂದು ಬಹಿರಂಗಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು