

Team Udayavani, May 17, 2019, 6:00 AM IST
ಬೀಜಿಂಗ್: ಇದೇ ಮೊದಲ ಬಾರಿಗೆ ಚಂದ್ರನ ಹಿಂಭಾಗದಲ್ಲಿ ಇಳಿದ ಚೀನದ ಚೇಂಜ್ 4 ರೋವರ್ ಯುತು ಮಹತ್ವದ ಅಧ್ಯಯನಗಳನ್ನು ನಡೆಸಿದೆ. ಇಲ್ಲಿನ ರಾಸಾಯನಿಕ ಹಾಗೂ ಖನಿಜ ಗುಣಲಕ್ಷಣಗಳ ವಿವರಗಳನ್ನೂ ಭೂಮಿಗೆ ಕಳುಹಿಸಿದೆ. ಇದು ಭೂಮಿ ಹಾಗೂ ಇತರ ನೈಸರ್ಗಿಕ ಉಪಗ್ರಹಗಳ ಉಗಮದ ಬಗ್ಗೆ ಆಳ ಅಧ್ಯಯನಕ್ಕೆ ನೆರವಾಗಲಿದೆ.
ಜನವರಿಯಲ್ಲಿ ಯುತು 2 ಚಂದ್ರನ ಮೇಲೆ ಇಳಿದಿತ್ತು. ಯುತುವಿನಲ್ಲಿ ಅಳವಡಿಸಿದ ಇನ್‌ಫ್ರಾರೆಡ್ ಸ್ಪೆಕ್ಟ್ರೋ ಮೀಟರ್ ಬಳಸಿ ಶೋಧ ನಡೆಸಿದ ವಿಜ್ಞಾನಿಗಳಿಗೆ ಚೇಂಜ್ 4 ಲ್ಯಾಂಡ್ ಆದ ಭಾಗದಲ್ಲಿನ ಚಂದ್ರನ ಮಣ್ಣಿನಲ್ಲಿ ಒಲಿವಿನ್ ಹಾಗೂ ಪೈರಾಕ್ಸಿನ್ ಅಂಶ ಗಳು ಇರುವುದು ಕಂಡುಬಂದಿದೆ. ಈ ಬಗ್ಗೆ ಸಮಗ್ರ ವಿವರಗಳನ್ನು ನೇಚರ್ ನಿಯತಕಾಲಿಕೆಯಲ್ಲಿ ವಿವರಿಸಲಾಗಿದೆ.
ಚಂದ್ರನ ಮೇಲ್ಮೆ„ ರಚನೆ ಭೂಮಿಯಂತೆಯೇ ಇದೆ. ಮೇಲಿನ ಪದರ ಮಣ್ಣಿನಂತಿದ್ದು, ನಂತರದ ಪದರದಲ್ಲಿ ಒಲಿವಿನ್ ಹಾಗೂ ಪೈರಾಕ್ಸಿನ್ ಇದೆ. ಇದು ಕೆಳ ಪದರಗಳನ್ನು ಗಟ್ಟಿಯಾಗಿಸಿದೆ ಎಂದು ಸಂಶೋಧಕ ಲಿ ಚುನ್ಲ„ ಹೇಳಿ ದ್ದಾರೆ. ಈ ಮೇಲ್ಮೆ„ ಮಣ್ಣಿನ ಪದರವು ತುಂಬಾ ಗಟ್ಟಿಯಾಗಿದ್ದುದರಿಂದ ಯಾವುದೇ ರಾಸಾಯನಿಕ ಚಟುವಟಿಕೆ ನಡೆಯುತ್ತಿಲ್ಲ. ಅಲ್ಲದೆ ಪದರಗಳ ಚಲನೆಯೂ ಕೋಟ್ಯಂತರ ವರ್ಷಗಳಿಂದ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.
ಚೀನದ ಯುತು ಲ್ಯಾಂಡರ್ ವಾನ್ ಕರ್ಮನ್ ಎಂಬ ಕುಳಿಯಲ್ಲಿ ಇಳಿದಿದ್ದು, ಈ ಕುಳಿ ಸುಮಾರು 2300 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇದು ಚಂದ್ರನ ಕಾಲು ಭಾಗವನ್ನು ಒಳಗೊಂಡಿದೆ.
Ad
New York: ನಾಳೆ ಮಂಗಳನ 25 ಕೆ.ಜಿ. ತೂಕದ ಶಿಲೆ ಹರಾಜು!
ಭಿನ್ನಾಭಿಪ್ರಾಯ ವಿವಾದ ಆಗಬಾರದು: ಚೀನಕ್ಕೆ ಜೈಶಂಕರ್ ಪರೋಕ್ಷ ಸಂದೇಶ
Melbourne: ಆಸ್ಟ್ರೇಲಿಯಾದಲ್ಲಿ ಅತೀದೊಡ್ಡ ಸಮರಾಭ್ಯಾಸ: ಭಾರತವೂ ಭಾಗಿ
Pakistan ವಿಮಾನಯಾನ ಸಂಸ್ಥೆಯ ಪ್ರಮಾದ: ಪ್ರಯಾಣಿಕ ಕರಾಚಿ ಬದಲು ಸೌದಿ ಅರೇಬಿಯಾಕ್ಕೆ!!
Indonesia: ಇಂಡೋನೇಷ್ಯಾದ ತನಿಂಬಾರ್ ದ್ವೀಪಪ್ರದೇಶದಲ್ಲಿ 6.7 ತೀವ್ರತೆಯ ಪ್ರಬಲ ಭೂಕಂಪ
Odisha: ಕಾಲೇಜಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಸಾ*ವು
ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ
Koppala: 40 ದಿನದಲ್ಲಿ ಹುಲಿಗೆಮ್ಮ ದೇವಿಗೆ 1.17 ಕೋಟಿ ಆದಾಯ
ಬೆಳ್ಳಿಪರದೆಯ ಬೆರಗು ಕರುನಾಡಿನ ಮಹಿಳಾ ಸೂಪರ್‌ಸ್ಟಾರ್ ಬಿ.ಸರೋಜಾ ದೇವಿ
Editorial: ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಕ್ರಮ ಅತ್ಯಗತ್ಯ
You seem to have an Ad Blocker on.
To continue reading, please turn it off or whitelist Udayavani.