
ಚೀನ ಪ್ರವೇಶಕ್ಕೆ ವಿದೇಶಿಯರಿಗೆ ವೀಸಾ ವಿತರಣೆ ಪುನಾರಂಭ
ಚೀನಗ ವೀಸಾ ನಿರ್ಬಂಧ ತೆರವು
Team Udayavani, Mar 15, 2023, 7:23 AM IST

ಬೀಜಿಂಗ್: ಕೊರೊನಾ ಹಿನ್ನೆಲೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದ ಚೀನ, ಮೂರು ವರ್ಷಗಳ ನಂತರ ಇದೀಗ ವಿದೇಶಿಯರಿಗೆ ತನ್ನ ದೇಶ ಪ್ರವೇಶಿಸಲು ಅನುಮತಿಸಿದೆ.
ಚೀನದ ವಿದೇಶಾಂಗ ಸಚಿವಾಲಯವು ಈ ಕುರಿತು ಮಂಗಳವಾರ ಪ್ರಕಟಣೆ ಹೊರಡಿಸಿದ್ದು, ವಿದೇಶಿ ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರರಿಗೆ ವೀಸಾ ವಿತರಣೆ ಪುನರಾರಂಭವಾಗಲಿದೆ ಎಂದಿದೆ.
ಚೀನ ಸರ್ಕಾರದ ಈ ನಡೆಯಿಂದ ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಉಪಯೋಗವಾಗಲಿದೆ. ಕೊರೊನಾ ಲಾಕ್‌ಡೌನ್ ಮತ್ತು ವೀಸಾ ನಿರ್ಬಂಧಗಳ ಕಾರಣ, ಚೀನಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳನ್ನು ವಾಪಸು ತವರು ದೇಶಗಳಿಗೆ ಕಳುಹಿಸಲಾಗಿತ್ತು. ಅನೇಕ ಭಾರತೀಯ ವಿದ್ಯಾರ್ಥಿಗಳು ಆ ಸಮಯದಲ್ಲಿ ವಾಪಸು ಭಾರತಕ್ಕೆ ಬಂದಿದ್ದಾರೆ.
ಬುಧವಾರದಿಂದ ವೀಸಾ ವಿತರಣೆಯನ್ನು ಚೀನ ವಿದೇಶಾಂಗ ಸಚಿವಾಲಯ ಆರಂಭಿಸಲಿದೆ. ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರಿಸಬಹುದು. ಇನ್ನೊಂದಡೆ, ಪ್ರವಾಸಿ ವೀಸಾದಡಿ ವಿದೇಶಿಯರಿಗೂ ವೀಸಾ ವಿತರಣೆ ಪ್ರಾರಂಭವಾಗಲಿದೆ.
ಟಾಪ್ ನ್ಯೂಸ್
