ಪಾಕ್‌ನಲ್ಲಿನ ಸಿಪಿಇಸಿ ಕಾರ್ಮಿಕರು ಉಗ್ರರ ಗುರಿ: China embassy


Team Udayavani, Dec 8, 2017, 7:01 PM IST

Belt-Road-Plan-700.jpg

ಬೀಜಿಂಗ್‌ : ಪಾಕಿಸ್ಥಾನದಲ್ಲಿ ಕಾರ್ಯಗತಗೊಳ್ಳುತ್ತಿರುವ ಬಿಲಿಯ ಗಟ್ಟಲೆ ಡಾಲರ್‌ ವಿನಿಯೋಗದ ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಯಲ್ಲಿ ದುಡಿಯುತ್ತಿರುವ ಸಾವಿರಾರು ಮಂದಿ ಚೀನೀ ಕೆಲಸಗಾರರಿಗೆ ಬೀಜಿಂಗ್‌ “ಸರಣಿ ಉಗ್ರ ದಾಳಿಯ ಸಂಭಾವ್ಯತೆ”ಯ ಮುನ್ನೆಚ್ಚರಿಕೆಯನ್ನು ನೀಡಿದೆ. ಪಾಕಿಸ್ಥಾನ ತನ್ನ ಸರ್ವಋತು ಮಿತ್ರನಾಗಿರುವ ಹೊರತಾಗಿಯೂ ಚೀನಕ್ಕೆ ಈಗ ಪಾಕ್‌ ಇಸ್ಲಾಮಿಕ್‌ ಉಗ್ರರ ಕಂಟಕ ಒದಗಿರುವುದು ವಿಧಿಯ ವಿಪರ್ಯಾಸವಾಗಿದೆ. 

ಚೀನದ ಬಿಲಿಯ ಗಟ್ಟಲೆ ಡಾಲರ್‌ ಖರ್ಚಿನಲ್ಲಿ ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಹಲವಾರು ಬೃಹತ್‌ ಮೂಲ ಸೌಕರ್ಯ ಯೋಜನೆಗಳಲ್ಲಿ ಪಾಕ್‌ ಅಧಿಕಾರಿಗಳಿಂದ ವ್ಯಾಪಕ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸ್ವೇಚ್ಚಾಚಾರ ನಡೆಯುತ್ತಿರುವುದನ್ನು ಗಮನಿಸಿರುವ ಚೀನ ಕೆಲ ದಿನಗಳ ಹಿಂದಷ್ಟೇ ತಾನು ಈ ಯೋಜನೆಗಳಿಗೆ ಹಣ ಹಾಕುವುದನ್ನು ಸದ್ಯಕ್ಕೆ ನಿಲ್ಲಿಸಿದ್ದೇನೆ ಎಂದು ಪಾಕ್‌ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಹೇಳಿತ್ತು.

ಹಾಗಿದ್ದರೂ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಮಹತ್ವಾಕಾಂಕ್ಷೆಯ, 57 ಶತಕೋಟಿ ಡಾಲರ್‌ ವೆಚ್ಚದ, ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಯ ನಿರ್ಮಾಣ ಕಾಮಗಾರಿಗಳು ಈಗಲೂ ಚಾಲ್ತಿಯಲ್ಲಿದ್ದು ಸಾವಿರಾರು ಚೀನೀ ಕಾರ್ಮಿಕರು ಪಾಕಿಸ್ಥಾನದಲ್ಲಿ ದುಡಿಯುತ್ತಿದ್ದಾರೆ. 

ಭಯೋತ್ಪಾದಕರ ಸತತ ದಾಳಿಗಳಿಂದ ತ್ರಸ್ತಗೊಂಡಿರುವ ಪಾಕಿಸ್ಥಾನದಲ್ಲಿ ಉಗ್ರರದ್ದೇ ಮೇಲ್ಗೆ„ ಆಗಿರುವ ಕಾರಣ ಚೀನೀ ಕಾರ್ಮಿಕರು ಅವರ ಸುಲಭದ ಸರಣಿ ದಾಳಿಗಳಿಗೆ ಗುರಿಯಾಗಬಹುದು ಎಂಬ ಆತಂಕವನ್ನು ಚೀನ ವ್ಯಕ್ತಪಡಿಸಿದೆ. 

ಹಾಗಾಗಿ ಚೀನೀ ಕಂಪೆನಿಗಳ ಉದ್ಯೋಗಿಗಳ ಸುರಕ್ಷೆ ಮತ್ತು ರಕ್ಷಣೆ ಈಗ ಚೀನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಂತೆಯೇ ಮುನ್ನೆಚ್ಚರಿಕೆಯ ಕ್ರಮವಾಗಿ  ಅದು ತನ್ನ ಕಾರ್ಮಿಕರಿಗೆ ಸಂಭಾವ್ಯ ಇಸ್ಲಾಮಿಕ್‌ ಉಗ್ರರ ಸರಣಿ ದಾಳಿಯ ಬಗ್ಗೆ ಜಾಗ್ರತೆಯಿಂದಿರುವಂತೆ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ. 

ಪಾಕಿಸ್ಥಾನದಲ್ಲಿನ ಚೀನ ಸಂಸ್ಥೆಗಳು, ಸಿಬಂದಿಗಳ ಮೇಲೆ ಸರಣಿ ಉಗ್ರ ದಾಳಿ ನಡೆಯುವ ಸಾಧ್ಯತೆ ಇರುವುದಾಗಿ ಪಾಕಿಸ್ಥಾನದಲ್ಲಿನ ಚೀನ ದೂತಾವಾಸ ತನ್ನ ವೆಬ್‌ಸೈಟಿನಲ್ಲಿ ಎಚ್ಚರಿಕೆ ನೀಡಿದೆ. 

ಟಾಪ್ ನ್ಯೂಸ್

ಮುಂದಿನ ವಿಧಾನಸಭೆ ಚುನಾವಣೆ: ಸಿದ್ದು-ಡಿಕೆ ಜತೆ ರಾಹುಲ್‌ ಮಹತ್ವದ ಮಾತುಕತೆ

ಮುಂದಿನ ವಿಧಾನಸಭೆ ಚುನಾವಣೆ: ಸಿದ್ದು-ಡಿಕೆ ಜತೆ ರಾಹುಲ್‌ ಮಹತ್ವದ ಮಾತುಕತೆ

ಬೀದಿಗೆ ಬಿದ್ದಿದ್ದ ಸಿದ್ದು ಬಾದಾಮಿಗೆ ಕರೆ ತಂದಿದ್ದು ನಾನೇ: ಸಿ.ಎಂ. ಇಬ್ರಾಹಿಂ

ಬೀದಿಗೆ ಬಿದ್ದಿದ್ದ ಸಿದ್ದು ಬಾದಾಮಿಗೆ ಕರೆ ತಂದಿದ್ದು ನಾನೇ: ಸಿ.ಎಂ. ಇಬ್ರಾಹಿಂ

ಪಿಎನ್‌ಬಿ ಹಗರಣದ ಆರೋಪಿ ನೀರವ್‌ ಮೋದಿಗೆ ಇಬ್ಬರು ಮನೋವೈದ್ಯರಿಂದ ಪರೀಕ್ಷೆ

ಪಿಎನ್‌ಬಿ ಹಗರಣದ ಆರೋಪಿ ನೀರವ್‌ ಮೋದಿಗೆ ಇಬ್ಬರು ಮನೋವೈದ್ಯರಿಂದ ಪರೀಕ್ಷೆ

ಸೌದಿ ರಾಜಮನೆತನಕ್ಕೆ ಪ್ರಧಾನಿ ಮೋದಿ ಸಾಂತ್ವನ

ಸೌದಿ ರಾಜಮನೆತನಕ್ಕೆ ಪ್ರಧಾನಿ ಮೋದಿ ಸಾಂತ್ವನ

ದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್‌ ಕಮಿಷನರ್‌! ವಿಡಿಯೋ ವೈರಲ್‌

ಚಿತ್ರದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್‌ ಕಮಿಷನರ್‌! ವಿಡಿಯೋ ವೈರಲ್‌

ರಾಜಸ್ಥಾನದಲ್ಲಿ ನಡೆದ ಪೈಶಾಚಿಕ ಘಟನೆಗೆ ಆರ್‌. ಅಶೋಕ್‌ ತೀವ್ರ ಆಕ್ರೋಶ

ರಾಜಸ್ಥಾನದಲ್ಲಿ ನಡೆದ ಪೈಶಾಚಿಕ ಘಟನೆಗೆ ಆರ್‌. ಅಶೋಕ್‌ ತೀವ್ರ ಆಕ್ರೋಶ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಆಕ್ಸಿಜನ್‌ ಜನರೇಟರ್‌ ಸ್ಥಾಪನೆ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಆಕ್ಸಿಜನ್‌ ಜನರೇಟರ್‌ ಸ್ಥಾಪನೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಿಎನ್‌ಬಿ ಹಗರಣದ ಆರೋಪಿ ನೀರವ್‌ ಮೋದಿಗೆ ಇಬ್ಬರು ಮನೋವೈದ್ಯರಿಂದ ಪರೀಕ್ಷೆ

ಪಿಎನ್‌ಬಿ ಹಗರಣದ ಆರೋಪಿ ನೀರವ್‌ ಮೋದಿಗೆ ಇಬ್ಬರು ಮನೋವೈದ್ಯರಿಂದ ಪರೀಕ್ಷೆ

ಸೌದಿ ರಾಜಮನೆತನಕ್ಕೆ ಪ್ರಧಾನಿ ಮೋದಿ ಸಾಂತ್ವನ

ಸೌದಿ ರಾಜಮನೆತನಕ್ಕೆ ಪ್ರಧಾನಿ ಮೋದಿ ಸಾಂತ್ವನ

46 migrants body found inside truck in US

ಟ್ರಕ್‌ ನೊಳಗೆ 46 ವಲಸಿಗರ ಶವ ಪತ್ತೆ; ಮಾನವ ಕಳ್ಳಸಾಗಣೆ ಪ್ರಕರಣ ಶಂಕೆ

ಬಿಆರ್‌ಐ v/s ಬಿ3ಡಬ್ಲ್ಯು ! ಚೀನದ ಸಂಚಿಗೆ ಜಿ 7 ರಾಷ್ಟ್ರಗಳಿಂದ ತಿರುಗುಬಾಣ

ಬಿಆರ್‌ಐ v/s ಬಿ3ಡಬ್ಲ್ಯು ! ಚೀನದ ಸಂಚಿಗೆ ಜಿ 7 ರಾಷ್ಟ್ರಗಳಿಂದ ತಿರುಗುಬಾಣ

thumb pani 4

ಈ ದೇಶದಲ್ಲಿ ಪಾನಿ ಪುರಿಗೆ ನಿಷೇಧ: ಕಾರಣ ಏನು ಗೊತ್ತೇ?

MUST WATCH

udayavani youtube

ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆಯೇರಿದ ಮಗಳು

udayavani youtube

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ : ಸುಟ್ಟು ಕರಕಲಾಯ್ತು ಮನೆ

udayavani youtube

ಭಾಗಮಂಡಲ ಸೇರಿದಂತೆ ವಿವಿಧ ಕಡೆ ಭೂಮಿ ಕಂಪಿಸಿದ ಅನುಭವ

udayavani youtube

ಹುಣಸೂರಿನಲ್ಲಿ ಭೀಕರ ರಸ್ತೆ ಅಪಘಾತ : ಓರ್ವ ಸಾವು, ನಾಲ್ವರ ಸ್ಥಿತಿ ಗಂಭೀರ

udayavani youtube

ಮಣ್ಣೆತ್ತಿನ ಅಮಾವಾಸ್ಯೆ : ಬಸವ ಮೂರ್ತಿಗಳ ಆರಾಧನೆ; ಕೃಷಿಕರ ಮುಂಗಾರಿನ ಮೊದಲ ಹಬ್ಬ

ಹೊಸ ಸೇರ್ಪಡೆ

ಮುಂದಿನ ವಿಧಾನಸಭೆ ಚುನಾವಣೆ: ಸಿದ್ದು-ಡಿಕೆ ಜತೆ ರಾಹುಲ್‌ ಮಹತ್ವದ ಮಾತುಕತೆ

ಮುಂದಿನ ವಿಧಾನಸಭೆ ಚುನಾವಣೆ: ಸಿದ್ದು-ಡಿಕೆ ಜತೆ ರಾಹುಲ್‌ ಮಹತ್ವದ ಮಾತುಕತೆ

ಬೀದಿಗೆ ಬಿದ್ದಿದ್ದ ಸಿದ್ದು ಬಾದಾಮಿಗೆ ಕರೆ ತಂದಿದ್ದು ನಾನೇ: ಸಿ.ಎಂ. ಇಬ್ರಾಹಿಂ

ಬೀದಿಗೆ ಬಿದ್ದಿದ್ದ ಸಿದ್ದು ಬಾದಾಮಿಗೆ ಕರೆ ತಂದಿದ್ದು ನಾನೇ: ಸಿ.ಎಂ. ಇಬ್ರಾಹಿಂ

ಪಿಎನ್‌ಬಿ ಹಗರಣದ ಆರೋಪಿ ನೀರವ್‌ ಮೋದಿಗೆ ಇಬ್ಬರು ಮನೋವೈದ್ಯರಿಂದ ಪರೀಕ್ಷೆ

ಪಿಎನ್‌ಬಿ ಹಗರಣದ ಆರೋಪಿ ನೀರವ್‌ ಮೋದಿಗೆ ಇಬ್ಬರು ಮನೋವೈದ್ಯರಿಂದ ಪರೀಕ್ಷೆ

ಸೌದಿ ರಾಜಮನೆತನಕ್ಕೆ ಪ್ರಧಾನಿ ಮೋದಿ ಸಾಂತ್ವನ

ಸೌದಿ ರಾಜಮನೆತನಕ್ಕೆ ಪ್ರಧಾನಿ ಮೋದಿ ಸಾಂತ್ವನ

ದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್‌ ಕಮಿಷನರ್‌! ವಿಡಿಯೋ ವೈರಲ್‌

ಚಿತ್ರದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್‌ ಕಮಿಷನರ್‌! ವಿಡಿಯೋ ವೈರಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.