ಹೊಸ ಸೌರಮಂಡಲ ಪತ್ತೆ ಹಚ್ಚಿದ ಖಗೋಳ ಸಂಶೋಧಕರೆನಿಸಿರುವ ಟಾಮ್ ಜಾಕೋಬ್ಸ್
Team Udayavani, Jan 18, 2022, 7:45 AM IST
ವಾಷಿಂಗ್ಟನ್: ಅಮೆರಿಕದ ನೌಕಾಪಡೆಯ ಮಾಜಿ ಅಧಿಕಾರಿ, ಹವ್ಯಾಸಿ ಖಗೋಳ ಸಂಶೋಧಕರೆನಿಸಿರುವ ಟಾಮ್ ಜಾಕೋಬ್ಸ್, ಭೂಮಿಯಿಂದ 379 ಜ್ಯೋತಿರ್ವರ್ಷಗಳಷ್ಟು ದೂರವಿರುವ ಹೊಸ ಸೌರಮಂಡಲವೊಂದನ್ನು ಪತ್ತೆ ಹಚ್ಚಿದ್ದಾರೆ.
ನಮ್ಮ ಸೌರಮಂಡಲದ ಸೂರ್ಯನಂತೆಯೇ ಇರುವ ಬೃಹತ್ ನಕ್ಷತ್ರದ ಸುತ್ತಲೂ ಈ ಗ್ರಹ ಸುತ್ತುತ್ತಿದೆ. ಸದ್ಯಕ್ಕೆ ಈ ಗ್ರಹಕ್ಕೆ ಟಿಒಐ-2180 ಬಿ ಎಂದು ಹೆಸರಿಡಲಾಗಿದೆ ಎಂದು ವಾಷಿಂಗ್ಟನ್ ಮೂಲದ ಟಾಮ್ ತಿಳಿಸಿದ್ದಾರೆ.
ಇದು ತನ್ನ ಸೂರ್ಯಕ್ಕೆ ಸನಿಹವಾಗಿದ್ದು, ಸೂರ್ಯನ ಸುತ್ತಲೂ ಪರಿಭ್ರಮಿಸುವುದಕ್ಕೆ 261 ದಿನ ತಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ. ಅವರ ಈ ಸಂಶೋಧನೆ, “ಆ್ಯಸ್ಟ್ರೋನಾಮಿಕಲ್ ಜರ್ನಲ್’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.