ಜರ್ಮನಿಯಲ್ಲಿ ದಂಗೆ ಸಂಚು: 25 ಬಂಧನ
Team Udayavani, Dec 7, 2022, 8:31 PM IST
ಬರ್ಲಿನ್: ಸಶಸ್ತ್ರ ದಂಗೆ ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂಬ ಸುಳಿವಿನ ಹಿನ್ನೆಲೆಯಲ್ಲಿ ಜರ್ಮನಿಯ ವಿವಿಧ ಭಾಗಗಳಲ್ಲಿ ಪೊಲೀಸರು ಬುಧವಾರ ದಾಳಿ ನಡೆಸಿದ್ದಾರೆ.
16 ಪ್ರಾಂತ್ಯಗಳ 130 ಸ್ಥಳಗಳ ಮೇಲೆ ಏಕಕಾಲದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, 71 ವರ್ಷದ ವೃದ್ಧ ಸೇರಿದಂತೆ ಒಟ್ಟು 25 ಮಂದಿಯನ್ನು ಬಂಧಿಸಲಾಗಿದೆ. ರೆಚ್ ಸಿಟಿಜನ್ಸ್ (Reich Citizens )ಎಂಬ ಸಂಘಟನೆಗೆ ಸೇರಿದವರು ಜರ್ಮನಿ ಸದ್ಯ ಹೊಂದಿರುವ ಸಂವಿಧಾನಕ್ಕೆ ಬೆಂಬಲ ನೀಡುತ್ತಿಲ್ಲ.
ಹೀಗಾಗಿ, ಅವರು ಹಾಲಿ ಇರುವ ಸರ್ಕಾರವನ್ನು ಕಿತ್ತೂಗೆಯುವ ಬಗ್ಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಆದರೆ, ಈ ಬಗ್ಗೆ ತನಿಖಾ ಸಂಸ್ಥೆಗಳು ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ.