
ಆಸ್ಟ್ರೇಲಿಯಾದಲ್ಲಿ ಮತ್ತೆ ಹಿಂದೂ ದೇಗುಲ ಧ್ವಂಸ: 2 ತಿಂಗಳ ಅವಧಿಯಲ್ಲಿ ನಡೆದ ನಾಲ್ಕನೇ ಘಟನೆ
Team Udayavani, Mar 4, 2023, 11:58 AM IST

ಬ್ರಿಸ್ಬೇನ್: ಹಿಂದೂ ದೇಗುಲವನ್ನು ಧ್ವಂಸಗೊಳಿಸಿರುವ ಮತ್ತೊಂದು ಪ್ರಕರಣ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ಬೆಳಕಿಗೆ ಬಂದಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ನಡೆದ ನಾಲ್ಕನೇ ಘಟನೆ ಇದಾಗಿದೆ.
ಬ್ರಿಸ್ಬೇನ್‌ನ ದಕ್ಷಿಣ ಭಾಗದಲ್ಲಿರುವ ಬರ್ಬ್ಯಾಂಕ್ ನ ಸೂಬರ್ಬ್ ನಗರದಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನವನ್ನು ಧ್ವಂಸಗೊಳಿಸಿದ್ದು,ಗೋಡೆಗಳ ಮೇಲೆ ಹಿಂದೂ ವಿರೋಧಿ ಬರಹವನ್ನು ಬರೆದಿದ್ದಾರೆ. ಖಲಿಸ್ತಾನಿ ಬೆಂಬಲಿಗರು ಈ ಕೃತ್ಯವನ್ನು ಎಸಗಿದ್ದಾರೆ ಎಂದು ʼಆಸ್ಟ್ರೇಲಿಯಾ ಟುಡೇʼ ವರದಿ ಮಾಡಿದೆ.
ಶನಿವಾರ( ಮಾ.4 ರಂದು) ಮುಂಜಾನೆ ಪ್ರಾರ್ಥನೆಗೆಂದು ಭಕ್ತರು ದೇವಸ್ಥಾನಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಭಕ್ತರು ಹಾಗೂ ದೇವಸ್ಥಾನದ ಆರ್ಚಕರು ನನಗೆ ಕರೆ ಮಾಡಿ ಇದರೆ ಬಗ್ಗೆ ಮಾಹಿತಿ ಕೊಟ್ಟರು. ಈ ಕುರಿತು ಮ್ಯಾನೇಜ್ ಮೆಂಟ್ ನೊಂದಿಗೆ ಸಭೆ ನಡೆಸಿ ಪೊಲೀಸರಿಗೆ ವಿವರವಾಗಿ ಹೇಳಲಿದ್ದೇವೆ ಎಂದು ದೇವಸ್ಥಾನದ ಅಧ್ಯಕ್ಷ ಸತೀಂದರ್ ಶುಕ್ಲಾ ಹೇಳಿದ್ದಾರೆ.
ಇತ್ತೀಚೆಗೆ ಬ್ರಿಸ್ಬೇನ್ ನ ಗಾಯತ್ರಿ ಮಂದಿರಕ್ಕೆ ಖಲಿಸ್ತಾನ್ ದುಷ್ಕರ್ಮಿಗಳು ಬೆದರಿಕೆ ಕರೆಯನ್ನು ಮಾಡಿದ್ದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾದಲ್ಲಿನ ಐತಿಹಾಸಿಕ ಶ್ರೀ ಶಿವ-ವಿಷ್ಣು ದೇಗುಲವನ್ನು ಖಲಿಸ್ತಾನಿ ಪರ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. ಮಿಲ್ ಪಾರ್ಕ್ ಬಳಿಯ ಸ್ವಾಮಿ ನಾರಾಯಣ ದೇಗುಲವನ್ನು ಜ.12ರಂದು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Canada: ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕನ ಹತ್ಯೆ… ಹೊಣೆ ಹೊತ್ತ ಲಾರೆನ್ಸ್ ಬಿಷ್ಣೋಯ್

Burqas Ban: ಹಿಜಾಬ್, ಬುರ್ಖಾಗೆ ನಿಷೇಧ ಹೇರಿದ ಸ್ವಿಟ್ಜರ್ ಲ್ಯಾಂಡ್

Speechless: ಏಡಿ ಖಾದ್ಯಕ್ಕೆ 56,000 ರೂ… ಬಿಲ್ ಕಂಡು ಪೊಲೀಸರಿಗೆ ಕರೆ ಮಾಡಿದ ಮಹಿಳೆ

‘Donald Trump: ಡೊನಾಲ್ಡ್ ಟ್ರಂಪ್ ನಿಧನ… ಟ್ರಂಪ್ ಮಗನ X ಖಾತೆ ಹ್ಯಾಕ್ ಮಾಡಿ ಟ್ವೀಟ್

UNO: ಕಾಶ್ಮೀರ ಶಾಂತಿ ದಕ್ಷಿಣ ಏಷ್ಯಾಕ್ಕೆ ಕ್ಷೇಮ: ಟರ್ಕಿ ಅಧ್ಯಕ್ಷ ಎರ್ಡೋಗನ್ ಉದ್ಧಟತನ
MUST WATCH
ಹೊಸ ಸೇರ್ಪಡೆ

EC tells SC ; ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್ : ಬದಲಾವಣೆ ಮಾಡಲಾಗುತ್ತದೆ

Kishkinda ಅಂಜನಾದ್ರಿ ಹುಂಡಿಯಲ್ಲಿ 43 ದಿನದಲ್ಲಿ 31.77 ಲಕ್ಷ ರೂ.ಸಂಗ್ರಹ

Karwar ಟನಲ್ ಸಂಚಾರಕ್ಕೆ ಮುಕ್ತವಾಗುವುದೆಂದು? ಸುರಕ್ಷತಾ ಪರೀಕ್ಷೆಗೆ ಎಷ್ಟು ದಿನ ಬೇಕು?

Viral Video: ಮೆಕ್ಯಾನಿಕ್, ಡೆಲಿವರಿ ಬಾಯ್ ಆಯ್ತು…ಈಗ ರೈಲ್ವೇ ಸ್ಟೇಷನ್ ಕೂಲಿಯಾದ ರಾಗಾ!

Kushtagi: ಬಸ್ ಹರಿದು ಮಹಿಳೆ ಮೃತ್ಯು