ಭಾರತ ಮೂಲದ ವಿಜ್ಞಾನಿ ವೆಂಕಿಗೆ ಆರ್ಡರ್ ಆಫ್ ಮೆರಿಟ್ ಗೌರವ
Team Udayavani, Nov 13, 2022, 7:15 AM IST
ಲಂಡನ್: ವಿಜ್ಞಾನ ಕ್ಷೇತ್ರದಲ್ಲಿ ನೀಡಿದ ಅನುಪಮ ಸೇವೆಗಾಗಿ ಭಾರತ ಮೂಲದ ವಿಜ್ಞಾನಿ ವೆಂಕಿ ರಾಮಕೃಷ್ಣನ್ ಅವರಿಗೆ ಯುನೈಟೆಡ್ ಕಿಂಗ್‌ಡಮ್‌ನ ಪ್ರತಿಷ್ಠಿತ “ಆರ್ಡರ್ ಆಫ್ ಮೆರಿಟ್’ ಗೌರವವನ್ನು ನೀಡಲಾಗಿದೆ.
ಬ್ರಿಟನ್ ರಾಜಮನೆತನದ ರಾಣಿ ಎರಡನೇ ಎಲಿಜಬೆತ್ ಅವರು ಸೆಪ್ಟೆಂಬರ್‌ನಲ್ಲಿ ನಿಧನರಾಗುವುದಕ್ಕಿಂತ ಮೊದಲೇ ಈ ಬಗ್ಗೆ ಆದೇಶ ಸಿದ್ಧಪಡಿಸಿ ಇರಿಸಿದ್ದರು. ಅದನ್ನು ಯು.ಕೆ.ಯ ಹಾಲಿ ದೊರೆ ಮೂರನೇ ಚಾರ್ಲ್ಸ್ ಅವರು ಬಿಡುಗಡೆಗೊಳಿಸಿದ್ದಾರೆ.
ಸೇನಾಪಡೆ, ವಿಜ್ಞಾನ, ಕಲೆ, ಸಾಹಿತ್ಯ ಅಥವಾ ಸಾಹಿತ್ಯದ ಪ್ರೋತ್ಸಾಹಕ್ಕೆ ಬೆಂಬಲ ನೀಡುವವರಿಗೆ ಈ ಗೌರವ ಪ್ರದಾನ ಮಾಡಲಾಗುತ್ತದೆ.
ತಮಿಳುನಾಡಿನ ಚಿದಂಬರಂನಲ್ಲಿ ಜನಿಸಿದ್ದ ಡಾ. ವೆಂಕಿ ರಾಮಕೃಷ್ಣನ್ ಅವರು ಅಮೆರಿಕದಲ್ಲಿ ಜೀವಶಾಸ್ತ್ರದ ಅಧ್ಯಯನ ಮಾಡಿದ್ದರು. 2009ರಲ್ಲಿ ಅವರಿಗೆ ರಸಾಯನಶಾಸ್ತ್ರದಲ್ಲಿ ನಡೆಸಿದ್ದ ಸಂಶೋಧನೆಗಾಗಿ ನೊಬೆಲ್ ಗೌರವ ಲಭಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿಎಂ ವಿರುದ್ದ ಸ್ಪರ್ಧೆಗೆ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ: ವಿನಯ್ ಕುಲಕರ್ಣಿ
ಮೂಡಿಗೆರೆ : ಪೊಲೀಸರೆದುರೇ ಕೈ-ಕೈ ಮಿಲಾಯಿಸಿದ ಬಿಜೆಪಿಯ ಎರಡು ಬಣ
ಮತ್ತೆ ಬಂಧನ ಭೀತಿ: ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಇಲ್ಲಿದೆ ಐಪಿಎಲ್ -2023 ಕಮೆಂಟೇಟರ್ ಗಳ ಪಟ್ಟಿ: ಬಿಗ್ ಬಾಸ್ ವಿನ್ನರ್ ಈಗ ವೀಕ್ಷಕ ವಿವರಣೆಗಾರ
ದಾಖಲೆಗಳನ್ನು ತೋರಿಸಲಿ; ರಾಹುಲ್ ಗಾಂಧಿಗೆ ಸಾವರ್ಕರ್ ಮೊಮ್ಮಗ ಸವಾಲು