ಟೆಕ್ಸಾಸ್ ಜಡ್ಜ್ ಆಗಿ ಜೂಲಿ ಮ್ಯಾಥ್ಯೂ ಮರು ಆಯ್ಕೆ
Team Udayavani, Jan 4, 2023, 7:25 AM IST
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ನರಾದ ಜೂಲಿ ಎ ಮ್ಯಾಥ್ಯೂ, ಸತತ 2ನೇ ಬಾರಿಗೆ ಅಮೆರಿಕದ ಟೆಕ್ಸಾಸ್ ಪ್ರಾಂತದ ನ್ಯಾಯಮೂರ್ತಿಯಾಗಿ ಆಯ್ಕೆಯಾಗುವ ಮೂಲಕ ಭಾರತದ ಗರಿಮೆಯನ್ನು ಹೆಚ್ಚಿಸಿದ್ದಾರೆ.
ಕೇರಳ ಮೂಲದವರಾದ ಜೂಲಿ, ಶಾಲಾ ದಿನಗಳಲ್ಲೇ ಅಮೆರಿಕಕ್ಕೆ ಕುಟುಂಬ ಸಮೇತ ವಲಸೆಹೋಗಿದ್ದರು. ಅವರು ವಕೀಲೆ ಅಥವಾ ಜಡ್ಜ್ ಆಗಲು ಬಯಸಿದವರೇ ಅಲ್ಲ. ಆದರೆ ಕೆಲವು ವರ್ಷಗಳ ಹಿಂದೆ ತಮ್ಮ ತಂದೆ ಉದ್ದಿಮೆಯಲ್ಲಿ ಅನೇಕ ಕಾನೂನು ಸಮಸ್ಯೆ ಎದುರಿಸಿದಾಗ, ಜೂಲಿ ಅವರಿಗೆ ಕಾನೂನು ಅಧ್ಯಯನದ ಬಗ್ಗೆ ಆಸಕ್ತಿ ಮೂಡಿತ್ತು.
ಹಾಗಾಗಿ ಅಲ್ಲಿಯೇ ತಮ್ಮ ಕಾನೂನು ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು. 15 ವರ್ಷಗಳ ಕಾಲ ವಕೀಲರಾಗಿ ಕಾರ್ಯನಿರ್ವಹಿಸಿದ್ದಲ್ಲದೇ, 4 ವರ್ಷದ ಹಿಂದೆ ಅಮೆರಿಕದ ಟೆಕ್ಸಾಸ್ನಲ್ಲಿ ನ್ಯಾಯಮೂರ್ತಿ ಪಟ್ಟ ಅಲಂಕರಿಸುವ ಮೂಲಕ, ಅಮೆರಿಕದ ನ್ಯಾಯಮೂರ್ತಿ ಪಟ್ಟಕ್ಕೇರಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ಈಗ 2ನೇ ಬಾರಿ ನ್ಯಾಯಮೂರ್ತಿ ಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜೂಲಿ ಅವರ ಈ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು