ಉಸ್ಮಾಗೆ ಭಾರತಕ್ಕೆ ಮರಳಲು ಪಾಕ್ ಕೋರ್ಟ್ ಅನುಮತಿ
Team Udayavani, May 25, 2017, 1:52 AM IST
ಇಸ್ಲಾಮಾಬಾದ್: ಭಾರತಕ್ಕೆ ಹೋಗಲು ಅನುವು ಮಾಡಿ ಎಂದು ಪಾಕಿಸ್ಥಾನದ ಭಾರತೀಯ ಹೈಕಮಿಷನರ್ ಕಚೇರಿಯಲ್ಲೇ ಆಶ್ರಯ ಪಡೆದಿದ್ದ ದೆಹಲಿ ಮಹಿಳೆ ಉಸ್ಮಾಗೆ ತವರಿಗೆ ಮರಳಲು ಇಲ್ಲಿನ ಹೈಕೋರ್ಟ್ ಅನುಮತಿ ನೀಡಿದೆ. ಜೊತೆಗೆ ವಾಘಾ ಗಡಿವರೆಗೂ ಅವರಿಗೆ ರಕ್ಷಣೆ ನೀಡಲು ಪೊಲೀಸರಿಗೆ ಸೂಚಿಸಿದೆ. ಮೇ 3 ರಂದು ಪಾಕಿಸ್ಥಾನದ ತಾಹಿರ್ ಅಲಿ ಇವರನ್ನು ವಿವಾಹವಾಗಿದ್ದರು. ಆದರೆ ತಾಹಿರ್ ಬಂದೂಕು ತೋರಿಸಿ ಮದುವೆಯಾದರು ಎಂದು ಉಸ್ಮಾ ಆರೋಪಿಸಿದ್ದರು. ಜತೆಗೆ ಭಾರತದಲ್ಲಿರುವ ತನ್ನ ಮಗು ಥಾಲಸ್ಸೇಮಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದೆ. ಮಗುವಿಗೆ ನನ್ನ ಅಗತ್ಯವಿರುವುದರಿಂದ ನನಗೆ ಭಾರತಕ್ಕೆ ಮರಳಲು ಅನುಮತಿ ನೀಡಿ ಎಂದು ಅವರು ಕೋರ್ಟ್ಗೆ ಮನವಿ ಸಲ್ಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು