ಅಮೆರಿಕದ ವಿವಿಧ ಸಂಸ್ಥೆಗಳ ಮಾಹಿತಿ ಕದ್ದ ಹ್ಯಾಕರ್ಗಳು
Team Udayavani, Mar 12, 2021, 7:08 AM IST
ವಾಷಿಂಗ್ಟನ್: ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಹ್ಯಾಕರ್ಗಳ ಪಡೆಯೊಂದು ಅಮೆರಿಕದ ವಿವಿಧ ಆಸ್ಪತ್ರೆಗಳು, ಕಂಪೆನಿಗಳು, ಪೊಲೀಸ್ ಇಲಾಖೆ, ಜೈಲುಗಳು ಹಾಗೂ ಶಾಲೆಗಳಲ್ಲಿರುವ ಸುಮಾರು 1.50 ಲಕ್ಷ ಸೆಕ್ಯುರಿಟಿ ಕೆಮರಾಗಳು ಸೆರೆಹಿಡಿದಿರುವ ದೃಶ್ಯಾವಳಿಗಳನ್ನು ಕದ್ದಿರುವುದಾಗಿ ಘೋಷಿಸಿದೆ.
ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿರುವ “ವರ್ಕಾಡಾ ಇಂಕ್’ ಎಂಬ ಸ್ಟಾರ್ಟ್ಅಪ್ ಕಂಪೆನಿಯಲ್ಲಿ ಸಂಗ್ರಹವಾಗಿದ್ದ ದತ್ತಾಂಶಗಳ ಮೂಲಕ ಹೀಗೆ ಸೆಕ್ಯುರಿಟಿ ಕೆಮರಾಗಳ ಮೂಲಕ ಸರ್ವರ್ಗಳಿಗೆ ರವಾನೆಯಾಗುತ್ತಿದ್ದ ದೃಶ್ಯಗಳನ್ನು ಸೋರಿಕೆ ಮಾಡಿರುವುದಾಗಿ ಹ್ಯಾಕರ್ಗಳು ತಿಳಿಸಿದ್ದಾರೆ. ವರ್ಕಾಡಾ ಇನ್ಕಾರ್ಪೋರೆಟ್ ಕಂಪೆನಿ, ವಿವಿಧ ಸಂಸ್ಥೆಗಳಿಗೆ ಸೆಕ್ಯುರಿಟಿ ಕೆಮರಾದ ಹಾರ್ಡ್ವೇರ್ ಹಾಗೂ ಸಾಫ್ಟ್ವೇರ್ ರವಾನಿಸುವ ಕಂಪೆನಿಯಾಗಿದೆ.
ಪ್ರಮುಖ ಕಂಪೆನಿಗಳಾದ ಟೆಸ್ಲಾ, ಕ್ಲೌಡ್ವೇರ್, ವರ್ಕಾಡಾ ಇಂಕ್ ಸೇರಿದಂತೆ ಅನೇಕ ಕಂಪೆನಿಗಳು, ಆಸ್ಪತ್ರೆಗಳು, ಮಹಿಳಾ ಆರೋಗ್ಯ ಕೇಂದ್ರಗಳು, ಮಾನಸಿಕ ಚಿಕಿತ್ಸಾ ಕೇಂದ್ರ ಗಳು, ಕಚೇರಿಗಳ ಒಳಾಂಗಣ, ಅಲ್ಲಿನ ಸಿಬಂದಿ, ಅಲ್ಲಿ ನಡೆಯುವ ಚಟುವಟಿಕೆ ಗಳು ಇತ್ಯಾದಿಗಳೆಲ್ಲವನ್ನೂ ಹ್ಯಾಕರ್ಗಳು ಗಮನಿಸಿರುವುದು ಸ್ಪಷ್ಟವಾಗಿದೆ. ಇದು ಜಗತ್ತಿನ ಇತರ ರಾಷ್ಟ್ರಗಳ ಭದ್ರತಾ ವ್ಯವಸ್ಥೆಗೇ ಧಕ್ಕೆ ತರುವಂಥದ್ದಾಗಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್