ಭೀಕರ ದುರಂತ: ಕರಾಚಿ-ರಾವಲ್ಪಿಂಡಿ ಎಕ್ಸ್ ಪ್ರೆಸ್ ರೈಲು ಬೆಂಕಿಗಾಹುತಿ: 65 ಮಂದಿ ಸಾವು

Team Udayavani, Oct 31, 2019, 11:09 AM IST

ಲಿಯಾಖತ್​ಪುರ: ಪಾಕಿಸ್ತಾನದ ಕರಾಚಿಯಿಂದ ಲಾಹೋರ್​ಗೆ ಸಂಚರಿಸುತ್ತಿದ್ದ ಕರಾಚಿ-ರಾವಲ್ಪಿಂಡಿ ತೇಜ್​ಗಾಮ್ ಎಕ್ಸ್​ಪ್ರೆಸ್​ ರೈಲು ಬೆಂಕಿ ಅನಾಹುತಕ್ಕೀಡಾಗಿದ್ದು, ಕನಿಷ್ಠ 65 ಮಂದಿ  ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವು ಜನರು  ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಲಿಯಾಖತ್​ಪುರಕ್ಕೆ ತಲುಪುತ್ತಿರುವ ವೇಳೆ ಮೂರು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದು ಉಳಿದ ಬೋಗಿಗಳಿಗೂ ಆವರಿಸತೊಡಿಗಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಪಾಕಿಸ್ತಾನ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಯಾಣಿಕರು ಸಾಗಿಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಈ ದುರಂತ ಸಂಭವಿಸಿದೆ ಎಂದು  ಹೇಳಲಾಗುತ್ತಿದೆ. ಒಟ್ಟು ಮೂರು ಬೋಗಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಅದರಲ್ಲಿ 200 ಕ್ಕಿಂತ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು ಎಂಧು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಗಾಯಗೊಂಡವರನ್ನು ಕೂಡಲೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬೆಂಕಿ ನಂದಿಸಿರುವ ಬೋಗಿಗಳಿಂದ ಪ್ರಯಾಣಿಕರ ಶವಗಳನ್ನು ಹೊರತೆಗೆಯಲಾಗುತ್ತಿದೆ.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ