ಲಂಡನ್: ಕೇರಳದ ನರ್ಸ್, ಮಕ್ಕಳ ಹತ್ಯೆ: ಪತಿ ಬಂಧನ
Team Udayavani, Dec 18, 2022, 5:45 AM IST
ಲಂಡನ್: ಕೇರಳದ ಕೊಟ್ಟಾಯಂ ಜಿಲ್ಲೆಯ ಮೂಲದ ಅಂಜು (40) ಮತ್ತು ಆಕೆಯ ಇಬ್ಬರು ಮಕ್ಕಳನ್ನು ಯು.ಕೆ.ಯ ನಾರ್ತಾಂಪ್ಟನ್ನಲ್ಲಿ ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಸಜು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅಂಜು ಹಾಗೂ ಮಕ್ಕಳಿಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ಕೂಡಲೇ ಸ್ಥಳಕ್ಕೆ ತೆರಳಿ ತಾಯಿ-ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದರೂ, ಅವರು ಅಸುನೀಗಿದ್ದಾರೆ ಎಂದು ವೈದ್ಯರು ಪ್ರಕಟಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಕೊಟ್ಟಾಯಂನಲ್ಲಿ ಮಾತನಾಡಿದ ಅಂಜು ಅವರ ತಂದೆ ಅಶೋಕನ್ ಕಳೆದ ವರ್ಷ ಪುತ್ರಿ ಹಾಗೂ ಅಳಿಯ ಲಂಡನ್ಗೆ ತೆರಳಿದ್ದರು. ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಮಾಹಿತಿ ಇಲ್ಲವೆಂದರು.